
ನವದೆಹಲಿ: ರಾಹುಲ್ ಗಾಂಧಿ ಅವರ ಆಪ್ತ, ಕಾಂಗ್ರೆಸ್ ಓವರ್‍ಸಿಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ ಎಂಬ ಚರ್ಚೆ ಗುಲ್ಲೆದ್ದಿದೆ. ಅದಕ್ಕೆ ಕಾರಣ, ಅವರ ಇತ್ತೀಚೆಗಿನ ಬೆಳವಣಿಗೆಗಳು. ಹಿರಿಯ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ನೀಡಿದ ಹೇಳಿಕೆ ಈ ಸಂಚಲನಕ್ಕೆ ಕಾರಣವಾಗಿದೆ.
ಸ್ಯಾಮ್ ಪಿತ್ರೋಡಾ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯನ್ನ ಹೊಗಳಿದ್ದರು. ಇದಕ್ಕೆ ಕುಪಿತಗೊಂಡ ಹುಸೇನ್ ದಳವಾಯಿ.. ಸ್ಯಾಮ್ ಪಿತ್ರೋಡಾ ದೇಶದಲ್ಲಿ ವಾಸಿಸುವುದಿಲ್ಲ. ಅವರು ದೇಶದ ಹೊರಗೆ ವಾಸಿಸುತ್ತಾರೆ. ಇಲ್ಲಿನ ಪರಿಸ್ಥಿತಿ ಬಗ್ಗೆ ಅವರಿಗೆ ಹೆಚ್ಚು ತಿಳಿದಿಲ್ಲ. ಅವರು ದಂಗೆಯ ಬಗ್ಗೆ ಯೋಚಿಸುತ್ತಿರಬೇಕು. ಅವರ ತಲೆಯಲ್ಲಿ ಏನು ಓಡುತ್ತಿದೆ ಎಂದು ನನಗೆ ತಿಳಿದಿಲ್ಲ. ಬಿಜೆಪಿ ಸೇರಿದರೂ ಸೇರಬಹುದು ಎಂಬ ಅರ್ಥದಲ್ಲಿ ಅವರು ಮಾತನ್ನಾಡಿದ್ದರು.
ಬೆನ್ನಲ್ಲೇ ಸ್ಯಾಮ್ ಪಿತ್ರೋಡಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಜೋರಾಗಿತ್ತು. ಇದೀಗ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ಬಗ್ಗೆ ಮಾತನ್ನಾಡಿದ್ದಾರೆ. ಹುಸೇನ್ ದಲ್ವಾಯಿ ಹುಚ್ಚರಾಗಿದ್ದಾರೆ. ನಾನು ಯಾವತ್ತೂ ಕಾಂಗ್ರೆಸ್ ಬಿಡೋದಿಲ್ಲ. ಕಾಂಗ್ರೆಸ್ ನನಗೆ ಭಾರತದಲ್ಲಿ ಕೆಲಸ ಮಾಡಲು ಅವಕಾಶ ನೀಡಿತು. ಗಾಂಧೀಜಿ ನನಗೆ ಬದುಕಲು ಒಂದು ಉದ್ದೇಶ ನೀಡಿದರು. ನಾನು ಜ್ಯಾತ್ಯಾತಿತತೆ ನಂಬುತ್ತೇನೆ. ನಾನು ಕಾಂಗ್ರೆಸ್ ಸಿದ್ಧಾಂತದೊಂದಿಗೆ ಹುಟ್ಟಿದ್ದೇನೆ. ದಲ್ವಾಯಿ ಏನು ಯೋಚಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದಿದ್ದರು.
ಮೋದಿ ನನ್ನ ಗುಜರಾತಿ ಸ್ನೇಹಿತ. ನಾನು ಅವರನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುತ್ತೇನೆ. ನಾನು ಮತ್ತು ನನ್ನ ಪತ್ನಿ ಅವರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕ ಮಟ್ಟದಲ್ಲಿ ತುಂಬಾ ಆತ್ಮೀಯರು. ಅತೀವ ಕಾಳಜಿ ವಹಿಸುವಹಿಸುತ್ತಾರೆ. ಅವರು ಉತ್ತಮ ವಾಗ್ಮಿ ಮತ್ತು ಕಠಿಣ ಪರಿಶ್ರಮಿ. ನಮ್ಮ ನಡುವೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಬ್ಬ ಸ್ನೇಹಿತನಾಗಿ ಮತ್ತು ಹಿತೈಷಿಯಾಗಿ ನನಗೆ ಮೋದಿ ಅವರ ವಿರುದ್ಧ ಏನೂ ಇಲ್ಲ. ನಾನು ಗುಜರಾತ್‌ನಲ್ಲಿರುವ ಅವರ ಮನೆಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಆದರೆ ಜಗತ್ತನ್ನು ನೋಡುವ ಅವರ ದೃಷ್ಟಿಕೋನ ಮತ್ತು ಅವರ ಸಿದ್ಧಾಂತದ ಬಗ್ಗೆ ನನಗೆ ಭಿನ್ನಾಭಿಪ್ರಾಯಗಳಿರಬಹುದು. ಅದು ವ್ಯಕ್ತಿಯ ವಿರುದ್ಧವಲ್ಲ, ಬದಲಾಗಿ ಸಿದ್ಧಾಂತದ ವಿರುದ್ಧವಾಗಿದೆ. ಇವೆರಡೂ ಪ್ರತ್ಯೇಕ ವಿಷಯಗಳು. ನಾನು ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಬಹುದು ಮತ್ತು ಅದೇ ಸಮಯದಲ್ಲಿ ಅವರೊಂದಿಗೆ ಕುಳಿತು ಊಟ ಮಾಡಿ, ನಗಬಲ್ಲೆ ಎಂದಿದ್ದರು.
ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ, ಸ್ಯಾಮ್ ಪಿತ್ರೋಡಾಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನ ತಿಳಿಸಿದ್ದರು. ಇದು ಕೆಲವು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು.
Happy Diwali and Nutan Varsh Abhinandan to you Sam Bhai and to Anjana Ben.
Praying for a joyful and healthy year ahead.
Jai Jagannath!
@sampitroda
— Narendra Modi (@narendramodi) November 12, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ