ಮೀನುಗಾರರ ರಕ್ಷಣೆಗೆ ಆಧುನಿಕ ಉಪಕರಣ ಆವಿಷ್ಕರಿಸಿದ ಇಸ್ರೋ: ತುರ್ತು ಸಂದೇಶಕ್ಕೆ ಪ್ರತ್ಯುತ್ತರ ಲಭ್ಯ

By Kannadaprabha NewsFirst Published Jan 18, 2024, 10:32 AM IST
Highlights

ತಿಕೂಲ ಹವಾಮಾನ ಅಥವಾ ಇನ್ನಾವುದೇ ಆಪತ್ತಿನಿಂದಾಗಿ ಸಮುದ್ರದಲ್ಲಿ ಸಿಲುಕುವ ಮೀನುಗಾರರ ರಕ್ಷಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2ನೇ ತಲೆಮಾರಿನ 'ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್‌ಮಿಟರ್' (ಡಾಟ್) ಎಂಬ ಉಪಕರಣ ಅಭಿವೃದ್ಧಿಪಡಿಸಿದೆ.

ಬೆಂಗಳೂರು: ಪ್ರತಿಕೂಲ ಹವಾಮಾನ ಅಥವಾ ಇನ್ನಾವುದೇ ಆಪತ್ತಿನಿಂದಾಗಿ ಸಮುದ್ರದಲ್ಲಿ ಸಿಲುಕುವ ಮೀನುಗಾರರ ರಕ್ಷಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2ನೇ ತಲೆಮಾರಿನ 'ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್‌ಮಿಟರ್' (ಡಾಟ್) ಎಂಬ ಉಪಕರಣ ಅಭಿವೃದ್ಧಿಪಡಿಸಿದೆ.

ಇದನ್ನು ಬಳಸಿ ಮೀನುಗಾರರು ಉಪಗ್ರಹದ ಮೂಲಕ ಸಮುದ್ರದಿಂದ ತುರ್ತು ಸಂದೇಶ ರವಾನಿಸಬಹುದು ಮತ್ತು ಅವರಿಗೆ ತಕ್ಷಣ ಪ್ರತಿಕ್ರಿಯೆ ಲಭಿಸುತ್ತದೆ. ಈಗಾಗಲೇ ಇರುವ ಡಾಟ್ ವ್ಯವಸ್ಥೆಯನ್ನು ಇಸ್ರೋ ಮೇಲ್ದರ್ಜೆಗೇರಿಸಿದೆ. ತಮ್ಮ ಮೊಬೈಲ್‌ನಲ್ಲೇ ಮೀನುಗಾರರು ಸೌಕರ್ಯವನ್ನು ಬಳಸಬಹುದು. 

ಅವರು ಕಳುಹಿಸಿದ ಸಂದೇಶವು ಇಂಡಿಯನ್ ಮಿಷನ್ ಕಂಟ್ರೋಲ್ ಸೆಂಟರ್‌ ಬರುತ್ತದೆ. ಅಲ್ಲಿಂದ ಕರಾವಳಿ ರಕ್ಷಣಾ ಪಡೆಗೆ ಅದನ್ನು ರವಾನಿಸಲಾಗುತ್ತದೆ. ಅವರಿಗೆ ಮೀನುಗಾರರಿರುವ ಸ್ಥಳ ತಿಳಿಯುತ್ತದೆ. ತಕ್ಷಣ ಅವರು ರಕ್ಷಣೆಗೆ ಧಾವಿಸುತ್ತಾರೆ ಎಂದು ಇಸ್ರೋ ತಿಳಿಸಿದೆ. ಇದೇ ವ್ಯವಸ್ಥೆಯನ್ನು ಬಳಸಿ ಮೀನುಗಾರರು ಸುರಕ್ಷಿತ ಸ್ಥಳಕ್ಕೆ ತಾವೇ ತೆರಳುವ ಅಥವಾ ಮರಳಿ ತಮ್ಮ ಸ್ಥಳಕ್ಕೆ ಬರುವ ಅವಕಾಶವೂ ಇದೆ.

ಮಲ್ಪೆ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 8 ಮೀನುಗಾರರ ರಕ್ಷಣೆ

ಮೀನುಗಾರರ ಬಲೆ ಸೇರಿ, ತೀರಕ್ಕೆ ಬಂದ ಅಪರೂಪದ ಅತೀ ವಿಷಕಾರಿ ಸಮುದ್ರ ಹಾವು

 

click me!