ISRO ಉಡಾವಣಾ ವಾಹನ ತಯಾರಿಕೆ ಖಾಸಗಿ ವಲಯಕ್ಕೆ? ಕಾಂಗ್ರೆಸ್‌ ಕಿಡಿ, ಬಿಜೆಪಿ ಸಮರ್ಥನೆ

Published : Aug 25, 2026, 07:28 AM IST
ISRO

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇನ್ನು ಮುಂದೆ ಉಡಾವಣಾ ವಾಹನಗಳನ್ನು ತಯಾರಿಸುವುದಿಲ್ಲ, ಬದಲಾಗಿ ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲಿದೆ. ಈ ಉತ್ಪಾದನಾ ಕಾರ್ಯವನ್ನು ಖಾಸಗಿ ವಲಯಕ್ಕೆ ವಹಿಸಿಕೊಡುವ ನಿರ್ಧಾರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನವದೆಹಲಿ: ‘ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಡಾವಣಾ ವಾಹನಗಳ ತಯಾರಿಯನ್ನು ನಿಲ್ಲಿಸಲಿದ್ದು, ಅವುಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಿಕೊಡಲಿದೆ’ ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನೆ ಕೇಂದ್ರದ (ಇನ್‌-ಸ್ಪೇಸ್‌) ಅಧ್ಯಕ್ಷ ಪವನ್‌ ಗೋಯೆಂಕಾ ತಿಳಿಸಿದ್ದಾರೆ. ಇದು ರಾಜಕೀಯ ವಾದ- ಪ್ರತಿವಾದಕ್ಕೆ ಕಾರಣವಾಗಿದೆ.

ಬಿಸಿನೆಸ್‌ ಟುಡೆ ಆಯೋಜಿಸಿದ್ದ ಭಾರತ 100 ಆರ್ಥಿಕ ಶೃಂಗದಲ್ಲಿ ಮಾತನಾಡಿದ ಅವರು, ‘ಇಸ್ರೋ ಸಂಶೋಧನೆ ಮತ್ತು ಅಭಿವೃದ್ಧಿ, ಅತ್ಯಾಧುನಿಕ ತಂತ್ರಜ್ಞಾನಗಳು, ವೈಜ್ಞಾನಿಕ ಕಾರ್ಯಾಚರಣೆಗಳು ಹಾಗೂ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನಹರಿಸಲಿದೆ. ಇಸ್ರೋ ಯಾವುದೇ ಉಡಾವಣಾ ವಾಹನಗಳನ್ನು ತಯಾರಿಸುವುದಿಲ್ಲ. ಆ ಕಾರ್ಯಗಳೆಲ್ಲವನ್ನೂ ಖಾಸಗಿ ವಲಯ ಅಥವಾ ಸಾರ್ವಜನಿಕ ವಲಯದ ಉದ್ಯಮಗಳು ನಿರ್ವಹಿಸಲಿವೆ’ ಎಂದಿದ್ದಾರೆ.

ಖಾಸಗಿ ವಲಯಕ್ಕೆ ವರ್ಗಾವಣೆಯಾಗುವ ನಿರೀಕ್ಷೆ

‘ಈ ಪರಿವರ್ತನೆಯ ಮೊದಲ ಹೆಜ್ಜೆಯಾಗಿ ಈಗಾಗಲೇ ‘ಸ್ಮಾಲ್ ಸ್ಯಾಟಲೈಟ್’ನ ತಂತ್ರಜ್ಞಾನ ಮತ್ತು ಉತ್ಪಾದನಾ ಹಕ್ಕುಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ಗೆ (ಎಚ್‌ಎಎಲ್‌) ಹಸ್ತಾಂತರಿಸಲಾಗಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮತ್ತು ಲಾಂಚ್ ವೆಹಿಕಲ್ ಮಾರ್ಕ್-3ಗಳ (ಎಲ್‌ವಿಎಂ3) ಉತ್ಪಾದನೆಯೂ ಖಾಸಗಿ ವಲಯಕ್ಕೆ ವರ್ಗಾವಣೆಯಾಗುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಕಿಡಿ:

ಗೋಯೆಂಕಾ ಹೇಳಿಕೆಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ‘ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇಸ್ರೋದ ಭವಿಷ್ಯದ ಕುರಿತಾದ ವರದಿಗಳು ಕಳವಳ ಹುಟ್ಟುಹಾಕಿವೆ. ಸರ್ಕಾರ ಇಸ್ರೋವನ್ನು ಉಸಿರುಗಟ್ಟಿಸುತ್ತಿದ್ದು, ಅದರ ಸಾಮರ್ಥ್ಯಗಳನ್ನು ಕುಂದಿಸುತ್ತಿದೆ. ಪರಮಾಣು ಶಕ್ತಿಯ ವಿಷಯದಲ್ಲಿ ಕೈಗೊಂಡಂತೆಯೇ, ಬಾಹ್ಯಾಕಾಶ ವಿಷಯದಲ್ಲೂ ಆಕ್ರಮಣಕಾರಿ ಖಾಸಗೀಕರಣವನ್ನು ಅನುಸರಿಸುತ್ತಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: DRDO: ಚೀನಾ-ಪಾಕಿಸ್ತಾನದ ನಿದ್ದೆಗೆಡಿಸಿದ DRDOನ ಆ ಒಂದು ಹೆಜ್ಜೆ! ಎಂಟ್ರಿಯಾಯ್ತು ದೇಶದ ಅತ್ಯಂತ ಕ್ಷಿಪ್ರ ಹಾಗೂ ಮಾರಕ ಕ್ಷಿಪಣಿ!

ಬಿಜೆಪಿ ಸಮರ್ಥನೆ:

ಕಾಂಗ್ರೆಸ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ, ‘ಸರ್ಕಾರದ ಈ ನಡೆಯು ಇಸ್ರೋದ ಪರಂಪರೆಯನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ ಇದು ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ವಿಸ್ತರಣೆಯಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ISRO ಹೊಸ ಹೆಜ್ಜೆ, ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣದತ್ತ NASA ಹಾದಿಯಲ್ಲಿ ಭಾರತ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ISRO ಉಡಾವಣಾ ವಾಹನ ತಯಾರಿಕೆ ಖಾಸಗಿ ವಲಯಕ್ಕೆ? ಕಾಂಗ್ರೆಸ್‌ ಕಿಡಿ, ಬಿಜೆಪಿ ಸಮರ್ಥನೆ
ಪಿಜ್ಜಾ ಸೈಜ್​ 3 ಇಂಚು ಕಡಿಮೆ ಆದುದಕ್ಕೆ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ ಪರಿಹಾರ! ಕೋರ್ಟ್​ ಆದೇಶ