
ನವದೆಹಲಿ[ನ.14]: ಇಸ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಕೇರಳದ ಕೊಚ್ಚಿ ಮೂಲದ ಅಪರ್ಣಾ ಕೃಷ್ಣನ್ ಅವರನ್ನು ವಿವಾಹವಾಗಲಿದ್ದಾರೆ.
ಬರಲಿದೆ ಮೂರ್ತಿ ದಂಪತಿ ಬಯೋಪಿಕ್; ಯಾರಾಗ್ತಾರೆ ಸುಧಾ ಮೂರ್ತಿ?
ಡಿ.2ರಂದು ಈ ಜೋಡಿ ಬೆಂಗಳೂರಿನಲ್ಲಿ ಈ ಜೋಡಿ ಸರಳವಾಗಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದೆ. ಇದರಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರವೇ ಭಾಗಿಯಾಗಲಿದ್ದಾರೆ. ಬಳಿಕ ಹೋಟೆಲ್‌ನಲ್ಲಿ ಬಂಧುಗಳು, ಗಣ್ಯರಿಗೆ ಔತಣ ಕೂಟ ಆಯೋಜಿಸಲಾಗುವುದು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!
ಅಪರ್ಣಾ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್ ಕೆ.ಆರ್. ಕೃಷ್ಣನ್ ಮತ್ತು ಎಸ್‌ಬಿಐನ ನಿವೃತ್ತ ಉದ್ಯೋಗಿ ಸಾವಿತ್ರಿ ಅವರ ಪುತ್ರಿ. ಲಂಡನ್‌ನ ಡರ್ತ್‌ಮೌತ್ ಕಾಲೇಜಿನಿಂದ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಅಪರ್ಣಾ ಓರ್ವ ಅತ್ಯುತ್ತಮ ಯೋಗಪಟು ಕೂಡಾ ಹೌದು. ಲಂಡನ್‌ನಿಂದ ಮರಳಿರುವ ಅಪರ್ಣಾ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ಅಪರ್ಣಾ ಹಾಗೂ ರೋಹನ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ