ಚಂದ್ರಯಾನ - 4 ಇಳಿಸಲು ಜಾಗ ನಿರ್ಧಾರ : ಇಸ್ರೋ

Kannadaprabha News   | Kannada Prabha
Published : Feb 10, 2026, 04:34 AM IST
ISRO

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-4ರ ಭಾಗವಾಗಿ ಚಂದ್ರನಂಗಳಕ್ಕೆ ಹೋಗಲಿರುವ ಲ್ಯಾಂಡರ್‌ಅನ್ನು ಇಳಿಸಲು ದಕ್ಷಿಣ ಧ್ರುವ ಪ್ರದೇಶದಲ್ಲಿ ಜಾಗವನ್ನು ನಿರ್ಧರಿಸಿದೆ. 2028ರಲ್ಲಿ ಈ ಯೋಜನೆಯನ್ನು ಕೈಗೊಳ್ಳುವುದಾಗಿ ಇಸ್ರೋ ಈಗಾಗಲೇ ಘೋಷಿಸಿದೆ.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-4ರ ಭಾಗವಾಗಿ ಚಂದ್ರನಂಗಳಕ್ಕೆ ಹೋಗಲಿರುವ ಲ್ಯಾಂಡರ್‌ಅನ್ನು ಇಳಿಸಲು ದಕ್ಷಿಣ ಧ್ರುವ ಪ್ರದೇಶದಲ್ಲಿ ಜಾಗವನ್ನು ನಿರ್ಧರಿಸಿದೆ. 2028ರಲ್ಲಿ ಈ ಯೋಜನೆಯನ್ನು ಕೈಗೊಳ್ಳುವುದಾಗಿ ಇಸ್ರೋ ಈಗಾಗಲೇ ಘೋಷಿಸಿದೆ.

‘ಚಂದ್ರನ ಮೇಲಿರುವ ಮಾನ್ಸ್ ಮೌಟನ್‌ ಎಂಬ ಪರ್ವತ

‘ಚಂದ್ರನ ಮೇಲಿರುವ ಮಾನ್ಸ್ ಮೌಟನ್‌ ಎಂಬ ಪರ್ವತದಲ್ಲಿ ಎಂಎಂ1, ಎಂಎಂ3, ಎಂಎಂ4, ಎಂಎಂ5 ಪ್ರದೇಶಗಳು ಇವೆ. ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ ಬಳಸಿ ಇವುಗಳನ್ನು ಪರಿಶೀಲಿಸಲಾಗಿದ್ದು, ಚಂದ್ರಯಾನ-4ರ ಲ್ಯಾಂಡರ್‌ ಇಳಿಯಲು ಎಂಎಂ4 ಹೆಚ್ಚು ಪ್ರಶಸ್ತವಾಗಿದೆ. ಈ ಪ್ರದೇಶದಲ್ಲಿ ಆಪತ್ತುಗಳು ಎದುರಾಗುವ ಸಾಧ್ಯತೆ ಅತಿ ಕಡಿಮೆಯಿದೆ, ನೆಲವು ಕೇವಲ 5 ಡಿಗ್ರಿ ಇಳಿಜಾರಿದೆ, ಸುತ್ತಲ ಪ್ರದೇಶದಿಂದ 5,334 ಮೀಟರ್‌ ಎತ್ತರದಲ್ಲಿದೆ ಹಾಗೂ ಹೆಚ್ಚು ಸೂರ್ಯರಶ್ಮಿ ಬೀಳುವ ಸ್ಥಳವಾಗಿದೆ’ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ. ಚಂದ್ರಯಾನ-4ರ ಭಾಗವಾಗಿ ಪ್ರೊಪಲ್ಷನ್ ಮಾಡ್ಯೂಲ್, ಡಿಸೆಂಡರ್‌ ಮಾಡ್ಯೂಲ್‌, ಆ್ಯಸೆಂಡರ್‌ ಮಾಡ್ಯೂಲ್‌, ಟ್ರಾನ್ಸ್‌ಫರ್‌ ಮಾಡ್ಯೂಲ್‌, ರಿ-ಎಂಟ್ರಿ ಮಾಡ್ಯೂಲ್‌ಗಳು ಉಡಾವಣೆಯಾಗಲಿವೆ.

2023ರ ಆ.23ರಂದು ಚಂದ್ರಯಾನ-3

2023ರ ಆ.23ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಹೋಗಿ ಇಳಿದಿತ್ತು. ಇದರಿಂದ ಭಾರತ, ಆ ಪ್ರದೇಶದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ಮೊದಲ ರಾಷ್ಟ್ರ ಎನಿಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಾಯಕ ಅದ್ನಾನ್‌ ಜತೆ ಭಾಗ್ವತ್‌ ಊಟ : ಕಾಂಗ್ರೆಸ್‌ ಆಕ್ರೋಶ
ಯುಪಿಐ ಮೂಲಕ ಪಿಎಫ್‌ ಪಡೆಯಲು ಹೊಸ ಆ್ಯಪ್