India General Election Results 2024: ವಾಟ್ಸ್‌ ಆ್ಯಪ್‌‌ನಲ್ಲಿ ಅತಿ ಹೆಚ್ಚು ಶೇರ್ ಆದ ಮೆಸೇಜ್, ನಿಮಗೂ ಬಂತಾ?

By Roopa HegdeFirst Published Jun 5, 2024, 3:59 PM IST
Highlights

ಲೋಕಸಭೆ ಚುನಾವಣೆ ಇರಲಿ ಇಲ್ಲ ಸಿನಿಮಾ ರಿಲೀಸ್ ಆಗಿರಲಿ, ಜನರು ಮೀಮ್ಸ್ ಮಾಡೋದ್ರಲ್ಲಿ ಬ್ಯುಸಿ ಇರ್ತಾರೆ. ಭಾರತದಲ್ಲಿ ನಡೆದ ಮಹಾಯುದ್ಧದ ನಂತ್ರ ಸಾಕಷ್ಟು ಮೀಮ್ಸ್ ವೈರಲ್ ಆಗ್ತಿದೆ. ಅದ್ರಲ್ಲೊಂದು ಎಲ್ಲರ ಗಮನ ಸೆಳೆದಿದೆ.
 

ಲೋಕಸಭೆ ಚುನಾವಣಾ ಫಲಿತಾಂಶದ ನಂತ್ರ ಗೆಲುವು – ಸೋಲಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೇ ಎಂಟರಂದು ನರೇಂದ್ರ ಮೋದಿ, ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ ಎನ್ನುವ ಸುದ್ದಿ ಇದೆ. ಎನ್‌ಡಿಎ ಗೆಲುವಿನ ನಗೆ ಬೀರಿದ್ದರೂ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಉತ್ತಮ ಪ್ರದರ್ಶನ ನೀಡಿವೆ. ಭಾರತ ಮೈತ್ರಿಕೂಟವು ಎನ್‌ಡಿಎಗೆ ತೀವ್ರ ಪೈಪೋಟಿ ನೀಡಿದ್ದು ಸುಳ್ಳಲ್ಲ. ಚುನಾವಣಾ ಫಲಿತಾಂಶ ಹೊರ ಬರ್ತಿದ್ದಂತೆ ಗೆದ್ದವರು ಪಟಾಕಿ ಹೊಡೆದು ಸಂಭ್ರಮಿಸಿದ್ರೆ ಸೋತವರು, ಸೋಲಿಗೆ ಕಾರಣ ಹುಡುಕೋದ್ರಲ್ಲಿ ನಿರತರಾಗಿದ್ದಾರೆ. ಇತ್ತ ಸಾಮಾಜಿಕ ಜಾಲತಾಣ ಬಳಕೆದಾರರು ಸಂದೇಶ ರವಾನೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಇನ್ಸ್ಟಾಗ್ರಾಮ್ (Instagram), ಫೇಸ್ಬುಕ್, ವಾಟ್ಸ್ ಅಪ್ ನಲ್ಲಿ ಚುನಾವಣೆ (Election) ಗೆ ಸಂಬಂಧಿಸಿದಂತೆ ಗಂಭೀರ ಹಾಗೂ ತಮಾಷೆ ಸಂದೇಶಗಳು ವೈರಲ್ ಆಗ್ತಿವೆ. ಅದ್ರಲ್ಲೊಂದು ಸಂದೇಶ ಎಲ್ಲರ ಗಮನ ಸೆಳೆದಿದೆ. ಚುನಾವಣೆ ಅಂದ್ಮೇಲೆ ಸೋಲು – ಗೆಲುವು ಇದ್ದಿದ್ದೆ. ಆದ್ರೆ ಈ ಬಾರಿ ಗೆದ್ದವರ ಮುಖದಲ್ಲಿ ಮಾತ್ರವಲ್ಲ ಸೋತವರ ಮುಖದಲ್ಲೂ ನಗು ಮೂಡಿದೆ. ಇದಕ್ಕೆ ಕಾರಣ, ಭಾರತ (India) ದ ಮಹಾಜನತೆ ನೀಡಿದ  ತೀರ್ಪು. 

Latest Videos

ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ನಟ ಅನುಪಮ್​ ಖೇರ್​ ನಿಗೂಢ ಪೋಸ್ಟ್​!

ವೈರಲ್ ಆದ ಸಂದೇಶದಲ್ಲಿ ಏನಿದೆ? : ವಾಟ್ಸ್ ಅಪ್ ನಲ್ಲಿ ಈ ಸಂದೇಶ ಹರಿದಾಡುತ್ತಿದೆ. ಈ ಬಾರಿ ಚುನಾವಣೆಯನ್ನು ಮೋಜು, ತಮಾಷೆಯೆಂದು ಅಲ್ಲಿ ಬಿಂಬಿಸಲಾಗಿದೆ. ಬಿಜೆಪಿ ಸರ್ಕಾರ ರಚಿಸುತ್ತಿರುವುದರಿಂದ ಸಂಭ್ರಮಾಚರಣೆಯಲ್ಲಿದೆ ಎಂದು ಬರೆಯಲಾಗಿದೆ. ಬರೀ ಇಷ್ಟೆ ಅಲ್ಲ, ಕಾಂಗ್ರೆಸ್ ಕೂಡ ಸಂಭ್ರಮದಲ್ಲಿದೆ. ಅದಕ್ಕೆ ಕಾರಣ ಕಾಂಗ್ರೆಸ್ ಸೀಟು. ಕಾಂಗ್ರೆಸ್ 100 ಸೀಟು ದಾಟಿದ ಸಂಭ್ರಮದಲ್ಲಿದೆ. ಎಸ್‌ಪಿ, ಆರ್‌ಜೆಡಿ, ತಾವು ಕಳೆದುಕೊಂಡ ಭೂಮಿಯನ್ನು ಮರಳಿ ಪಡೆಯುತ್ತಿರುವುದನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲ, ಇಲ್ಲಿ ತಾವೇ ಬಾಸ್ ಎನ್ನುವ ಕಾರಣಕ್ಕೆ ಎನ್‌ಸಿಪಿ-ಎಸ್‌ಪಿ ಮತ್ತು ಶಿವಸೇನೆ ಸಂತೋಷವಾಗಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ತಮ್ಮ ಪಕ್ಷವನ್ನು ವೈಫಲ್ಯದಿಂದ ಪಾರು ಮಾಡಿದ ಕಾರಣ ಟಿಎಂಸಿ ಸಂತಸಗೊಂಡಿದೆ. ತಮ್ಮ ನೆಚ್ಚಿನ ಪಕ್ಷ ಗೆದ್ದಿರುವುದರಿಂದ ಜನರು ಸಂತಸಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮ್ಮ ಪ್ರಧಾನ ಕಚೇರಿಯಲ್ಲಿ ಒಟ್ಟಿಗೆ ವಿಜಯೋತ್ಸವ ಆಚರಿಸುವುದನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಮೆಸ್ಸೇಜ್ ನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಕೊನೆಯಲ್ಲಿ, ಮುಖ್ಯವಾಗಿ ಚುನಾವಣಾ ಇಲಾಖೆ ಖುಷಿಯಲ್ಲಿದೆ. ಇವಿಎಂ ಮೇಲೆ ಯಾವುದೇ ಆರೋಪವಿಲ್ಲ ಎನ್ನುವುದು ಅದ್ರ ಖುಷಿಗೆ ಕಾರಣವಾಗಿದೆ ಎಂದು ಸಂದೇಶವನ್ನು ನೀವು ಕಾಣಬಹುದು. 

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೀಮ್ಸ್ ಗಳನ್ನು ನೀವು ನೋಡ್ಬಹುದು. ಅಖಿಲೇಶ್ ಯಾದವ್, ನಿತೀಶ್ ಕುಮಾರ್ ಸೇರಿದಂತೆ ಅನೇಕ ನಾಯಕರ ಮೀಮ್ಸ್ ವೇಗವಾಗಿ ಹರಿದಾಡುತ್ತಿದೆ. ಬಾಲಿವುಡ್ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಕೂಡ ಮೀಮ್ಸ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಹನ್ಸಲ್ ಮೆಹ್ತಾ, ನಿತೀಶ್ ಕುಮಾರ್ ಎಲ್ಲರಿಗೂ ಬೇಕು ಎನ್ನುವ ಮೀಮ್ಸ್ ಹಂಚಿಕೊಂಡಿದ್ದಾರೆ. ಇನ್ನೊಂದು ಮೀಮ್ಸ್ ಹಂಚಿಕೊಂಡಿರುವ ಅವರು, ಅದ್ರಲ್ಲಿ ಮೋದಿ, ನಿತೀಶ್ ಕುಮಾರ್ ಅವರಿಗೆ ಫೋನ್ ಮಾಡ್ತಾ ಟೆನ್ಷನ್ ನಲ್ಲಿದ್ದಂತಿದೆ. 

ದರ್ಶನ್ ಸಿನಿಮಾ ನಾಯಕಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲು 

ಸದ್ಯ 2024ರ ಲೋಕಸಭೆ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿ 242 ಲೋಕಸಭಾ ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ 30 ಸ್ಥಾನದ ಅವಶ್ಯಕತೆ ಇದೆ. ಇನ್ನು ಅದರ ಮಿತ್ರಪಕ್ಷಗಳಾದ ಜೆಡಿಯು 12 ಸ್ಥಾನಗಳನ್ನು ಮತ್ತು ಟಿಡಿಪಿ 16 ಸ್ಥಾನಗಳನ್ನು ಗೆದ್ದಿದೆ. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ  ತನ್ನ ಎಲ್ಲಾ ಐದು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚನೆಯಿಂದ ದೂರ ಉಳಿದಿದ್ದು, ಆದರೆ ಎನ್‌ಡಿಎಗೆ ಪೂರ್ಣ ಬಹುಮತ ಸಿಕ್ಕಿದೆ. 

On a lighter note:😇😛
This is a very funny election
1) BJP is celebrating because they are forming Government. 
2) Congress is celebrating because they are crossing 100 seats
3) SP, RJD are celebrating because they got their support back
4) NCP-SP and SS- UBT happy because they showed all that they are boss. 
5) TMC is happy because they saved their party from failing
6) Citizens are happy that the whichever Party they are following are happy. 
Never before seen Congress and BJP both celebrating wins together in their Head quarters😂😂

And Most Importantly......The Election Commission is Celebrating.....that Nobody is making allegations of EVM Manipulations now😀😀😀

 Issi Ko Toh Kehte Hain.....Sabka Saath.....Sabka Vikaas.

Only capitalists are upset because Sensex crashed.

 

click me!