
ನವದೆಹಲಿ (ಮಾ.7): ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ಗುರುವಾರ ಮತ್ತೊಂದು ಹೇಳಿಕೆಯ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಜಗತ್ತಿಗೆ ಮೊದಲು ಗಣಿತವನ್ನೇ ಪರಿಚಯಿಸಿದ್ದೇ ಇಸ್ಲಾಂ ಧರ್ಮ ಎಂದಿದ್ದಾರೆ. "ಗಣಿತವು ಇಸ್ಲಾಂ ಮೂಲಕ ಬಂದಿದೆ" ಎಂದು ಶಮಾ ಮೊಹಮ್ಮದ್ ಸುದ್ದಿ ಸಂಸ್ಥೆ ANI ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದು ಮಾತ್ರವಲ್ಲದೆ, ಇಸ್ಲಾಂ "ಭವಿಷ್ಯದ ಬಗ್ಗೆ ಯೋಚಿಸುವ ಪ್ರಗತಿಪರ ಮತ್ತು ವೈಜ್ಞಾನಿಕ ಧರ್ಮ" ಎಂದಿದ್ದಾರೆ. ಈ ಹೇಳಿಕೆಗೆ ಭಾರತೀಯ ಜನತಾ ಪಕ್ಷ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಇದೊಂದು ಅಸಂಬದ್ಧ ಹೇಳಿಕೆ ಎಂದಿದೆ. "ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಒಬ್ಬರೇ ಎಲ್ಲಾ ಮೂರ್ಖ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ನಿರ್ಧರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಎಕ್ಸ್‌ನಲ್ಲಿ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ ಬರೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ, ದಢೂತಿ, ಆತ ತಂಡದ ನಾಯಕನಾಗಿರಲು ಅನರ್ಹ ಎಂದು ಶಮಾ ಮೊಹಮ್ಮದ್ ಹೇಳಿದ್ದ ಮಾತು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲಿಯೇ ಶಮಾ ಮತ್ತೊಂದು ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮ ಕುರಿತಾಗಿ ಶಮಾ ಮೊಹಮ್ಮದ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಈ ಕುರಿತಾದ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿತ್ತು.
"ಒಬ್ಬ ಕ್ರೀಡಾಪಟು ಎನಿಸಿಕೊಳ್ಳಲು ರೋಹಿತ್ ಶರ್ಮಾ ಬಹಳ ದಪ್ಪವಾಗಿದ್ದಾರೆ! ತೂಕ ಇಳಿಸಿಕೊಳ್ಳಬೇಕು! ಮತ್ತು ಖಂಡಿತವಾಗಿಯೂ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ," ಎಂದು ಅವರು ಪೋಸ್ಟ್‌ಮಾಡಿದ್ದರು.
ಗುರುವಾರ ಸುದ್ದಿ ಸಂಸ್ಥೆಯೊಂದಿಗಿನ ಸಂವಾದದ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಪವಿತ್ರ ರಂಜಾನ್ ತಿಂಗಳಲ್ಲಿ ರೋಜಾ ಮಾಡದೇ ಇದ್ದ ಕಾರಣಕ್ಕೆ ಆತನನ್ನು "ಅಪರಾಧಿ" ಎಂದು ಕರೆದ ಮುಸ್ಲಿಂ ಧರ್ಮಗುರುವಿನ ಹೇಳಿಕೆಯಿಂದ ಉಂಟಾದ ವಿವಾದದ ಬಗ್ಗೆಯೂ ಮೊಹಮ್ಮದ್ ಪ್ರತಿಕ್ರಿಯಿಸಿದರು.
ಲಾಹೋರ್‌ನಲ್ಲಿ ಭಗವಾನ್ ಶ್ರೀರಾಮನ ಪುತ್ರ 'ಲವ' ಸಮಾಧಿಗೆ ಭೇಟಿ ನೀಡಿದ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ!
"...ಇಸ್ಲಾಂನಲ್ಲಿ, ರಂಜಾನ್ ಸಮಯದಲ್ಲಿ ಬಹಳ ಮುಖ್ಯವಾದ ವಿಷಯವಿದೆ. ನಾವು ಪ್ರಯಾಣಿಸುವಾಗ, ನಾವು (ರೋಜಾ) ಉಪವಾಸ ಮಾಡುವ ಅಗತ್ಯವಿಲ್ಲ, ಆದ್ದರಿಂದ ಮೊಹಮ್ಮದ್ ಶಮಿ ಪ್ರಯಾಣಿಸುತ್ತಿದ್ದಾರೆ. ಅವರು ತಮ್ಮ ಸ್ಥಳದಲ್ಲಿ ಕುಳಿತಿಲ್ಲ. ಅವರು ತುಂಬಾ ಬಾಯಾರಿಕೆಯಾಗುವ ಕ್ರೀಡೆಯನ್ನು ಆಡುತ್ತಿದ್ದಾರೆ. ನೀವು ಕ್ರೀಡೆಯನ್ನು ಆಡುವಾಗ, ನೀವು ಉಪವಾಸ ಮಾಡಬೇಕು ಎಂದು ಯಾರೂ ಒತ್ತಾಯಿಸುವುದಿಲ್ಲ... ನಿಮ್ಮ ಕರ್ಮಗಳು ಬಹಳ ಮುಖ್ಯ. ಅದು (ಇಸ್ಲಾಂ) ಬಹಳ ವೈಜ್ಞಾನಿಕ ಧರ್ಮ..." ಎಂದು ಮೊಹಮ್ಮದ್ ಹೇಳಿದರು.
ಗುರುವಾರ, ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಪಂದ್ಯ ಆಡಲು ಫಿಟ್ ಆಗಿದ್ದರೂ ಶಮಿ ನೀರು ಕುಡಿಯುತ್ತಿರುವುದು ಅವರನ್ನು ನೋಡುತ್ತಿರುವವರಿಗೆ ತಪ್ಪು ಸಂದೇಶವನ್ನು ರವಾನಿಸಿದೆ ಎಂದು ಹೇಳಿದರು. "ಇಸ್ಲಾಂನ ಮೂಲಭೂತ ಕರ್ತವ್ಯಗಳಲ್ಲಿ ಒಂದು ರೋಜಾ (ಉಪವಾಸ). ಯಾವುದೇ ಆರೋಗ್ಯವಂತ ಪುರುಷ ಅಥವಾ ಮಹಿಳೆ ಅದನ್ನು ಆಚರಿಸದಿದ್ದರೆ, ಅವರು ಅಪರಾಧ ಮಾಡುತ್ತಿದ್ದಾರೆ ಎಂದರ್ಥ. ಶರಿಯತ್ ದೃಷ್ಟಿಯಲ್ಲಿ, ಅವರು ಅಪರಾಧಿಗಳು ಮತ್ತು ದೇವರಿಗೆ ಉತ್ತರಿಸಬೇಕಾಗುತ್ತದೆ" ಎಂದು ಅವರು ಹೇಳಿದರು. ಈ ಹೇಳಿಕೆಗಳು ಟೀಕೆಗೆ ಗುರಿಯಾದವು, ಅದರಲ್ಲಿ ಶಿಯಾ ಧರ್ಮಗುರು ಮೌಲಾನಾ ಯಾಸೋಬ್ ಅಬ್ಬಾಸ್ ಕೂಡ ಒಬ್ಬರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ