
ನವದೆಹಲಿ(ಮಾ.02): ತಮಿಳುನಾಡಿನ ಉದ್ಯಮಿಯೊಬ್ಬರಿಂದ 220 ಕೋಟಿ ರು. ಮೊತ್ತದ ಕಪ್ಪುಹಣ ವಶಪಡಿಸಿಕೊಂಡ ಬೆನ್ನಲ್ಲೇ, ತೆರಿಗೆ ಇಲಾಖೆ ಅಧಿಕಾರಿಗಳು ಹೈದರಾಬಾದ್ ಮೂಲದ ಪ್ರಮುಖ ಔಷಧ ತಯಾರಿಕಾ ಸಮೂಹವೊಂದರ ಮೇಲೆ ದಾಳಿ ನಡೆಸಿ 400 ಕೋಟಿ ರು. ಕಾಳಧನ ಪತ್ತೆಹಚ್ಚಿದ್ದಾರೆ. ಫೆ.24ರಂದು 5 ರಾಜ್ಯಗಳ 24 ಸ್ಥಳಗಳ ಮೇಲೆ ದಾಳಿಗಳನ್ನು ಕೈಗೊಳ್ಳಲಾಗಿತ್ತು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸೋಮವಾರ ತಿಳಿಸಿದೆ.
ಔಷಧೀಯ ಪದಾರ್ಥಗಳು ಮತ್ತು ಸೂತ್ರಗಳ ರಚನೆಯಲ್ಲಿ ಮಧ್ಯವರ್ತಿಯಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ದಾಳಿಯ ವೇಳೆ ದಾಖಲೆಗಳು ಇಲ್ಲದೇ ಇಟ್ಟಿದ್ದ 400 ಕೋಟಿ ರು.ಗಿಂತ ಹೆಚ್ಚು ಆದಾಯ ಪತ್ತೆ ಆಗಿದೆ. ತೆರಿಗೆ ಪಾವತಿಸಿದ ಹಣಕ್ಕಿಂತ 350 ಕೋಟಿ ಹೆಚ್ಚುವರಿ ಆದಾಯವನ್ನು ಹೊಂದಿರುವುದು ಸಾಬೀತಾಗಿದೆ. ದಾಳಿಯ ವೇಳೆ 1.66 ಕೋಟಿ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣದಲ್ಲಿ ಭೂಮಿ ಖರೀದಿ ಮಾಡಿರುವುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಂಪನಿಯ ಬಹುತೇಕ ಉತ್ಪನ್ನಗಳು ಅಮೆರಿಕ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತಾಗುತ್ತವೆ ಎಂದು ಸಿಬಿಡಿಟಿ ತಿಳಿಸಿದೆ.
ದಾಳಿ ಬಳಿಕ 350 ಕೋಟಿ ರು. ಕಪ್ಪುಹಣ ಇರುವುದನ್ನು ಕಂಪನಿ ಒಪ್ಪಿಕೊಂಡಿದೆ. ದಾಳಿ ವೇಳೆ ಪೆನ್‌ಡ್ರೈವ್, ಸಾಕಷ್ಟುರಹಸ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸಿಬಿಡಿಟಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ