Intel Unit In India: ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಪೂರಕ ಸ್ಪಂದನೆ

By Kannadaprabha News  |  First Published Dec 29, 2021, 8:25 AM IST

ಸೆಮಿಕಂಡಕ್ಟರ್‌ ಉತ್ಪಾದನಾ ವಲಯದಲ್ಲಿ ವಿಶ್ವದ ಅಗ್ರಗಣ್ಯ ಕಂಪನಿಯಾಗಿರುವ ಅಮೆರಿಕ ಮೂಲದ ಇಂಟೆಲ್‌, ಭಾರತದಲ್ಲೂ ತನ್ನ ಘಟಕ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.


ನವದೆಹಲಿ: ಸೆಮಿಕಂಡಕ್ಟರ್‌ ಉತ್ಪಾದನಾ ವಲಯದಲ್ಲಿ (Semiconductor Manufacturing Unit) ವಿಶ್ವದ ಅಗ್ರಗಣ್ಯ ಕಂಪನಿಯಾಗಿರುವ ಅಮೆರಿಕ ಮೂಲದ ಇಂಟೆಲ್‌ (Intel), ಭಾರತದಲ್ಲೂ ತನ್ನ ಘಟಕ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಸೆಮಿ ಕಂಡಕ್ಟರ್‌ ವಲಯದಲ್ಲಿ ದೇಶವನ್ನು ಆತ್ಮನಿರ್ಭರ ಮಾಡುವ ಜೊತೆಗೆ, ಜಾಗತಿಕ ಮಟ್ಟದಲ್ಲಿ ಹೊಸ ಕೇಂದ್ರ ಸ್ಥಾನ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಹೊಸ ಯೋಜನೆಯೊಂದನ್ನು ಘೋಷಿಸಿತ್ತು. ಅದರನ್ವಯ ಭಾರತದಲ್ಲೇ ಸೆಮಿಕಂಡಕ್ಟರ್‌ ವಿನ್ಯಾಸ, ಉತ್ಪಾದನೆ, ಪ್ಯಾಕೇಜಿಂಗ್‌, ರಫ್ತು ಮಾಡುವ ಕಂಪನಿಗಳಿಗೆ ಮುಂದಿನ 5 ವರ್ಷದ ಅವಧಿಯಲ್ಲಿ 76000 ಕೋಟಿ ರೂ. ಉತ್ಪಾದನೆ ಆಧರಿತ ಪ್ರೋತ್ಸಾಹಕ ನೀಡುವ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ ಇಂಟೆಲ್‌ ಭಾರತದತ್ತ ತನ್ನ ದೃಷ್ಟಿಹರಿಸಿದೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

undefined

ಈ ಸುದ್ದಿಗೆ ಪೂರಕವೆಂಬಂತೆ ಇಂಟೆಲ್‌ನ ಫೌಂಡ್ರಿ ಸವೀರ್ಸ್‌ನ ಅಧ್ಯಕ್ಷ ರಣಧೀರ್‌ ಠಾಕೂರ್‌ (Randhir Thakur), ಸೆಮಿಕಂಡಕ್ಟರ್‌ ವಲಯಕ್ಕೆ ಸಂಬಂಧಿಸಿದಂತೆ ಭಾರತದ ಹೊಸ ಯೋಜನೆಯನ್ನು ಶ್ಲಾಘಿಸಿ ಮಂಗಳವಾರ ಟ್ವೀಟ್‌ (Tweet) ಮಾಡಿದ್ದರು. ಅದರ ಬೆನ್ನಲ್ಲೇ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಅವರು 'ಇಂಟೆಲ್‌- ವೆಲ್‌ಕಮ್‌ ಟು ಇಂಡಿಯಾ' (Intel-Welcome To India) ಎಂದು ಟ್ವೀಟ್‌ ಮಾಡುವ ಮೂಲಕ ಇಂಟೆಲ್‌ನ ಭಾರತ ಪ್ರವೇಶ ಕುರಿತು ಸುಳಿವು ನೀಡಿದ್ದಾರೆ.

Acer Aspire Vero: ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?

ವಿದ್ಯುತ್‌ ಕೇಬಲ್‌ನಲ್ಲೇ ಇಂಟರ್ನೆಟ್‌: ಇಂಟೆಲ್‌ ಹೊಸ ತಂತ್ರಜ್ಞಾನ!
ಇಂಟರ್ನೆಟ್‌ ಸೇವೆ ನೀಡಿಕೆಯಲ್ಲಿ ಕ್ರಾಂತಿಕಾರಿ ಎನ್ನಬಹುದಾದ ನೂತನ ಆವಿಷ್ಕಾರವೊಂದನ್ನು ಇಂಟೆಲ್‌ ಇಂಡಿಯಾ ಕಂಪನಿ ಮಾಡಿದ್ದು, ವಿದ್ಯುತ್‌ ಕೇಬಲ್‌ನಲ್ಲೇ ಇಂಟರ್ನೆಟ್‌ ಕೂಡ ಪೂರೈಕೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಇದಕ್ಕೆ 'ವೊವ್‌' (ವೈರ್‌ಲೆಸ್‌ ಓವರ್‌ ವೈರ್‌ -Wireless over Wire) ಎಂದು ಹೆಸರಿಡಲಾಗಿದೆ.ವಿದ್ಯುತ್‌ನ ಜೊತೆ ಜೊತೆಗೇ ಇಂಟರ್ನೆಟ್‌ ಕೂಡ ಪೂರೈಕೆ ಮಾಡುವ ಈ ತಂತ್ರಜ್ಞಾನ ಯಶಸ್ವಿಯಾಗಿ ಜಾರಿಗೆ ಬಂದರೆ ದೇಶದ ಕುಗ್ರಾಮದ ಮನೆಗಳಿಗೂ ಸುಲಭವಾಗಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ದೊರೆಯಲಿದೆ. ಅದು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಯನ್ನು ಇನ್ನೊಂದು ಸ್ತರಕ್ಕೆ ಒಯ್ಯಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಟೆಲಿಫೋನ್‌ ಲೈನ್‌ನಲ್ಲಿ ಧ್ವನಿ ಮತ್ತು ಇಂಟರ್ನೆಟ್‌ ಅನ್ನು ಒಟ್ಟೊಟ್ಟಿಗೇ ಕೊಂಡೊಯ್ಯುವ ತಂತ್ರಜ್ಞಾನ ಬಳಸಲಾಗುತ್ತದೆ. ಅದೇ ರೀತಿ ಎಲೆಕ್ಟ್ರಿಕ್‌ ಕೇಬಲ್‌ನಲ್ಲಿ ವಿದ್ಯುತ್‌ ಮತ್ತು ಇಂಟರ್ನೆಟ್‌ ಅನ್ನು ಒಟ್ಟಿಗೇ ಸಾಗಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಸದ್ಯ ದೇಶದ ಬಹುತೇಕ ಗ್ರಾಮ ಪಂಚಾಯತ್‌ಗಳವರೆಗೆ ಆಪ್ಟಿಕಲ್‌ ಫೈಬರ್‌ ಕೇಬಲ್‌ ಮೂಲಕ ವೇಗದ ಬ್ರಾಡ್‌ಬ್ಯಾಂಡ್‌ ಪೂರೈಸುವ ವ್ಯವಸ್ಥೆಯಿದೆ. ಅಲ್ಲಿಂದ ಹಳ್ಳಿಯ ಮನೆಗಳಿಗೆ ಇಂಟರ್ನೆಟ್‌ ತಲುಪಿಸುವುದು ದುಬಾರಿಯಾಗುತ್ತಿದೆ. ವಿದ್ಯುತ್‌ ಲೈನ್‌ನಲ್ಲೇ ಬ್ರಾಡ್‌ಬ್ಯಾಂಡ್‌ ಕೂಡ ಪೂರೈಸಬಹುದು ಎಂದಾದರೆ ಇಂಟರ್ನೆಟ್‌ ಇನ್ನಷ್ಟುಅಗ್ಗವಾಗಬಹುದು ಮತ್ತು ಜನರಿಗೆ ವೇಗದ ಇಂಟರ್ನೆಟ್‌ ಸಂಪರ್ಕ ಸುಲಭವಾಗಿ ಲಭಿಸಬಹುದು ಎಂದು ಹೇಳಲಾಗಿದೆ.

ಚೀನಾದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೆ ಈ ಯಂತ್ರ, ವಿಜ್ಞಾನಿಗಳು ತಯಾರಿಸಿದ AI 'Prosecutor'!

ಈ ಕುರಿತು ಮಾಹಿತಿ ನೀಡಿರುವ ಇಂಟೆಲ್‌ ಇಂಡಿಯಾ ಮುಖ್ಯಸ್ಥೆ ನಿವೃತಿ ರೈ, 'ನಮ್ಮ ದೇಶದಲ್ಲಿ ಹೆಚ್ಚುಕಮ್ಮಿ ಎಲ್ಲಾ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವಿದೆ. ವಿದ್ಯುತ್‌ ಲೈನ್‌ನಲ್ಲೇ ಇಂಟರ್ನೆಟ್‌ ಪೂರೈಸುವ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಅದರಿಂದ, ಎಲ್ಲೆಲ್ಲಿಗೆ ವಿದ್ಯುತ್‌ ತಲುಪುತ್ತದೆಯೋ ಅಲ್ಲಿಗೆಲ್ಲ ಇಂಟರ್ನೆಟ್‌ ತಲುಪಿಸಲು ಸಾಧ್ಯವಾಗಲಿದೆ. ದೇಶದ 6 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್‌ ಲಭಿಸಿದರೆ ಇಡೀ ದೇಶ ಜಾಗತಿಕ ಮಾರುಕಟ್ಟೆಯ ಸಂಪರ್ಕಕ್ಕೆ ಬರಲಿದೆ. ಅದರಿಂದ ಭಾರತ ಬೆಳೆಯುತ್ತದೆ, ಜೊತೆಗೇ ನಾವೂ ಬೆಳೆಯುತ್ತೇವೆ' ಎಂದು ಹೇಳಿದ್ದಾರೆ.

click me!