'ಮುಸ್ಲಿಂ ಮುಂಬೈ' ಸೃಷ್ಟಿಸುವ ಪ್ರಯತ್ನ ನಡೆಯುತ್ತಿದ್ದೆಯೇ? ಸಿಎಂ ಫಡ್ನವೀಸ್‌ಗೆ ಬಿಜೆಪಿ ನಾಯಕ ಬರೆದ ಪತ್ರ ಸಂಚಲನ!

Published : Nov 06, 2026, 11:30 AM IST
Kirit somaiah on muslim mubai

ಸಾರಾಂಶ

ಮುಂಬೈನಲ್ಲಿ ಹಿಂದೂ ಮತ್ತು ಮುಸ್ಲಿಂ ಜನನ ಪ್ರಮಾಣದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿರುವ ಅವರು, ಜನಸಂಖ್ಯಾ ಸಮತೋಲನ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ.

ಒಂದು ಕಾಲದಲ್ಲಿ ಮಹಾರಾಷ್ಟ್ರ ಅಥವಾ ಮುಂಬೈ ಅಂದ್ರೆ ಹಿಂದೂ ಸಾಮ್ರಾಜ್ಯವಾಗಿತ್ತು. ಬಾಳಾ ಠಾಕ್ರೆ, ಶಿವಸೇನೆ ಕಾರ್ಯಕರ್ತರು ಹಿಂದೂಗಳ ನೆನಪಾಗುತ್ತಿತ್ತು. ಆದರೆ ಪ್ರಸ್ತುತ ಮುಂಬೈ ಜನಸಂಖ್ಯಾಶಾಸ್ತ್ರ ಮತ್ತು ಧಾರ್ಮಿಕ ಅಂಕಿ-ಅಂಶಗಳ ಬಗ್ಗೆ ಬಿಜೆಪಿ ನಾಯಕನ ಟ್ವೀಟ್ ಒಂದು ದಂಗುಬಡಿಸುವಂತೆ ಮಾಡಿದೆ. ಕಳೆದ ಐದಾರು ವರ್ಷಗಳಲ್ಲೇ ಇಷ್ಟೊಂದು ಜನಸಂಖ್ಯೆ ಬದಲಾವಣೆಯಾದ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಷ್ಟಕ್ಕೂ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಗೆ ಬರೆದ ಪತ್ರದಲ್ಲಿ ಏನಿದೆ?

ಕಳೆದ ಐದಾರು ವರ್ಷಗಳಲ್ಲಿ ಮುಂಬೈ ಜನಸಂಖ್ಯಾಶಾಸ್ತ್ರ, ಧಾರ್ಮಿಕ ಜನನ ಅಂಕಿ-ಅಂಶಗಳ ಬಗ್ಗೆ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ಮುಂಬೈನಲ್ಲಿ ಜನಸಂಖ್ಯಾ ಸಮತೋಲನ ಸಮಿತಿ(Population Balance Committee)' ಸ್ಥಾಪಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಒತ್ತಾಯಿಸಿದ್ದಾರೆ. ಅಲ್ಲದೆ ಮುಂದಿನ ಕೆಲವು ವರ್ಷಗಳಲ್ಲೇ ಮುಂಬೈನ ಗುರುತು, ಜನಸಂಖ್ಯಾ ಸಮತೋಲನ ಬದಲಾಗಬಹುದು ಎಂದು ಎಚ್ಚರಿಸಿದ್ದಾರೆ.

ಕಿರೀತ್ ಸೋಮಯ್ಯ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ ಹೇಳುವುದಾದರೆ ಸದ್ಯ ಮುಂಬೈನಲ್ಲಿ ಐದು ವರ್ಷಗಳಲ್ಲಿ ನಗರದಲ್ಲಿ 336,525 ಹಿಂದೂ ಮಕ್ಕಳು ಜನಿಸಿದ್ದರೆ, ಮುಸ್ಲಿಂ ಮಕ್ಕಳ ಸಂಖ್ಯೆ 220,754 ಇದೆ. ಈ ಅಂಕಿ-ಅಂಶಗಳ ಆಧಾರದ ಮೇಲೆ ಪ್ರತಿ ಮೂರು ಹಿಂದೂ ಮಕ್ಕಳಿಗೆ ಇಬ್ಬರು ಮುಸ್ಲಿಂ ಮಕ್ಕಳ ಜನಿಸುತ್ತಿದ್ದಾರೆ ಎಂಬುದು ಬಿಜೆಪಿ ನಾಯಕನ ಕಳವಳವಾಗಿದೆ.

ಮುಖ್ಯಮಂತ್ರಿ ಫಡ್ನಾವೀಸ್‌ಗೆ ಬರೆದ ಪತ್ರದಲ್ಲೇನಿದೆ?

ಮುಂಬೈನಲ್ಲಿ ಆಗುತ್ತಿರುವ ಜನಸಂಖ್ಯಾ ಬದಲಾವಣೆ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರಿಗೆ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಪತ್ರ ಬರೆದಿದ್ದ, ಅದರಲ್ಲಿ ಮುಂಬೈ ಜನಸಂಖ್ಯಾ ಬೆಳವಣಿಗೆಯ ದತ್ತಾಂಶವನ್ನು ಪರಿಶೀಲಿಸುವಂತೆ ಹಾಗೂ ಜನಸಂಖ್ಯಾ ಸಮತೋಲನ ಸಮಿತಿ ಸ್ಥಾಪಿಸುವಂತೆ ಕೋರಿದ್ದಾರೆ. ಅಂತಹ ಸಮಿತಿ ರಚಿಸುವುದರಿಂದ ಮುಂಬೈ ನಗರದ ಧಾರ್ಮಿಕ ಜನಸಂಖ್ಯಾಶಾಸ್ತ್ರವನ್ನು ಅಧ್ಯಯನ ಮಾಡಬಹುದು, ಜನಸಂಖ್ಯಾ ಬದಲಾವಣೆಯ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಸರ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ

'ಮುಸ್ಲಿಂ ಮುಂಬೈ' ಆಗುವ ಭಯ

ಕಿರೀತ್ ಸೋಮಯ್ಯ ಮುಂಬೈ ಬಗ್ಗೆ ಜನಸಂಖ್ಯಾ ಬೆಳವಣಿಗೆ ಬಗ್ಗೆ ಮಾತನಾಡುತ್ತಾ, ಈಗಿನ ಅಂಕಿಅಂಶಗಳನ್ನು ಗಮನಿಸಿದರೆ ಇನ್ನು ಕೆಲವು ವರ್ಷಗಳಲ್ಲೇ 'ಮುಸ್ಲಿಂ ಮುಂಬೈ ಆಗಬಹುದು. ಆ ರೀತಿ ಆಗದಂತೆ ಮುಂಬೈಯನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ. ಕಿರೀಟ್ ಸೋಮಯ್ಯ ಅವರ ಧರ್ಮದ ಆಧಾರದ ಮೇಲೆ ಜನಸಂಖ್ಯಾ ಮತ್ತು ಜನನ ಅಂಕಿ-ಅಂಶಗಳ ಹೇಳಿಕೆಯು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅವರ ಬೇಡಿಕೆಯನ್ನ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ, ಜನಸಂಖ್ಯಾ ನಿಯಂತ್ರಣಕ್ಕೆ ಸಮಿತಿ ರಚಿಸುತ್ತದಾ? ತೀವ್ರ ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಭಾರತದ ಮೂರು ಐತಿಹಾಸಿಕ ಕೃತಿಗಳು UNESCO ಪಟ್ಟಿಗೆ ಸೇರ್ಪಡೆ!
Success story: ಎಂಜಿನಿಯರಿಂಗ್ ಇಲ್ಲ, ವರ್ಕ್‌ಶಾಪ್ ಇಲ್ಲ: 1 ಲಕ್ಷ ರೂ.ಗೆ ಸೋಲಾರ್ ವಾಹನ ನಿರ್ಮಿಸಿದ 17ರ ಬಾಲಕ!