
ಕೊಚ್ಚಿ: ‘ಉತ್ತರ ಮತ್ತು ದಕ್ಷಿಣ ಧ್ರುವಕ್ಕೆ ತೆರಳಿದರೂ ಅಲ್ಲೊಬ್ಬ ಕೇರಳಿಗ ಟೀ ಅಂಗಡಿ ಇಟ್ಟುಕೊಂಡಿರುತ್ತಾನೆ’ ಎನ್ನುವ ಗಾದೆಯನ್ನು ನಿಜವಾಗಿಸುವಂತೆ ಕೇರಳದ ಮಂದಿ ವಿಶ್ವಸಂಸ್ಥೆ ನೋಂದಾಯಿತ 195 ದೇಶಗಳ ಪೈಕಿ, 182 ದೇಶಗಳಲ್ಲಿ (ಶೇ.93 ರಾಷ್ಟ್ರಗಳಲ್ಲಿ) ಉದ್ಯೋಗಿಗಳಾಗಿ ನೆಲೆಸಿದ್ದಾರೆ ಎಂದು ಕುತೂಹಲಕರ ಮಾಹಿತಿ ಹೊರಬಿದ್ದಿದೆ. ನಾರ್ಕಾ ಎಂಬ ಸಂಸ್ಥೆಯು ಕೇರಳ ಸರ್ಕಾರದೊಂದಿಗೆ ( Government of Kerala) ಒಡಂಬಡಿಕೆ ಮಾಡಿಕೊಂಡಿದ್ದು, ಕೇರಳದಿಂದ ವಿದೇಶಕ್ಕೆ ತೆರಳಿ ನೆಲೆಸಿರುವವರಿಗೆ ಪ್ರವಾಸಿ ಐಡಿ ಮಾಡಿಕೊಡುತ್ತದೆ. ಈ ಸಂಸ್ಥೆಯ ನೀಡಿರುವ ಮಾಹಿತಿಯಂತೆ ಈಗ 182 ದೇಶಗಳಲ್ಲಿ ಕೇರಳಿಗರು ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಪ್ರಸ್ತುತ 4,36,960 ಮಂದಿ ನಾರ್ಕಾ ಸಂಸ್ಥೆಯ ಪ್ರವಾಸಿ ಐಡಿ ಹೊಂದಿದ್ದು, ಇವರು ಪ್ರಪಂಚದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದು, ಯುಎಇಯಲ್ಲಿ 1,80,465 ಮಂದಿ ಉದ್ಯೋಗಿಗಳಾಗಿದ್ದಾರೆ. ಪ್ರಸ್ತುತ ಯುದ್ಧಪೀಡಿತ ರಾಷ್ಟಗಳಲ್ಲೂ ಸಾವಿರಾರು ಜನರು ನೆಲೆಸಿದ್ದಾರೆ. ಆದರೆ ಪಾಕಿಸ್ತಾನ, ಉತ್ತರ ಕೊರಿಯಾ (North Korea) ಮುಂತಾದ ರಾಷ್ಟ್ರಗಳಲ್ಲಿ ಯಾರೂ ಉದ್ಯೋಗ ಮಾಡುತ್ತಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರ ವಾಸ, ಇವರಲ್ಲಿ 6 ಸಾವಿರಕ್ಕೂ ಹೆಚ್ಚು ಕೇರಳಿಗರು
ಈ ಕುರಿತು ಮಾತನಾಡಿದ ನಾರ್ಕಾ (Narca) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಕೃಷ್ಣನ್ ನಂಬೂದರಿ, ಇತ್ತೀಚೆಗೆ ವಲಸೆ ಹೊಂದುವವರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಉತ್ತಮ ಸಂಪರ್ಕ ಸೇತುವಾಗುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಮ್ಮ ಪ್ರವಾಸಿ ಐಡಿ (Tourist ID) ಹೊಂದಿರುವವರಲ್ಲಿ ಕೌಶಲ್ಯಯುತ ಮತ್ತು ಅಸಂಘಟಿತ ಕಾರ್ಮಿಕರೂ ಇದ್ದು, ವಿಶ್ವದ ಉದ್ದಗಲಕ್ಕೂ ನೆಲೆಸಿ ಉದ್ಯೋಗ ಮಾಡುತ್ತಿದ್ದಾರೆ. ಕೌಶಲ್ಯಯುತರು 4-5 ರಾಷ್ಟ್ರಗಳನ್ನು ತಿರುಗಿ ನಂತರ ಉತ್ತಮ ಪರಿಸರ ಹೊಂದಿರುವ ರಾಷ್ಟ್ರದಲ್ಲಿ ಬೇರೂರುವ ಪದ್ಧತಿ ಹೆಚ್ಚಾಗುತ್ತಿದೆ. ಹಾಗೆಯೇ ಒಮ್ಮೆ ತೆರಳಿದವರು ಮತ್ತೆ ಇಳಿ ವಯಸ್ಸಿನಲ್ಲಿ ಕೇರಳಕ್ಕೆ ಮರಳಿ ಬರುವ ಸಂಖ್ಯೆಯೂ ಕುಸಿಯುತ್ತಿರುವುದು ಆತಂಕ ಮೂಡಿಸಿದೆ ಎಂದಿದ್ದಾರೆ. ಕೇರಳ ಸರ್ಕಾರದ ವತಿಯಿಂದ ನೀಡಲಾಗುವ ಪ್ರವಾಸಿ ಐಡಿಗೆ ನೋಂದಾಯಿತರಾದವರಿಗೆ ವಾರ್ಷಿಕ 4 ಲಕ್ಷ ರು. ಮೊತ್ತದ ಅಪಘಾತ ವಿಮೆ ಸೌಲಭ್ಯವಿದೆ.
ನೈಜಿರಿಯಾ ನೌಕಾ ಪಡೆ ಬಂಧನದಲ್ಲಿದ್ದ ಭಾರತೀಯರ ಬಿಡುಗಡೆ, 9 ತಿಂಗಳ ಬಳಿಕ 3 ಕೇರಳಿಗರು ವಾಪಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ