
ಬೆಂಗಳೂರು (ಮೇ.28): ಸಾಮಾನ್ಯವಾಗಿ ಐಟಿ ಕಂಪನಿಯ ಉದ್ಯೋಗಿಗಳಿಗೆ ಶುಕ್ರವಾರ ಅಥವಾ ಸೋಮವಾರ ಅಸ್ವಸ್ಥರಂತೆ ನಟಿಸುವ ಅಭ್ಯಾಸ ಇದ್ದಿರುತ್ತದೆ. ಅದಕ್ಕೆ ಕಾರಣ ವೀಕೆಂಡ್‌ಅನ್ನು ಇನ್ನೊಂದು ದಿನ ವಿಸ್ತರಣೆ ಮಾಡಬಹುದು ಎನ್ನುವ ಆಸೆ. ಆದರೆ, ಕೆಲವೊಮ್ಮೆ ಎಚ್‌ಆರ್‌ಗೆ ಸಿಕ್ಕಿಬೀಳುವ ಅಪಾಯದಿಂದ ಶುಕ್ರವಾರದ ಸಿಕ್ ಲೀವ್ ಕೇಳೋಕೆ ಹೋಗೋದಿಲ್ಲ.
ಆದರೆ, ಇಂದಿನ ಹೈಪರ್ ಸಂಪರ್ಕಿತ ಜಗತ್ತಿನಲ್ಲಿ ಸಿಕ್ ಲೀವ್ ಎಂದು ಸುಳ್ಳು ಹೇಳಿ ವೀಕೆಂಡ್ ಎಂಜಾಯ್ ಮಾಡೋಕೆ ಹೋದರೆ ಅಪಾಯ ತಪ್ಪಿದ್ದಲ್ಲ ಅನ್ನೋದಕ್ಕೆ ಒಂದು ಘಟನೆ ಸಾಕ್ಷಿಯಾಗಿದೆ.
ಇತ್ತೀಚೆಗೆ ರೆಡ್‌ಇಟ್‌ನಲ್ಲಿ ತಮ್ಮ ಘಟನೆಯನ್ನು ಬರೆದುಕೊಂಡಿರುವ ಯೂಸರ್ ಒಬ್ಬರು, ತಮ್ಮ ವೀಕೆಂಡ್ ಪ್ಲ್ಯಾನ್ ಆ ಬಳಿಕ ಎಚ್‌ಆರ್ ಕೈಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡ ಭಯಾನಕ ಕಥೆಯನ್ನು ತಿಳಿಸಿದ್ದಾರೆ. ಸ್ನೇಹಿತರ ಜೊತೆ ಕೂರ್ಗ್‌ಗೆ ವೀಕೆಂಡ್ ಟ್ರಿಪ್ ಹೋಗುವ ಸಲುವಾಗಿ ಶುಕ್ರವಾರ ತಮ್ಮ ಎಚ್‌ಆರ್‌ಗೆ ಹೊಟ್ಟೆನೋವಿನ ಕಾರಣ ನೀಡಿ ರಜೆ ಪಡೆದುಕೊಂಡಿದ್ದರು. ಆದರೆ, ಇನ್ಸ್‌ಟಾಗ್ರಾಮ್ ಖ್ಯಾತಿಯಿಂದಾಗಿ ಅವರು ಎಚ್‌ಆರ್ ಬಳಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.
ನನ್ನ ಪ್ಲ್ಯಾನ್ ಅದ್ಭುತವಾಗಿತ್ತು. ಶುಕ್ರವಾರ ಸಿಕ್ ಲೀವ್ ಹಾಕಿದ್ದೆ. ಕೂರ್ಗ್‌ನಲ್ಲಿ ರಮಣೀಯ ಹೋಮ್‌ಸ್ಟೇ ಅಲ್ಲಿ ನೆಮ್ಮದಿಯ ದಿನ ಕಳೆಯಲು ಬಯಸಿದ್ದೆ. ಸೋಮವಾರ ಏನೂ ಆಗದೇ ಇದ್ದವನಂತೆ ಆಫೀಸ್‌ಗೆ ಬರೋದು ನನ್ನ ಪ್ಲ್ಯಾನ್ ಆಗಿತ್ತು. ಆದರೆ, ಹೋಮ್‌ಸ್ಟೇಯಲ್ಲಿ ನಾವು ಎಂಜಾಯ್ ಮಾಡುತ್ತಿರುವಾಗ ಯಾರದ್ದೂ ರೀಲ್‌ನ ಬ್ಯಾಕ್‌ಗ್ರೌಂಡ್‌ನಲ್ಲಿ ನಾವು ಸೇರಿಕೊಂಡು ಬಿಟ್ಟಿದ್ದೆವು. ಅವರು ಆನಂದದಿಂದ ಡಾನ್ಸ್ ಮಾಡುತ್ತಿದ್ದರೆ, ಅವರೊಂದಿಗೆ ನಾವೂ ಸೇರಿಕೊಂಡೆವು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇನ್ಸ್‌ಟಾಗ್ರಾಮ್‌ನಲ್ಲಿ 13 ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿದ್ದವು. ಆದರೆ, ಇದರಲ್ಲಿ ಟ್ವಿಸ್ಟ್ ಏನೆಂದರೆ, ವೈರಲ್ ವಿಡಿಯೋಗೆ ಅವರು ನನ್ನನ್ನು ಟ್ಯಾಗ್ ಮಾಡಿದ್ದರು ಎಂದು ಬರೆದುಕೊಂಡಿದ್ದಾರೆ.
ಸೋಮವಾರ ಎಚ್‌ಆರ್, ಆ ರೀಲ್‌ನ ಲಿಂಕ್‌ಅನ್ನು ನನಗೆ ಶೇರ್ ಮಾಡಿದರು. 'ಬಹುಶಂ ನಿಮ್ಮ ಹೊಟ್ಟೆ ಸಮಸ್ಯೆ ಈಗ ಬಗೆಹರಿದಿರಬಹುದು' ಎಂದು ಮೆಸೇಜ್ ಕೂಡ ಕಳಿಸಿದ್ದರು.
ಇಷ್ಟೆಲ್ಲಾ ಆದರೂ ನಾನು ಈಗಲೂ ಕಂಪನಿಯ ಉದ್ಯೋಗಿ ಎಂದು ಹೇಳಿದ್ದರೂ, ಅಂದಿನಿಂದ ನನ್ನ ವರ್ಕ್ ಫ್ರಂ ಹೋಮ್ ರಿಕ್ವೆಸ್ಟ್‌ಗಳು ಸ್ವೀಕಾರವಾಗುತ್ತಿಲ್ಲ. ಬಹುಶಃ ಅವರು ನನ್ನ ಮೇಲಿನ ನಂಬಿಕೆ ಕಳೆದುಕೊಂಡಿರಬಹುದು ಎಂದು ಬರೆದಿದ್ದಾರೆ.
ಇನ್ನು ಇವರ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕಾಮೆಂಟ್‌ಗಳು ಬಂದಿವೆ. ಇದು ನಿಜಕ್ಕೂ ತಮಾಷೆಯಾಗಿದೆ ಎಂದಿದ್ದರೆ, ಇದನ್ನು ಓದಿ ನನಗೆ ನಗು ತಡೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ. 'ಸೋಶಿಯಲ್ ಮೀಡಿಯಾ ಟೀಮ್ಸ್, ಟೇಕ್ ನೋಟ್ಸ್..!' ಎಂದು ಮತ್ತೊಬ್ಬರು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ