Inspirational story: ಸಾವು ಗೆದ್ದು ಬಂದ ಯೋಧನ ಸಾಹಸಗಾಥೆ

By Suvarna NewsFirst Published Dec 19, 2021, 8:01 PM IST
Highlights
  • ತರಬೇತಿ ವೇಳೆ ಅಪಘಾತಕ್ಕೀಡಾಗಿ 200 ಮೀಟರ್ ಎತ್ತರದಿಂದ ಕೆಳಗೆ ಬಿದ್ದಿದ್ದ ಯೋಧ
  • ಫಲ ನೀಡಿತು ಯೋಧ ಯೋಗೇಶ್‌ ಯಾದವ್‌ ದೃಢ ಸಂಕಲ್ಪ
  • ಮತ್ತೆ ವಾಯುಸೇನೆಯ ಅಕೌಂಟ್‌ ವಿಭಾಗದಲ್ಲಿ ಸೇವೆಗೆ ಸಿದ್ಧ
     

ನವದೆಹಲಿ(ಡಿ.19):  ಇದೊಂದು ಸಾಹಸಿ ಯೋಧನೋರ್ವನ ರೋಚಕ ಹಾಗೂ ಸ್ಪೂರ್ತಿದಾಯಕ ಕತೆ. ವಿಧಿ ಯಾರ ಬದುಕಿನಲ್ಲಿ ಹೇಗೆ ಬೇಕಾದರೂ ಆಡಬಹುದು. ಅದಕ್ಕೆ ಒಳ್ಳೆಯವರು ಕೆಟ್ಟವರೆಂಬ ಬೇಧವಿಲ್ಲ ಹೌದು 2018 ರಲ್ಲಿ ಯೋಗೇಶ್ ಯಾದವ್ (Yogesh Yadav) ತೆಲಂಗಾಣ (Telangana)ದ ದುಂಡಿಗಲ್‌ (Dundigal)ನಲ್ಲಿರುವ ಏರ್ ಫೋರ್ಸ್ ಅಕಾಡೆಮಿ(Air Force Academy)ಯಿಂದ (ಎಎಫ್‌ಎ) ಪಾಸಿಂಗ್ ಔಟ್ ಪರೇಡ್‌ ಮಾಡಿ ವಾಯುಸೇನೆ ಪೈಲಟ್‌ ಆಗಲು ಕೆಲ ದಿನಗಳು ಬಾಕಿ ಇದ್ದವಷ್ಟೇ. ಆದರೆ ಫ್ಲಯಿಂಗ್‌ ಕೆಡೆಟ್‌ ಯೋಗೇಶ್‌ ಯಾದವ್‌ ಅವರ ತರಬೇತಿ ವಿಮಾನ ಅಂದು ಅವರ ಬದುಕಿಗೆ ದೊಡ್ಡ ಆಘಾತಕಾರಿ ತಿರುವು ನೀಡಿತು.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಯಿಂದ ಪದವಿ ಪಡೆದ ನಂತರ ಇವರು ದುಂಡಿಗಲ್‌ನ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ವಿಮಾನ ಹಾರಾಟದ ತರಬೇತಿ ಪಡೆಯುತ್ತಿದ್ದಾಗ ಇವರು ಹಾರಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ದೋಷದ ಪರಿಣಾಮ ಈ ಅನಾಹುತ ಸಂಭವಿಸಿದ್ದು ಸುಮಾರು 200 ಮೀಟರ್‌ ಎತ್ತರದಿಂದ ಯೋಗೇಶ್‌ ಯಾದವ್‌ ಭೂಮಿಗೆ ಎಸೆಯಲ್ಪಟ್ಟರು. ಪರಿಣಾಮ ಇವರ ಕಾಲುಗಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ವಾಯುಪಡೆಯ ಪೈಲಟ್ ಆಗಬೇಕೆಂಬ ಅವರ ಕನಸು ಕೂಡ ಈ ದುರಂತದೊಂದಿಗೆ ನೆಲಕಚ್ಚಿತ್ತು. ಏಕೆಂದರೆ ಸೊಂಟದಿಂದ ಕೆಳಗೆ ಅವರು ಸಂಪೂರ್ಣ ಸ್ವಾಧೀನ ಕಳೆದುಕೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದರು.

Final Salute to GC Varun Singh: ಗಗನಯಾನ ಕನಸು ಕಂಡಿದ್ದ ಕ್ಯಾಪ್ಟನ್‌: ಇಂದು ವೀರ ಸೇನಾನಿ ಅಂತ್ಯಕ್ರಿಯೆ!

ಆದರೆ ಇಷ್ಟು  ಅನಾನುಕೂಲತೆಗಳಿದ್ದರೂ ಯಾದವ್ ಬಿಟ್ಟುಕೊಡುವ ವ್ಯಕ್ತಿಯಾಗಿರಲಿಲ್ಲ. ಅವರು ಅಸಹಾಯಕತೆಯ ನಡುವೆಯೂ ಛಲ ಬಿಡದೇ ತಮ್ಮ ತರಬೇತಿಯನ್ನು ಮುಗಿಸಿ ಭಾರತೀಯ ವಾಯುಪಡೆಗೆ (ಐಎಎಫ್) ಸೇರಲು ನಿರ್ಧರಿಸಿದ್ದರು. ಶನಿವಾರ (ಡಿ. 18) ಅಕಾಡೆಮಿಯಿಂದ ಯಶಸ್ವಿಯಾಗಿ ಪದವಿ ಪಡೆದ ಯೋಗೇಶ್‌ ಯಾದವ್‌  ವಾಯುಸೇನೆಯ ಅಕೌಂಟ್ಸ್‌ ವಿಭಾಗದಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಐಎಎಫ್‌ಗೆ ಸೇರಿದ್ದಾರೆ. ಯಾದವ್‌ ಅವರಿಗೆ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ (Air Chief Marshal) ವಿ.ಆರ್. ಚೌಧರಿ (V.R. Chaudhari) ಶುಭ ಹಾರೈಸಿದರು. 

ಸೇನಾ ಮೂಲಗಳ ಪ್ರಕಾರ, ಇಂತಹ ಸಂದರ್ಭಗಳಲ್ಲಿ, ವೈದ್ಯಕೀಯ ಕಾರಣ ನೀಡಿ ಅವರನ್ನು ಸೇವೆಯಿಂದ ಮುಕ್ತ ಗೊಳಿಸಿ ಹೊರಗೆ ಕಳುಹಿಸಲಾಗುತ್ತದೆ. ಆದರೆ ಇಲ್ಲಿ ಯಾದವ್‌ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಭಾರತೀಯ ವಾಯುಸೇನೆಗೆ ಮನವಿ ಮಾಡಿದ್ದರು ಈ  ಪರಿಣಾಮ ವಾಯುಸೇನೆ ಇವರಿಗೆ ಸೇವೆ ಮಾಡುವ ಅವಕಾಶ ನೀಡಿದೆ. ಅದೂ ಕೂಡ ಎರಡೂ ವರ್ಷಗಳ ಕಾಲ ನಡೆದ ವೈದ್ಯಕೀಯ ಚಿಕಿತ್ಸೆಯ ನಂತರ.

Good Gesture: ಹುತಾತ್ಮ ಯೋಧನ ತಂಗಿ ಮದುವೆಗೆ ಬಂದು ಅಣ್ಣನ ಜವಾಬ್ದಾರಿ ನಿರ್ವಹಿಸಿದ CRPF ಜವಾನರು

ಸಂಕಲ್ಪ ಫಲ ನೀಡುತ್ತದೆ:
ಐಎಎಫ್‌ ಇವರ ಧೃಡ ಸಂಕಲ್ಪವನ್ನು ಗಮನಿಸಿ ಸೇವೆಯಲ್ಲಿ ಮುಂದುವರಿಸಲು ಅವಕಾಶ ನೀಡಿತ್ತು. ಆದರೆ ಇದಕ್ಕೆ ರಕ್ಷಣಾ ಸಚಿವಾಲಯದ ಅನುಮತಿಯೂ ಬೇಕಿತ್ತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಕಳೆದ ವರ್ಷ ಯೋಗೇಶ್‌ ಯಾದವ್ ಅವರ ಮುಂದುವರಿಕೆಗೆ ಅನುಮೋದನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಅಂತು ತಮ್ಮ ದೃಢ ಸಂಕಲ್ಪದ ಪರಿಣಾಮ ಕೆಡೆಟ್ ಈ ವರ್ಷದ ಆರಂಭದಲ್ಲಿ ಏರ್‌ಫೋರ್ಸ್‌ ಅಕಾಡೆಮಿಗೆ ಮರಳಿದರು ಮತ್ತುಇದರ  ಅಕೌಂಟ್ಸ್  ವಿಭಾಗದಲ್ಲಿ  ಮೆರಿಟ್‌ನಲ್ಲಿ ಮೊದಲ ಸ್ಥಾನ ಪಡೆದು ಸೇವೆಗೆ ಆಯ್ಕೆ ಆದರು. ಪ್ರಸ್ತುತ ಐಎಎಫ್‌ನ ಅಧಿಕಾರಿಯಾಗಿ ಯಾದವ್ ಅವರು ವಾಯುಪಡೆಯ ನಿಯಮಗಳಿಗೆ ಬದ್ಧರಾಗಿರುತ್ತಾರೆ, ಆದರೆ, ಅವರು ಪಾರ್ಶ್ವವಾಯುವಿಗೆ ಒಳಗಾಗಿರುವುದರಿಂದ, ಅವರಿಗೆ ಕೆಲವು ನಿಯಮಗಳನ್ನು ಸಡಿಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 

click me!