ಪ್ರಮುಖ ಹುದ್ದೆಗಳಿಗೆ ನಿತೀಶ್, ನಾಯ್ಡು ಭಾರಿ ಚೌಕಾಸಿ? ಸ್ಪೀಕರ್ ಹುದ್ದೆ ಮೇಲೇಕೆ ಮಿತ್ರಪಕ್ಷಗಳ ಕಣ್ಣು?

By Anusha KbFirst Published Jun 5, 2024, 4:04 PM IST
Highlights

ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿರುವ ಟಿಡಿಪಿ ಹಾಗೂ ಜೆಡಿಯುನ ನಾಯಕರು ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಸ್ಪೀಕರ್ ಹುದ್ದೆಯೂ ಸೇರಿದಂತೆ ಮಹತ್ವದ ಸಂಪುಟ ಖಾತೆಗಳಿಗಾಗಿ ಬೇಡಿಕೆ ಇರಿಸುವ ಬಹುತೇಕ ಸಾಧ್ಯತೆಗಳಿವೆ ಎಂದು ವರದಿ ಆಗಿದೆ.

ನವದೆಹಲಿ: ಸರಳ ಬಹುಮತವೂ ಇಲ್ಲದೇ ಇದ್ದರೂ ಕೇಂದ್ರದಲ್ಲಿ ಸರ್ಕಾರ ರಚನೆಯ ಪ್ಲಾನ್ ಮಾಡುತ್ತಿರುವ ಇಂಡಿಯಾ ಕೂಟ ತನ್ನ ಮಾಜಿ ಮಿತ್ರರನ್ನು(ನಿತೀಶ್‌ ಕುಮಾರ್, ಚಂದ್ರಬಾಬು ನಾಯ್ಡು) ಸಂಪರ್ಕಿಸುತ್ತಿದೆ ಎಂಬ ವರದಿಗಳ ಮಧ್ಯೆಯೇ ಇತ್ತ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿರುವ ಟಿಡಿಪಿ ಹಾಗೂ ಜೆಡಿಯುನ ನಾಯಕರು ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಸ್ಪೀಕರ್ ಹುದ್ದೆಯೂ ಸೇರಿದಂತೆ ಮಹತ್ವದ ಸಂಪುಟ ಖಾತೆಗಳಿಗಾಗಿ ಬೇಡಿಕೆ ಇರಿಸುವ ಬಹುತೇಕ ಸಾಧ್ಯತೆಗಳಿವೆ ಎಂದು ವರದಿ ಆಗಿದೆ.

ಈ ವರದಿಗಳು ನಿಜವೇ ಆದಲ್ಲಿ ಎನ್‌ಡಿಎಗೆ ಸರ್ಕಾರ ರಚನೆಗೆ ಬೆಂಬಲ ನೀಡುತ್ತಿರುವ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸಂಪುಟದ ಪ್ರಮುಖ ಹುದ್ದೆಗಳಾದ  ರಸ್ತೆ ಸಾರಿಗೆ, ಗ್ರಾಮೀಣಾಭಿವೃದ್ಧಿ, ಜಲಶಕ್ತಿ, ವಸತಿ ಮತ್ತು ನಗರ, ಶಿಕ್ಷಣ ಮತ್ತು ಹಣಕಾಸು ಸಚಿವಾಲಯಗಳಂತಹ ಪ್ರಮುಖ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದು ಅವುಗಳಿಗಾಗಿ ಭಾರಿ ಚೌಕಾಸಿ ಮಾಡುವ ಸಾಧ್ಯತೆ ಇದೆ.

Latest Videos

ಸರ್ಕಾರ ರಚನೆ ಕಸರತ್ತು: ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ನಿತೀಶ್, ತೇಜಸ್ವಿ ಯಾದವ್

ಇವಿಷ್ಟೇ ಅಲ್ಲದೇ ಜೆಡಿಯು ದೇಶಾದ್ಯಂತ ಜಾತಿ ಗಣತಿ ಮಾಡಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. ಇದರ ಜೊತೆಗೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಮನವಿಯನ್ನು ಜೆಡಿಯು ಎನ್‌ಡಿಎ ನಾಯಕರ ಮುಂದಿಡಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ವಕ್ತಾರ ಜೈರಾಮ್ ರಮೇಶ್ ಅವರು ಟ್ವಿಟ್ಟರ್‌ನಲ್ಲಿ  ಪ್ರತಿಕ್ರಿಯಿಸಿದ್ದು, ಜಾತಿ ಗಣತಿಯೂ ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಾಜಿಸುತ್ತದೆ ಎಂದು ಹೇಳುವ ಪ್ರಧಾನಿ ಮೋದಿ ಈಗ ತಮ್ಮ ಹೇಳಿಕೆಯ ಪರ ನಿಲ್ಲುವರೇ ಎಂದು ಪ್ರಶ್ನೆ ಮಾಡಿದ್ದಾರೆ. 

Will Mr. Narendra Modi stand by his statement that the caste census is an attempt to divide the nation in the name of caste? pic.twitter.com/m9VxgvaQz4

— Jairam Ramesh (@Jairam_Ramesh)

 

ಲೋಕಸಭೆ ಸ್ಪೀಕರ್ ಹುದ್ದೆ ಮೇಲೇಕೆ ಮಿತ್ರಪಕ್ಷಗಳ ಕಣ್ಣು?

ಹಾಗೆಯೇ ಲೋಕಸಭೆಯ ಸ್ಪೀಕರ್ ಸ್ಥಾನವನ್ನು ಮೈತ್ರಿಕೂಟದ ಪಾಲುದಾರರಿಗೆ ನೀಡಬೇಕು ಎಂದು ಎರಡೂ ಪಕ್ಷಗಳು ಬಿಜೆಪಿ ನಾಯಕರಿಗೆ ಈಗಾಗಲೇ ತಿಳಿಸಿವೆ ಇಲ್ಲಿ ಸ್ಪೀಕರ್ ಹುದ್ದೆಗೆ ಈ ಮೈತ್ರಿಕೂಟದ ನಾಯಕರು ಏಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬುದೇ ಬಹಳ ಮುಖ್ಯವಾದ ವಿಚಾರ, ಭವಿಷ್ಯದಲ್ಲಿ ಪಕ್ಷಾಂತರವಾಗುವಂತಹ ಸಂದರ್ಭ ಬಂದಲ್ಲಿ ಸ್ಪೀಕರ್ ಪಾತ್ರವೂ ನಿರ್ಣಾಯಕವಾಗಿರುತ್ತದೆ. ಅಲ್ಲದೇ ಭವಿಷ್ಯದಲ್ಲಿ ಸಮ್ಮಿಶ್ರ ಸರ್ಕಾರವೂ ರಚನೆ ಆಗುವ ಸಾಧ್ಯತೆ ಇರುತ್ತದೆ. ಈ ವೇಳೆ ಪಕ್ಷಾಂತರಗೊಂಡವರ ಅಮಾನತು ಮಾಡುವ ಅವರ ಅರ್ಹತೆಯನ್ನು ರದ್ದು ಮಾಡುವ ಅವಕಾಶ ಸ್ಪೀಕರ್‌ಗೆ ಇರುತ್ತದೆ. ಇದೇ ಕಾರಣಕ್ಕೆ ಈ ಉಭಯ ನಾಯಕರು ಲೋಕಸಭೆಯ ಸ್ಪೀಕರ್ ಹುದ್ದೆ ಮೇಲೆ ಭಾರಿ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. 

ಸರ್ಕಾರ ರಚನೆ ಕಸರತ್ತು : ಸಂಜೆ ಉಭಯ ಮೈತ್ರಿಕೂಟಗಳ ಪ್ರತ್ಯೇಕ ಸಭೆ: ಬೆಂಬಲ ಪತ್ರ ನೀಡಲಿರುವ ಮಿತ್ರಪಕ್ಷಗಳು

ಹೀಗೆಲ್ಲಾ ವರದಿಗಳಿದ್ದರೂ ಈ ಎರಡು ಪಕ್ಷಗಳ ನಾಯಕರು ಸಂಜೆ ನಡೆಯುವ ಎನ್‌ಡಿಎ ಸಭೆಯಲ್ಲಿ ಈ ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

 

click me!