Indian Railways Update: July 18ರಂದು 160 ರೈಲುಗಳ ಸಂಚಾರ ಸ್ಥಗಿತಗೊಳಿಸಿದ IRCTC

Published : Jul 18, 2022, 12:48 PM IST
Indian Railways Update: July 18ರಂದು 160 ರೈಲುಗಳ ಸಂಚಾರ ಸ್ಥಗಿತಗೊಳಿಸಿದ IRCTC

ಸಾರಾಂಶ

Indian Railway Update: ಭಾರತೀಯ ರೈಲ್ವೆ ಇಲಾಖೆ ಜುಲೈ 18ರಂದು 160 ರೈಲುಗಳನ್ನು ಕ್ಯಾನ್ಸಲ್‌ ಮಾಡಿದೆ. ಮೇಂಟೆನೆನ್ಸ್‌ ಮತ್ತು ಕೆಲವು ಇತರೆ ಕಾರಣಗಳನ್ನು ನೀಡಿ ರೈಲುಗಳನ್ನು ಕ್ಯಾನ್ಸಲ್‌ ಮಾಡಲಾಗಿದೆ. 

IRCTC Update: ಭಾರತೀಯ ರೈಲ್ವೆ ಇಲಾಖೆ ಇಂದು 160 ರೈಲುಗಳನ್ನು ನಿರ್ವಹಣಾ ಕಾರ್ಯ ಮತ್ತು ಕಾರ್ಯಾಚರಣೆಯ ಕಾರಣಗಳನ್ನು ನೀಡಿ ಸಂಚಾರ ನಿಲ್ಲಿಸಿದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಇದರಿಂದ ಭಾರೀ ಸಂಚಾರ ವ್ಯತ್ಯಯವಾಗಲಿದೆ. ಈ ಹಿಂದೆಯೇ ಟಿಕೆಟ್‌ ಬುಕ್‌ ಮಾಡಿರುವವರು ಟ್ರೈನ್‌ನ ಸ್ಟೇಟಸ್‌ ಪರೀಕ್ಷಿಸಿದ ನಂತರ ಪ್ರಯಾಣಕ್ಕೆ ಮುಂದಾಗಬೇಕು ಎಂದು ಇಲಾಖೆ ಮನವಿ ಮಾಡಿದೆ. ಇದಲ್ಲದೇ ಇನ್ನೂ 22 ಹೆಚ್ಚುವರಿ ರೈಲುಗಳನ್ನು ಮತ್ತು 22 ಇತರೆ ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಕರ್ನಾಟಕ, ದೆಹಲಿ, ಜಾರ್ಖಂಡ್‌, ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ್‌, ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂನ ರೈಲು ಸೇವೆಯಲ್ಲಿ ಇದರಿಂದ ವ್ಯತ್ಯಾಸವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. 

ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಈ ನಿಯಮಗಳ ಅರಿವಿರಲಿ:

169 ವರ್ಷಗಳ ಹಿಂದೆ ತನ್ನ ಸೇವೆಯನ್ನು ಪ್ರಾರಂಭಿಸಿದ ಭಾರತೀಯ ರೈಲ್ವೆ (Indian Railway), ದೇಶದ ಜನಸಾಮಾನ್ಯರ ಪಾಲಿಗೆ ಅತ್ಯುತ್ತಮ ಮತ್ತು ಉಪಯುಕ್ತವಾದ ಆರ್ಥಿಕ ಸಾರಿಗೆ ವಿಧಾನವೆಂದು ಪರಿಗಣಿಸಲಾಗಿದೆ. ಅದರ 1,15,000 ಕಿಮೀ ಉದ್ದದ ಹಳಿಯೊಂದಿಗೆ, ಇದು ಏಷ್ಯಾದ (Asia) ಅತಿದೊಡ್ಡ ರೈಲು ಜಾಲವಾಗಿದೆ. ಸುಮಾರು 23 ಮಿಲಿಯನ್ ಪ್ರಯಾಣಿಕರು (Passengers) ಪ್ರತಿದಿನ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ ಎಂಬುದು ಬಹಿರಂಗಗೊಂಡಿದೆ. ಇದು ಆಸ್ಟ್ರೇಲಿಯಾದ ಜನಸಂಖ್ಯೆಗೆ ಸಮಾನವಾಗಿದೆ. ಆದರೆ ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ಅದೆಷ್ಟೋ ಮಂದಿ ರೈಲಿನ ಕೆಲವೊಂದು ಪ್ರಮುಖ ನಿಯಮಗಳ ಬಗ್ಗೆ ಗೊತ್ತೇ ಇಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಭಾರತದ ಅತ್ಯಂತ ಐಷಾರಾಮಿ ರೈಲುಗಳು ಮತ್ತು ಅದರ ದರಗಳು

ಮಧ್ಯದ ಬರ್ತ್ ನಿವಾಸಿಗಳಿಗೆ ಮಲಗುವ ಸಮಯ: ಮಿಡಲ್‌ ಬರ್ತ್ ಸೀಟುಗಳನ್ನು ನಿಗದಿಪಡಿಸಿದ ಪ್ರಯಾಣಿಕರು ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಮಲಗುವ ಸಮಯವನ್ನು ಮೀರಿ ಬರ್ತ್‌ನಲ್ಲಿ ಹಾಗೆಯೇ ಮಲಗಲು ಸಾಧ್ಯವಿಲ್ಲ.ಮಲಗುವ ಸಮಯ ಮುಗಿದ ನಂತರ, ಸಹ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಮಧ್ಯದ ಬರ್ತ್ ಅನ್ನು ಇಳಿಸಬೇಕು.

ಮುಂದಿನ 2 ನಿಲ್ದಾಣಗಳಿಂದ ರೈಲನ್ನು ಹತ್ತಬಹುದು: ಪ್ರಯಾಣಿಕರು ಬೋರ್ಡಿಂಗ್ ಸ್ಟೇಷನ್‌ನಲ್ಲಿ ತಮ್ಮ ರೈಲನ್ನು ಮಿಸ್ ಮಾಡಿಕೊಂಡರೆ, ಅವರು ಕಾಯ್ದಿರಿಸಿದ ಸೀಟುಗಳನ್ನು ಪಡೆಯಲು ಇನ್ನೂ ಅವಕಾಶವಿದೆ. TTEಗೆ ಪ್ರಯಾಣಿಕರ ಆಸನವನ್ನು ಇತರರಿಗೆ ಕನಿಷ್ಠ ಒಂದು ಗಂಟೆಯವರೆಗೆ ಅಥವಾ  ಮುಂದಿನ ಎರಡು ನಿಲ್ದಾಣಗಳನ್ನು ಹಾದು ಹೋಗುವವರೆಗೂ ಯಾರಿಗೂ ಕೊಡುವಂತಿಲ್ಲ. ಎರಡನೇ ನಿಲ್ದಾಣದ ಆಚೆಗೆ, ಯಾವುದೇ RAC/WL ಪ್ರಯಾಣಿಕರಿಗೆ ಆಸನಗಳನ್ನು ರೈಲ್ವೇ ಟಿಕೆಟ್ ವಿಚಾರಕರು ಕೊಡಬಹುದಾಗಿದೆ.

ಅಲ್ಪಾವಧಿಯ ಮಾರ್ಗಗಳಿಗೆ ಪೂರ್ಣ ಮರುಪಾವತಿ ಪಡೆಯಿರಿ: ನೈಸರ್ಗಿಕ ವಿಕೋಪಗಳು, ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ರೈಲು ಪ್ರಯಾಣವು ಅಲ್ಪಾವಧಿಗೆ ಕೊನೆಗೊಳ್ಳುತ್ತದೆ. ರೈಲ್ವೇಗಳು ಬ್ಯಾಕಪ್ ವ್ಯವಸ್ಥೆಯನ್ನು ಹೊಂದಿಲ್ಲದಿದ್ದರೆ, ಅವರು ನಿಮಗೆ ಸಂಪೂರ್ಣ ಶುಲ್ಕವನ್ನು ಮರುಪಾವತಿಸುತ್ತಾರೆ. ಆದರೆ, ನೀವು ಪರ್ಯಾಯ ರೈಲಿನಲ್ಲಿ ಹೋಗಲು ಸಿದ್ಧರಿಲ್ಲದಿದ್ದರೆ, ಪ್ರಯಾಣಿಸಿದ ವಿಭಾಗದ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಸ್ಟೇಷನ್ ಮಾಸ್ಟರ್‌ಗೆ ಟಿಕೆಟ್ ಹಸ್ತಾಂತರಿಸಿದ ನಂತರ ಉಳಿದ ಬಾಕಿಯನ್ನು ಮರುಪಾವತಿಸಲಾಗುತ್ತದೆ.

ಇದನ್ನೂ ಓದಿ: ಮಳೆಗಾಲ ಆರಂಭವಾಯ್ತು, ವಿಸ್ಟಾಡೋಮ್‌ನ ರೈಲಿಗೆ ಭಾರೀ ಬೇಡಿಕೆ..!

ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ MRP: 1989ರ ರೈಲ್ವೇ ಕಾಯಿದೆಯ ಪ್ರಕಾರ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಅಧಿಕೃತ ಮಾರಾಟಗಾರರು ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳು, ಪಾನೀಯಗಳು ಅಥವಾ ನೀರಿನ ಬಾಟಲಿಗಳನ್ನು MRPಗಿಂತ ಹೆಚ್ಚಿನದನ್ನು ಮಾರಾಟ ಮಾಡುವಂತಿಲ್ಲ. ಹೀಗೆ ಮಾರಾಟ ಮಾಡಿದ್ದೇ ಆದಲ್ಲಿ ಅದು ಅಪರಾಧವಾಗಿದೆ. ಯಾರಾದರೂ ಹಾಗೆ ಮಾಡುತ್ತಿರುವುದನ್ನು ನೀವು ಕಂಡುಕೊಂಡರೆ, ತಕ್ಷಣವೇ ರೈಲ್ವೆಯ ಟೋಲ್-ಫ್ರೀ ಸಂಖ್ಯೆಗಳಾದ 139 ಅಥವಾ 1800111321 ಗೆ ದೂರು ದಾಖಲಿಸಬಹುದು. ಮಾರಾಟಗಾರನಿಗೆ ಭಾರೀ ದಂಡವನ್ನು ವಿಧಿಸಲಾಗುತ್ತದೆ ಮತ್ತು ಅವನ ಪರವಾನಗಿಯನ್ನು ರದ್ದುಗೊಳಿಸಬಹುದು.

ರಾತ್ರಿ 10 ಗಂಟೆಯ ನಂತರ ಟಿಟಿಇಗಳು ತೊಂದರೆ ನೀಡುವಂತಿಲ್ಲ:  ಪ್ರಯಾಣದ ಸಮಯದಲ್ಲಿ, ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (TTE) ಟಿಕೆಟ್ ಪರಿಶೀಲಿಸಲು ಬರುತ್ತಾರೆ. ಆದರೆ ಅವರೂ ಸಹ ಯಾವಾಗ ಬೇಕಾದರೂ ಬಂದು ಹಾಗೆ ಟಿಕೆಟ್ ಚೆಕ್ ಮಾಡುವಂತಿಲ್ಲ. ಅಂದರೆ, ಕೆಲವೊಮ್ಮೆ ಟಿಟಿಇ ರಾತ್ರಿ ಪ್ರಯಾಣಿಕರು ಮಲಗಿದ ಮೇಲೆ ಬಂದು ಪ್ರಯಾಣಿಕರನ್ನು ಎಬ್ಬಿಸಿ ಟಿಕೆಟ್ ಮತ್ತು ಐಡಿಯನ್ನು ಪರಿಶೀಲಿಸುತ್ತಾರೆ. ಆದರೆ, ಭಾರತೀಯ ರೈಲ್ವೇ ಟಿಕೆಟ್ ತಪಾಸಣೆ ನಿಯಮಗಳ ಪ್ರಕಾರ ರಾತ್ರಿ 10ಗಂಟೆ ಬಳಿಕ ಟಿಟಿಇ ಬಂದು ನಿಮ್ಮ ಟಿಕೆಟ್ ಪರಿಶೀಲಿಸುವಂತಿಲ್ಲ. ಟಿಟಿಇ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಟಿಕೆಟ್‌ಗಳನ್ನು ಪರಿಶೀಲಿಸಬೇಕಾಗುತ್ತದೆ.  ಆದರೆ ರಾತ್ರಿ 10ಗಂಟೆ ನಂತರ ಪ್ರಯಾಣ ಆರಂಭಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ

ರೈಲಿನಲ್ಲಿರುವ ಕ್ಲೀನ್ ಇಲ್ಲದ ವಾಶ್‌ರೂಮ್‌ಗಳ ಬಗ್ಗೆ cleanmycoach.comನಲ್ಲಿ ದೂರು ನೀಡಬಹುದು. ನಿಮಗೆ ಸೇವೆ ಸಲ್ಲಿಸಲು ಮುಂದಿನ ನಿಲ್ದಾಣದಲ್ಲಿ ನಿರ್ವಹಣಾ ತಂಡ ಸಿದ್ಧವಾಗಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ