*ತ್ರಿಪುರಾ ಹಿಂಸಾಚಾರವನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳ ರ್ಯಾಲಿ!
*ರ್ಯಾಲಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರಿಂದ ಬಂದ್
*ಬಂದ್ ಸಂದರ್ಭದಲ್ಲಿ ಅಂಗಡಿಗಳ ಮೇಲೆ ಕಲ್ಲು ತೂರಾಟ!
*ವದಂತಿಗಳು ಹರಡುವುದನ್ನು ತಡೆಯಲು ಮೂರು ದಿನ ಇಂಟರ್ನೆಟ್ ಸ್ಥಗಿತ
ಅಮರಾವತಿ(ನ.13): ಬಂದ್ ವೇಳೆ ಹೊಸ ಹಿಂಸಾಚಾರಕ್ಕೆ ಸಾಕ್ಷಿಯಾದ ಮಹಾರಾಷ್ಟ್ರದ ಅಮರಾವತಿ (Amravat) ನಗರದಲ್ಲಿ ಶನಿವಾರ ಇಂಟರ್ನೆಟ್ (Internet) ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ನಾಲ್ಕು ದಿನಗಳ ಕರ್ಫ್ಯೂ (Curfew) ವಿಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತ್ರಿಪುರಾದಲ್ಲಿ (Tripura) ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ ಶುಕ್ರವಾರ ದಿನ ಮುಸ್ಲಿಂ (Muslim) ಸಂಘಟನೆಗಳು ರ್ಯಾಲಿಗಳನ್ನು ಆಯೋಜಿಸಿದ್ದರು. ಇದನ್ನು ವಿರೋಧಿಸಿ ಸ್ಥಳೀಯ ಬಿಜೆಪಿ (BJP) ಕಾರ್ಯಕರ್ತರು ಆಯೋಜಿಸಿದ್ದ ಬಂದ್ ಸಂದರ್ಭದಲ್ಲಿ ಗುಂಪೊಂದು ಅಂಗಡಿಗಳ ಮೇಲೆ ಕಲ್ಲು ಎಸೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಉತ್ತೇಜನ ನೀಡುವ ವದಂತಿಗಳು ಹರಡುವುದನ್ನು ತಡೆಯಲು ನಗರದಲ್ಲಿ ಮೂರು ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಆರ್ತಿ ಸಿಂಗ್ (Aarti singh) ಹೇಳಿದ್ದಾರೆ. ಹಿಂದಿನ ದಿನ ವಿಧಿಸಲಾದ ಕರ್ಫ್ಯೂ ನಾಲ್ಕು ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಘೋಷಿಸಿದ್ದಾರೆ.
undefined
ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್!
ಶನಿವಾರ ಬೆಳಿಗ್ಗೆ, ನೂರಾರು ಜನರು, ಅವರಲ್ಲಿ ಹಲವರು ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಎತ್ತುತ್ತಾ, ಮುಂಬೈನಿಂದ (Mumbai) ಸುಮಾರು 670 ಕಿಮೀ ದೂರದಲ್ಲಿರುವ ಪೂರ್ವ ಮಹಾರಾಷ್ಟ್ರ ನಗರದ ರಾಜಕಮಲ್ ಚೌಕ್ (Rajkamal Chowk) ಪ್ರದೇಶದಲ್ಲಿ ಬೀದಿಗಿಳಿದಿದ್ದರು. ಗುಂಪಿನ ಕೆಲವು ಸದಸ್ಯರು ರಾಜಕಮಲ್ ಚೌಕ್ ಮತ್ತು ಇತರ ಸ್ಥಳಗಳಲ್ಲಿ ಅಂಗಡಿಗಳ ಮೇಲೆ ಕಲ್ಲುಗಳನ್ನು ಎಸೆದರು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Maharashtraದಲ್ಲಿ ಭೀಕರ ಎನ್‌ಕೌಂಟರ್ : 26 ಮಾವೋವಾದಿಗಳು ಹತ!
ಶುಕ್ರವಾರ ಮತ್ತು ಶನಿವಾರ ನಡೆದ ಕಲ್ಲುತೂರಾಟದ ಘಟನೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಹೆಚ್ಚುವರಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ (Sandeep Patil) ಅವರು ಅಮರಾವತಿ ನಗರ ವ್ಯಾಪ್ತಿಯಲ್ಲಿ 144 (1), (2), (3) ಸೆಕ್ಷನ್‌ಗಳ ಅಡಿಯಲ್ಲಿ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಐದಕ್ಕಿಂತ ಹೆಚ್ಚು ಜನರ ಸಭೆಗೆ ಅವಕಾಶವಿಲ್ಲ!
ವೈದ್ಯಕೀಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಆದೇಶದ ಪ್ರಕಾರ ಐದಕ್ಕಿಂತ ಹೆಚ್ಚು ಜನರ ಸಭೆಗೆ ಅವಕಾಶವಿಲ್ಲ. ಶುಕ್ರವಾರ, ಅಮರಾವತಿ, ನಾಂದೇಡ್, ಮಾಲೆಗಾಂವ್, ವಾಶಿಮ್ ಮತ್ತು ಯವತ್ಮಾಲ್‌ನಲ್ಲಿ ತ್ರಿಪುರಾದಲ್ಲಿ ನಡೆದ ಘಟನೆಗಳನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ನಡೆಸಿದ ರ್ಯಾಲಿಗಳಲ್ಲಿ ಕಲ್ಲು ತೂರಾಟ ವರದಿಯಾಗಿದೆ. ಶುಕ್ರವಾರದ ಘಟನೆಗಳಿಗೆ ಸಂಬಂಧಿಸಿದಂತೆ ಗಲಭೆ ಸೇರಿದಂತೆ ವಿವಿಧ ಆರೋಪಗಳ ಅನ್ವಯ 20 ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ಪೊಲೀಸರು ಇದುವರೆಗೆ 20 ಜನರನ್ನು ಬಂಧಿಸಿದ್ದಾರೆ ಮತ್ತು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
Manipur Terror Attack:ಉಗ್ರ ದಾಳಿಗೆ ಕರ್ನಲ್ ಕುಟುಂಬ, 4 ಯೋಧರು ಹುತಾತ್ಮ, ಘಟನೆ ಖಂಡಿಸಿದ ಮೋದಿ!
ತ್ರಿಪುರಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದೌರ್ಜನ್ಯವನ್ನು ತಡೆಯಬೇಕು ಎಂದು ಒತ್ತಾಯಿಸಿ ಅಮರಾವತಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ 8,000 ಕ್ಕೂ ಹೆಚ್ಚು ಜನರು ಮನವಿ ಪತ್ರ ಸಲ್ಲಿಸಲು ಜಮಾಯಿಸಿದ್ದರು. ಮನವಿ ಪತ್ರ ಸಲ್ಲಿಸಿ ಜನರು ತೆರಳುತ್ತಿದ್ದಾಗ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ರಾ ಚೌಕ್ ಮತ್ತು ಕಾಟನ್ ಮಾರ್ಕೆಟ್ ನಡುವೆ ಮೂರು ಕಡೆ ಕಲ್ಲು ತೂರಾಟ ನಡೆದಿದೆ.ಏತನ್ಮಧ್ಯೆ, ಪ್ರತಿಪಕ್ಷ ಬಿಜೆಪಿ ವಿರುದ್ಧ ಮುಸುಕಿನ ದಾಳಿಯನ್ನು ಆರಂಭಿಸಿದ ಶಿವಸೇನೆ ಸಂಸದ ಸಂಜಯ್ ರಾವತ್, ಅಮರಾವತಿ ಮತ್ತು ಇತರ ಸ್ಥಳಗಳಲ್ಲಿ ಹಿಂಸಾಚಾರವು ಎಂವಿಎ (Maha Vikas Aghadi) ಸರ್ಕಾರವನ್ನು ಅಸ್ಥಿರಗೊಳಿಸುವ ಗುರಿಯನ್ನು BJP ಹೊಂದಿದೆ ಎಂದು ಶನಿವಾರ ಹೇಳಿದ್ದಾರೆ.