ಪಾಟ್ನಾ: ಬಿಹಾರದ ಪಾಟ್ನಾದಲ್ಲೊಬ್ಬ ಭಿಕ್ಷುಕ ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿಕೊಂಡಿದ್ದು, ಈತನಿಗೆ ನೀವು ಚಿಲ್ಲರೆ ಇಲ್ಲ ಹೋಗೋ ಅನ್ನುವಂತಿಲ್ಲ ಏಕೆಂದರೆ ಇದಕ್ಕೂ ಈತನ ಬಳಿ ಪರಿಹಾರವಿದೆ. ಕುತ್ತಿಗೆಗೆ ಫೋನ್ ಪೇ ಸ್ಕ್ಯಾನ್ ಕೋಡ್‌ನ್ನು ನೇತು ಹಾಕಿಕೊಂಡೆ ತಿರುಗಾಡುವ ಈತ ಚಿಲ್ಲರೆ ಇಲ್ಲದಿದ್ದರೆ ಫೋನ್ ಪೇ ಮಾಡಿ ಎನ್ನುತ್ತಾನೆ. ಡಿಜಿಟಲ್ ಇಂಡಿಯಾದ ಉದ್ದೇಶವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಈ ಭಿಕ್ಷುಕ ಭಿಕ್ಷೆ ಜನ ಸಾಮಾನ್ಯರನ್ನು ದಂಗು ಬಡಿಸುತ್ತಿರುವುದು ಸುಳ್ಳಲ್ಲ.
40 ವರ್ಷದ ರಾಜು ಪ್ರಸಾದ್ ( Raju Prasad), ಬಿಹಾರದ ( Bihar) ಪಶ್ಚಿಮ ಚಂಪಾರಣ್ ಜಿಲ್ಲೆಯ (West Champaran district) ಬೆಟ್ಟಿಯಾ ಪಟ್ಟಣದ (Bettiah town) ನಿವಾಸಿ. ಈತ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದು, ಚೆಲ್ಲರೆ ನಾಣ್ಯಗಳಿಲ್ಲದಿದ್ದರೆ ಫೋನ್ ಪೇ ಮಾಡಿ ಅಥವಾ ಡಿಜಿಟಲ್ ರೂಪದಲ್ಲಿ ಪಾವತಿಸಿ ಎಂದು ಜನರಲ್ಲಿ ಮನವಿ ಮಾಡುತ್ತಾನೆ. ನಿಮ್ಮಲ್ಲಿ ನಾಣ್ಯಗಳಿಲ್ಲದಿದ್ದರೆ, ಚಿಂತಿಸಬೇಡಿ. ನೀವು eWallet ಮೂಲಕ ನನಗೆ ಹಣ ಪಾವತಿಸಬಹುದು. ಈಗ ನಾನು ಡಿಜಿಟಲ್ ಪಾವತಿಯ ಸೌಲಭ್ಯವನ್ನು ಹೊಂದಿದ್ದೇನೆ ಎಂದು ಪ್ರಸಾದ್ ಅವರು ಚೆಲ್ಲರೆ ಇಲ್ಲ ಎಂದು ಹೇಳಿ ಭಿಕ್ಷೆ ಕೊಡಲು ಹಿಂಜರಿಯುವ ದಾರಿಹೋಕರಿಗೆ ಹೇಳುವುದನ್ನು ಕೇಳಬಹುದು.
Computer Science ಪದವೀಧರೆ ಹೀಗಾಗಿದ್ದು ಹೇಗೆ?: ಭಿಕ್ಷುಕಿಯ ವಿಡಿಯೋ ವೈರಲ್
ಕಳೆದ ಶುಕ್ರವಾರದಿಂದ ಅವರು ಆನ್‌ಲೈನ್ ಪಾವತಿ ವ್ಯವಸ್ಥೆ ಮಾಡಿಕೊಂಡಿದ್ದು, ಮೊದಲ ದಿನ ಅವರು ತಮ್ಮ ಇ ವ್ಯಾಲೆಟ್ ಭಿಕ್ಷಾಟನೆಯಲ್ಲಿ 40 ರೂಪಾಯಿ ನಾಣ್ಯಗಳ ಹೊರತುಪಡಿಸಿ 57 ರೂಪಾಯಿಗಳನ್ನು ಪಡೆದರು. ಪ್ರಸಾದ್ ಅವರು ತಮ್ಮ 10ನೇ ವಯಸ್ಸಿನಿಂದಲೂ ಬೆಟ್ಟಿಯಾ ( Bettiah) ರೈಲು ನಿಲ್ದಾಣದ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 'ಡಿಜಿಟಲ್ ಇಂಡಿಯಾ' ಅಭಿಯಾನದ ಕಟ್ಟಾ ಬೆಂಬಲಿಗರಾಗಿದ್ದ ಪ್ರಸಾದ್ ಅವರು ಡಿಜಿಟಲ್ ಪಾವತಿ ಸೌಲಭ್ಯವನ್ನು ಪಡೆಯಲು ಇತ್ತೀಚೆಗೆ ಬ್ಯಾಂಕ್ ಖಾತೆಯನ್ನು ತೆರೆದಿದ್ದರು.
ನನ್ನ ಬಳಿ ಆಧಾರ್ ಕಾರ್ಡ್ ಇದ್ದರೂ, ಪ್ಯಾನ್ ಕಾರ್ಡ್ ಇರಲಿಲ್ಲ, ಇದು ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆಯನ್ನು ವಿಳಂಬಗೊಳಿಸಿತು. ಈಗ ನಾನು ಭಿಕ್ಷುಕನಾಗಿದ್ದರೂ ಡಿಜಿಟಲ್ ಪಾವತಿಯ ಸೌಲಭ್ಯವನ್ನು ಪಡೆಯುತ್ತಿದ್ದೇನೆ ಎಂದು ಅವರು ಹೆಮ್ಮೆಪಡುತ್ತಾರೆ. ಬೆಟ್ಟಿಯಾ ಪಟ್ಟಣದ ನಿವಾಸಿ ಅವಧೇಶ್ ತಿವಾರಿ (Awadhesh Tiwari) ಮಾತನಾಡಿ, ರಾಜು ಪ್ರಸಾದ್ ಅವರ ತಂದೆ ಪ್ರಭುನಾಥ ಪ್ರಸಾದ್ (Prabhunath Prasad) ಅವರು ತಮ್ಮ ಕುಟುಂಬದೊಂದಿಗೆ ಬೆಟ್ಟಿಯಾ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಅವರು ಹಠಾತ್ ನಿಧನರಾದ ನಂತರ, ಅವರ ಮಗ ರಾಜು ಪ್ರಸಾದ್ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿದರು.
Donation to Temple: ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕಿ, ಶೂ ಎಸೆದವರು ಕರೆದು ಸನ್ಮಾನಿಸಿದರು
ಕಳೆದ ಮೂರು ದಶಕಗಳಿಂದ ಅವರು ಭಿಕ್ಷಾಟನೆ ಮಾಡುತ್ತಿದ್ದಾರೆ. ಸ್ವಲ್ಪ ಸೋಮಾರಿಯಾಗಿದ್ದ ರಾಜು ಪ್ರಸಾದ್ ಭಿಕ್ಷಾಟನೆಯನ್ನು ತಮ್ಮ ಜೀವನೋಪಾಯದ ಮೂಲವಾಗಿ ಅಳವಡಿಸಿಕೊಂಡರು. ಅಲ್ಲದೇ ಜನ ಆತ ಭಿಕ್ಷಾಟನೆ ಮಾಡುವುದನ್ನು ಬೆಂಬಲಿಸುತ್ತಿದ್ದರು ಎಂದು ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ತಿವಾರಿ ಹೇಳಿದರು. ಈ ಹಿಂದೆ ಬೆಟ್ಟಿಯಾದಲ್ಲಿ ನಿಲ್ಲುವ ರೈಲುಗಳ ಪ್ಯಾಂಟ್ರಿ ಕಾರ್‌ನಿಂದ ಉಚಿತ ಆಹಾರ ಪಡೆಯುತ್ತಿದ್ದ ಅವರು ಈಗ ರಸ್ತೆ ಬದಿಯ ಡಾಬಾದಿಂದ ಊಟವನ್ನು ಖರೀದಿಸುತ್ತಾರೆ. ಅಲ್ಲದೇ ಪ್ರಸಾದ್ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೇ ರಾತ್ರಿ ಕಳೆಯುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ