ಮನೆಯ ನೆಲದಡಿಯೂ ಹಣ ಹೂತಿಟ್ಟಿದ್ದಾರಾ ಕಾಂಗ್ರೆಸ್‌ ಸಂಸದ ಧೀರಜ್ ಸಾಹು? ಸ್ಕ್ಯಾನಿಂಗ್‌ ಯಂತ್ರದ ಶೋಧ

By Kannadaprabha NewsFirst Published Dec 14, 2023, 10:09 AM IST
Highlights

ಸಾಹು ಅವರು ಮನೆಯ ನೆಲದಡಿ ಹಣ ಮತ್ತು ಇನ್ನಿತರ ವಸ್ತುಗಳನ್ನು ಹೂತಿಟ್ಟಿರಬಹುದು ಎಂಬ ಶಂಕೆ ಇದೆ. ಹೀಗಾಗಿ ಅದನ್ನು ಹೊರತೆಗೆಯುವ ಉದ್ದೇಶ ಐಟಿ ಅಧಿಕಾರಿಗಳದ್ದಾಗಿದೆ. ಗ್ರೌಂಡ್‌ ಸ್ಕ್ಯಾನಿಂಗ್‌ ಯಂತ್ರವು ನೆಲದಡಿ ಏನಿದೆ ಎಂಬುದನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಯಂತ್ರ ನಿಯೋಜಿಸಲಾಗಿದೆ.

ರಾಂಚಿ (ಡಿಸೆಂಬರ್ 14, 2023): ಕಾಂಗ್ರೆಸ್ ಸಂಸದ ಧೀರಜ್‌ ಸಾಹು ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ 351 ಕೋಟಿ ರೂ. ನಗದು ಪತ್ತೆ ಮಾಡಿರುವ ಆದಾಯ ತೆರಿಗೆ (ಐಟಿ) ಇಲಾಖೆ, ಈಗ ಅವರ ಜಾರ್ಖಂಡ್‌ನ ರಾಂಚಿ ನಿವಾಸದಲ್ಲಿ ಗ್ರೌಂಡ್ ಸ್ಕ್ಯಾನಿಂಗ್ ರಾಡಾರ್ ಯಂತ್ರವನ್ನು ನಿಯೋಜಿಸಿದೆ.

ಸಾಹು ಅವರು ಮನೆಯ ನೆಲದಡಿ ಹಣ ಮತ್ತು ಇನ್ನಿತರ ವಸ್ತುಗಳನ್ನು ಹೂತಿಟ್ಟಿರಬಹುದು ಎಂಬ ಶಂಕೆ ಇದೆ. ಹೀಗಾಗಿ ಅದನ್ನು ಹೊರತೆಗೆಯುವ ಉದ್ದೇಶ ಐಟಿ ಅಧಿಕಾರಿಗಳದ್ದಾಗಿದೆ. ಗ್ರೌಂಡ್‌ ಸ್ಕ್ಯಾನಿಂಗ್‌ ಯಂತ್ರವು ನೆಲದಡಿ ಏನಿದೆ ಎಂಬುದನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಯಂತ್ರ ನಿಯೋಜಿಸಲಾಗಿದೆ.

Latest Videos

ಇದನ್ನು ಓದಿ: ಕೈ ಸಂಸದ ಸಾಹು ಬಳಿ 350 ಕೋಟಿ ಪತ್ತೆ: ಜನ ಹೇಗೆ ಕಪ್ಪುಹಣ ಸಂಗ್ರಹಿಸ್ತಾರೋ ಅರ್ಥ ಆಗಲ್ಲ ಎಂದಿದ್ದ ಹಳೆ ಟ್ವೀಟ್‌ ವೈರಲ್‌

ಸ್ಯ್ಕಾನಿಂಗ್‌ ಯಂತ್ರವು ಲ್ಯಾಪ್‌ಟಾಪ್ ಪರದೆ ಹೊಂದಿರುವ ಸಾಧನವಾಗಿದೆ. ಅದಕ್ಕೆ ಚಕ್ರ ಕೂಡ ಇದ್ದು, ನಿಯೋಜನೆಯಾದ ಸ್ಥಳದಲ್ಲಿ ಸುತ್ತಾಡಿ ಭೂಮಿಯನ್ನು ಸ್ಕ್ಯಾನ್‌ ಮಾಡುತ್ತದೆ.

ರಾಂಚಿಯಲ್ಲಿರುವ ಈ ಮನೆಯಲ್ಲಿ ಸಾಹು ಅವರ ಅವಿಭಕ್ತ ಕುಟುಂಬ ವಾಸಿಸುತ್ತದೆ. ಇದಕ್ಕೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ತುಕಡಿಯಿಂದ ಕಾವಲು ಕಾಯುತ್ತಿದೆ.
ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ 30 - 34 ಸ್ಥಳಗಳಲ್ಲಿ ಇಲಾಖೆಯಿಂದ ಈವರೆಗೆ 6 ದಿನ ಶೋಧ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 351 ಕೋಟಿ ರೂ. ನಗದು, ಸುಮಾರು ಮೂರು ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನು ಓದಿ: ಲೂಟಿ ಮಾಡಿದ ಪ್ರತಿ ಪೈಸೆಯೂ ವಾಪಸ್: ಇದು ಮೋದಿ ಗ್ಯಾರಂಟಿ; ಕಾಂಗ್ರೆಸ್‌ ಸಂಸದನ ಆಸ್ತಿ ಮೇಲಿನ ದಾಳಿಗೆ ಪ್ರಧಾನಿ ಪ್ರತಿಕ್ರಿಯೆ

click me!