ಮೋದಿ ಫೋಟೋ, ಭಗವದ್ಗೀತೆ ಇದ್ದ ಉಪಗ್ರಹ ಅಂತರಿಕ್ಷಕ್ಕೆ

By Kannadaprabha News  |  First Published Mar 1, 2021, 7:10 AM IST

ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ, ಭಗವದ್ಗೀತೆಯ ಎಸ್‌ಡಿ ಕಾರ್ಡ್‌ಗಳನ್ನು ಹೊಂದಿರುವ ಉಪಗ್ರಹ, ಬೆಂಗಳೂರಿನ ಪಿಇಎಸ್‌ ಕಾಲೇಜಿನ ಸ್ಯಾಟಲೈಟ್‌ ಸೇರಿದಂತೆ ಒಟ್ಟು 19 ಉಪಗ್ರಹಗಳ ಉಡಾವಣೆ ಮಾಡಲಾಗಿದೆ. 


ಶ್ರೀಹರಿಕೋಟಾ (ಫೆ.01):  ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ, ಭಗವದ್ಗೀತೆಯ ಎಸ್‌ಡಿ ಕಾರ್ಡ್‌ಗಳನ್ನು ಹೊಂದಿರುವ ಉಪಗ್ರಹ, ಬೆಂಗಳೂರಿನ ಪಿಇಎಸ್‌ ಕಾಲೇಜಿನ ಸ್ಯಾಟಲೈಟ್‌ ಸೇರಿದಂತೆ ಒಟ್ಟು 19 ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಪಿಎಸ್‌ಎಲ್‌ವಿ-ಸಿ51 ರಾಕೆಟ್‌  ಯಶಸ್ವಿಯಾಗಿ ಉಡಾವಣೆಗೊಂಡಿದೆ. 

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 10.24ಕ್ಕೆ ರಾಕೆಟ್‌ ನಭಕ್ಕೆ ಹಾರಿ, 17 ನಿಮಿಷಗಳ ನಂತರ ಪೂರ್ವನಿರ್ಧರಿತ ರೀತಿಯಲ್ಲಿ ಒಂದೊಂದಾಗಿ ಎಲ್ಲಾ ಉಪಗ್ರಹಗಳನ್ನೂ ಅವುಗಳ ಕಕ್ಷೆಯಲ್ಲಿ ಯಶಸ್ವಿಯಾಗಿ ಬಿಡುಗಡೆ ಮಾಡಿದೆ. 

Latest Videos

undefined

ಅಂತರಿಕ್ಷ ಸಂಪತ್ತಿನ ರಕ್ಷಣೆಗೆ ಸ್ಟಾರ್‌ವಾರ್‌ ತಂತ್ರಜ್ಞಾನ! ...

ಇದು ಈ ವರ್ಷ ಇಸ್ರೋ ಹಾರಿಸಿದ ಮೊದಲ ರಾಕೆಟ್‌ ಆಗಿದ್ದು, ಬ್ರೆಜಿಲ್‌ನಲ್ಲಿ ಅಮೆಜಾನ್‌ ಕಾಡು ನಾಶವಾಗುತ್ತಿರುವುದರ ಮೇಲೆ ಕಣ್ಣಿಡಲು ಆ ದೇಶ ನೀಡಿದ್ದ ಅಮೇಜಾನಿಯಾ-1 ಉಪಗ್ರಹವನ್ನೂ ಹೊತ್ತೊಯ್ದು ಕಕ್ಷೆಗೆ ಸೇರಿಸಿದೆ. 

click me!