
ನಾಗ್ಪುರ (ಡಿ.30) ಭಾರತದಲ್ಲಿ ಆರ್‌ಎಸ್ಎಸ್ ಕುರಿತು ವಿವಾದ ವಿವಾದಗಳು, ಆರೋಪಗಳು ನಡೆಯುತ್ತಲೇ ಇದೆ. ದೇಶಾದ್ಯಂತ ಆರ್‌ಎಸ್ಎಸ್ 100ನೇ ವರ್ಷಾಚರಣೆ ಆಚರಿಸಿದೆ. ಪಥಸಂಚಲನ ಮೂಲಕ ಆರ್‌ಎಸ್ಎಸ್ ಸಂಭ್ರಮ ಆಚರಿಸಿತ್ತು. ಆದರೆ ಕರ್ನಾಟಕದಲ್ಲಿ ಹಲವೆಡೆ ಆರ್‌ಎಸ್ಎಸ್ ಪಥಸಂಚಲನಕ್ಕೆ ಕಾನೂನು ಹೋರಾಟವೇ ನಡೆದಿತ್ತು. ಇತ್ತೀಚೆಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರ್‌ಎಸ್ಎಸ್ ಹೊಗಳಿ ಬಳಿಕ ಯೂಟರ್ನ್ ಹೊಡೆದಿದ್ದರು. ಇದೀಗ ಆರ್‌ಎಸ್ಎಸ್ ಕಾರ್ಯವೈಖರಿ, ಸಂಘದ ಸೇವೆಗೆ ಇಸ್ರೇಲ್ ಕೌನ್ಸೆಲ್ ಜನರಲ್ ಯಾನಿವ್ ರೆವಾಚ್ ಮನಸೋತಿದ್ದಾರೆ. ಸಂಘದ ಸೇವೆ, ಶಾಖೆಗೆ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.
ಇಸ್ರೇಲ್ ರಾಯಭಾರ ಅಧಿಕಾರಿ ಯಾನಿವ್ ರೆವಾಚ್ ನಾಗ್ಪುರದಲ್ಲಿರುವ ಆರ್‌ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ರೆವಾಚ್, ಆರ್‌ಎಸ್ಎಸ್ ಭಾರತೀಯ ಯುವಕರನ್ನು ತಮ್ಮ ಮೂಲ, ಇತಿಹಾಸ ಹಾಗೂ ಪರಂಪರೆಯೊಂದಿಗೆ ಜೋಡಿಸುತ್ತಿದೆ. ಇದು ಅತ್ಯಂತ ಮಹತ್ವದ ಕೆಲಸ ಎಂದು ರೆವಾಚ್ ಹೇಳಿದ್ದಾರೆ.
ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿರುವುದು ಅತ್ಯವಶ್ಯಕವಾಗಿತ್ತು. ಆರ್‌ಎಸ್ಎಸ್ ಸಂಘದ ಚಟುವಟಿಕೆ, ಶಾಖೆಗಳನ್ನು ಹತ್ತಿರದ ನೋಡಲು ಸಾಧ್ಯವಾಯಿತು. ಯುವ ಸಮೂಹದ ಜೊತೆ ಆರ್‌ಎಸ್ಎಸ್ ಕೆಲಸ ಮಾಡುತ್ತಿದೆ. ಯುವಕರಿಗೆ ತಮ್ಮ ಇತಿಹಾಸ, ನಡೆದು ಬಂದ ಹಾದಿ, ಶ್ರಮ, ಪರಿಶ್ರಮ, ದೇಶದ ಕುರಿತು ಹೆಮ್ಮೆಯ ವಿಚಾರಗಳ ಜೊತೆಗೆ ಜೋಡಿಸುತ್ತಿದೆ. ಇಲ್ಲಿಗೆ ಭೇಟಿ ನೀಡಿರುವುದು ಹೆಚ್ಚು ಖುಷಿ ನೀಡಿದೆ ಎಂದು ರೆವಾಚ್ ಹೇಳಿದ್ದಾರೆ.
ಭಾರತ ಹಾಗೂ ಇಸ್ರೇಲ್ ಉತ್ತಮ ಬಾಂಧವ್ಯ ಹೊಂದಿದೆ. ಹಲವು ದ್ವಿಪಕ್ಷೀಯ ಒಪ್ಪಂದಗಳು, ವ್ಯವಹಾರಗಳ ಮೂಲಕ ಭಾರತ ಇಸ್ರೇಲ್ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ವಿಶೇಷ ಅಂದರೆ ಭಾರತ ಹಾಗೂ ಇಸ್ರೇಲ್ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಇಟ್ಟುಕೊಂಡಿದೆ. ಇಸ್ರೇಲ್ ಗಡಿಯ ಸುತ್ತಲು ಶತ್ರುಗಳ ವಿರುದ್ದ ಹೋರಾಡುತ್ತಿದೆ. ಭಾರತ ತನ್ನ ಗಡಿಯಲ್ಲಿ ಶತ್ರುಗಳ ಜೊತೆ ಹೋರಾಡುತ್ತಿದೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವರೆಗೂ ಇಸ್ರೇಲ್ ಹಾಗೂ ಭಾರತ ಹೋರಾಡಲಿದೆ. ಇದರ ನಡುವೆ ನಮ್ಮ ದೇಶದ ನೆಲ, ಸಂಸ್ಕೃತಿ, ಭಾಷೆ, ಇತಿಹಾಸದ ಕುರಿತ ಅರಿವು ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ ಆರ್‌ಎಸ್ಎಸ್ ಸಮರ್ಥವಾಗಿ ಈ ಕೆಲಸ ಮಾಡುತ್ತಿದೆ ಎಂದು ರೆವಾಚ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ