ಡಿ.ಕೆ. ಶಿವಕುಮಾರ್‌ ಆಪ್ತನ ತೆಲಂಗಾಣ ಮನೆ ಮೇಲೆ ಐಟಿ ದಾಳಿ: ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯದಿಂದಲೂ ಶಾಕ್

By Sathish Kumar KH  |  First Published Oct 21, 2023, 4:37 PM IST

ಡಿಸಿಎಂ ಡಿ.ಕೆ. ಶಿವಕುಮಾರ್‌ ಆಪ್ತ ಎಎಂಆರ್‌ ಮಾಲೀಕ ಮಾಹೇಶ್‌ರೆಡ್ಡಿ ಅವರ ತೆಲಂಗಾಣದ ಕಚೇರಿ ಹಾಗೂ ಮನೆಯ ಮೇಲೆ ಐಟಿ ಇಲಾಖೆ ದಾಳಿ ಮಾಡಿದೆ.


ಬೆಂಗಳೂರು (ಅ.21): ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದು, ಈಗಲೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಇದರ ನಡುವೆ ಈಗ ತೆಲಂಗಾಣದಲ್ಲಿರುವ ಡಿ.ಕೆ. ಶಿವಕುಮಾರ್‌ ಆಪ್ತನ ಮನೆ ಮೇಲೂ ಐಟಿ ದಾಳಿ ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಇಲಾಖೆಗಳು ಕರ್ನಾಟಕ ಮಾತ್ರವಲ್ಲದೇ ತೆಲಂಗಾಣದಿಂದಲೂ ಡಿಕೆಶಿ ಶಾಕ್‌ ಕೊಡಲು ಮುಂದಾಗಿದೆ.

ತೆಲಂಗಾಣದಲ್ಲಿ ಡಿ.ಕೆ. ಶಿವಕುಮಾರ್‌ ಆಪ್ತ ಎಎಂಆರ್‌ (AMR) ಕನ್ಟ್ರಕ್ಷನ್‌ನ ಮಹೇಶ್ ರೆಡ್ಡಿ ಕಚೇರಿ, ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. AMR ಗ್ರೂಪ್ಸ್ ಮಾಲೀಕ ಮಹೇಶ್ ರೆಡ್ಡಿ ಒಡೆತನದ ಸಂಸ್ಥೆಗಳು ಹಾಗೂ ಮನೆ ಸೇರಿ ಒಟ್ಟು ಒಟ್ಟು 12 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಕಳೆದ ಮೂರು ದಿನದ ಹಿಂದೆ ಐಟಿ ಇಲಾಖೆಯಿಂದ 3.30 ಕೋಟಿ ರೂ. ನಗದು ಸೀಜ್ ಮಾಡಲಾಗಿತ್ತು. ಇಂದು ಮತ್ತೆ 2.87 ಕೋಟಿ ರೂ. ಹಣ ಸೀಜ್ ಮಾಡಿದ್ದಾರೆ. 

Tap to resize

Latest Videos

ಡಿಸಿಎಂ ಡಿಕೆಶಿವಕುಮಾರ್‌ಗೆ ಬಿಗ್‌ ಶಾಕ್‌: ಅಕ್ರಮ ಆಸ್ತಿ ಪ್ರಕರಣ ಸಿಬಿಐ ತನಿಖೆಗೆ ಮುಂದುವರೆಸಲು ಹೈಕೋರ್ಟ್‌ ಅಸ್ತು

ಇನ್ನು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ಏಕೈಕ ರಾಜ್ಯವಾಗಿರವ ಕರ್ನಾಟಕದ (ಕೆಪಿಸಿಸಿ) ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರೇ ಈಗ ತೆಲಂಗಾಣದ ಚುನಾವಣಾ ಉಸ್ತುವಾರಿಯೂ ಆಗಿದ್ದಾರೆ. ಆದರೆ, ಪಂಚರಾಜ್ಯ ಚುನಾವಣೆ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗವು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ಇಲಾಖೆಗಳಾದ ಸಿಬಿಐ, ಐಟಿ ಇಲಾಖೆಗಳು ಕೂಡ ಹಣ ರವಾನೆಯ ಬಗ್ಗೆ ತೀಕ್ಣವಾಗಿ ಪರಿಶೀಲನೆ ಮಾಡುತ್ತಿದೆ. ಈಗ ಡಿ.ಕೆ.ಶಿವಕುಮಾರ್‌ಗೆ ಅತ್ಯಂತ ನಿಕಟ ಸಂಪರ್ಕ ಹೊಂದಿರುವ ಮಹೇಶ್ ರೆಡ್ಡಿ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು, ಚುನಾವಣಾ ಹಿನ್ನಡೆ ಉಂಟಾಗಬಹುದೇ ಎಂಬ ಮಾತುಗಳು ಹರಿದಾಡುತ್ತಿವೆ.

undefined

ರಾಜ್ಯದಿಂದ ಚುನಾವಣಾ ಕಾರ್ಯಗಳು ಅಥವಾ ಖಾಸಗಿ ಕಾರ್ಯದ ಉದ್ದೇಶದಿಂದ ಡಿ.ಕೆ. ಶಿವಕುಮಾರ್‌ ಅವರು ಹೈದ್ರಾಬಾದ್‌ಗೆ ತೆರಳಿದಾಗ, ಸ್ವತಃ ಮಹೇಶ್ ರೆಡ್ಡಿ ನಿವಾಸದಲ್ಲೇ ವಾಸ್ತವ್ಯ ಹೂಡುವಷ್ಟು ಆಪ್ತರಾಗಿದ್ದಾರೆ. ಮಹೇಶ್‌ರೆಡ್ಡಿ ಮಾಲೀಕತ್ವದ ಎಎಂಆರ್‌ ಗ್ರೂಪ್ಸ್‌ ವತಿಯಿಂದ ಮೈನಿಂಗ್, ಕಟ್ಟಡ ನಿರ್ಮಾಣ, ನೀರಾವರಿ ಕೆಲಸಗಳನ್ನ ಮಾಡಲಾಗುತ್ತದೆ. ಈಗ ಐಟಿ ದಾಳಿಯಿಂದ ಅವರ ಕೈ ಕಟ್ಟಿಹಾಕಿದಂತಾಗಿದೆ.

 ಸಾರಿಗೆ ಇಲಾಖೆಯಿಂದ 8,000 ಹುದ್ದೆ ನೇಮಕಾತಿ, 5,500 ಹೊಸ ಬಸ್‌ ಖರೀದಿಗೆ ಸಿಎಂ ಗ್ರೀನ್ ಸಿಗ್ನಲ್

ಇತ್ತೀಚೆಗೆ ಕರ್ನಾಟಕದಿಂದ ತೆಲಂಗಾಣಕ್ಕೆ ಹಣ ವರ್ಗಾವಣೆ ಮಾಡುವಾಗ ಹಣ ಸೀಜ್ ಮಾಡಲಾಗಿತ್ತು. 3 ಕೋಟಿ ರೂ.ಗಿಂತ ಅಧಿಕ ನಗದು ವಶಪಡಿಸಿಕೊಳ್ಳಲಾಗಿತ್ತು. ಈ ನಗದನ್ನು ಐಟಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಚುನಾವಣಾ ಕಣ್ಗಾವಲು ಕಾರ್ಯಪಡೆಯ ಮಾಹಿತಿ ಆಧಾರದಲ್ಲಿ ಐಟಿ ಇಲಾಖೆಯು ಎಎಂಆರ್ ಸಂಸ್ಥೆಗಳಲ್ಲಿ ಶೋಧ ನಡೆಸುತ್ತಿದೆ. ಬೇರೆ ರಾಜ್ಯಗಳಿಂದ ಹಣ ತಂದು ತೆಲಂಗಾಣದ ರಾಜಕೀಯ ಪಕ್ಷಕ್ಕೆ ನೀಡುತ್ತಿರುವ ಶಂಕೆ ಐಟಿ ಇಲಾಖೆಗೆ ಬಂದಿದೆ. ಈ ಯಾವ ಪಕ್ಷಕ್ಕೆ ಹಣ ತರಲಾಗುತ್ತಿತ್ತು ಎಂಬ ಬಗ್ಗೆ ಐಟಿ ಇಲಾಖೆ ವಿಚಾರಣೆ ನಡೆಸುತ್ತಿದೆ.

click me!