ಕೋವಿಡ್ ವೇಳೆ ಯಮರಾಜನಾಗಿ ಜಾಗೃತಿ ಮೂಡಿಸಿದ್ದ ಪೊಲೀಸ್ ಪೇದೆ ದುರಂತ ಅಂತ್ಯ!

By Chethan Kumar  |  First Published Oct 26, 2024, 5:50 PM IST

ಕೋವಿಡ್ ಸಂದರ್ಭದಲ್ಲಿ ಯಮರಾಜನ ವೇಷ ಧರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದ ಪೊಲೀಸ್ ಪೇದೆ ಅವಘಡದಲ್ಲಿ ದುರಂತ ಅಂತ್ಯಕಂಡಿದ್ದಾರೆ. 


ಇಂದೋರ್(ಅ.26) ಕೋವಿಡ್ ಸಂದರ್ಭದಲ್ಲಿ ಒಂದು ದಿನ ರಜೆ, ಒಂದು ದಿನ ವಿಶ್ರಾಂತಿ ಪಡೆಯದೇ, ಆರೋಗ್ಯ, ಕುಟುಂಬ ಲೆಕ್ಕಿಸದೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಪೊಲೀಸರು ಕರ್ತವ್ಯ ನಿರ್ವಹಣೆ ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದರು. ಹೀಗೆ ಕೋವಿಡ್ ಮಾರಣಾಂತಿಕ ಸಾಂಕ್ರಾಮಿಕ ರೋಗದ ಕುರಿತು ಯಮರಾಜನ ವೇಷ ಧರಿಸಿ ಪೊಲೀಸ್ ಮುಖ್ಯ ಪೇದೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಲಾಕ್‌ಡೌನ್ ವೇಳೆ ಕದ್ದು ಮುಚ್ಚಿ ತಿರುಗಾಟ, ಜನರ ಸಂಪರ್ಕ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಪೊಲೀಸ್ ಪೇದೆ ಯಮರಾಜನಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಆದರೆ ಈ ಮುಖ್ಯ ಪೊಲೀಸ್ ಪೇದೆ ಇದೀಗ ವಿದ್ಯುತ್ ಸ್ಪರ್ಶಿಸಿ ಮ-ತಪಟ್ಟಿದ್ದಾರೆ.

ಮಧ್ಯ ಪ್ರದೇಶ ಇಂದೋರ್‌ನ ಹೆಡ್ ಕಾನ್ಸ್‌ಸ್ಟೇಬಲ್ ಜವಾಹರ್ ಸಿಂಗ್ ಜದೌನ್ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಶುಕ್ರವಾರ ಜವಾಹರ್ ಸಿಂಗ್‌ಗೆ ರಜಾ ದಿನವಾಗಿತ್ತು. ಹೀಗಾಗಿ ಮನೆಯಲ್ಲಿದ್ದ ಜವಾಹರ್ ಸಿಂಗ್ ದನದ ಕೊಟ್ಟಿಗೆಯನ್ನು ತೊಳೆದೆ ಶುಚಿಗೊಳಿಸಲು ಮುಂದಾಗಿದ್ದಾರೆ. ಪ್ರತಿ ವಾರದ ರಜೆಯಲ್ಲಿ ದನದ ಕೊಟ್ಟಿಗೆ ಶುಚಿ ಮಾಡುತ್ತಾರೆ. ಈ ಬಾರಿ ನೀರು ಹಾಕಿ ಸಂಪೂರ್ಣ ಶುಚಿಗೊಳಿಸಲು ಮುಂದಾದ ಜವಾಹರ್ ಸಿಂಗ್ ನೀರಿಗಾಗಿ ಮೋಟಾರು ಸ್ವಿಚ್ ಆನ್ ಮಾಡಿದ್ದಾರೆ. ಬಳಿಕ ಪೈಪ್ ಮೂಲಕ ಜನದ ಕೊಟ್ಟಿಗೆ ನೀರು ಹಾಯಿಸಿದ್ದಾರೆ.

Tap to resize

Latest Videos

ಹೆಲ್ಮೆಟ್ ಕಡ್ಡಾಯ ಮಾತ್ರವಲ್ಲ ಸರಿಯಾಗಿ ಧರಿಸದಿದ್ದರೂ ಬೀಳುತ್ತೆ ದಂಡ!

ಆದರೆ ಮೋಟಾರಿನ ಒಂದು ವೈಯರ್ ತುಂಡಾಗಿತ್ತು. ಹೀಗಾಗಿ  ವಿದ್ಯುತ್ ನೇರವಾಗಿ ನೀರಿನ ಮೂಲಕ ಪ್ರವಹಿಸಿದೆ. ವಿದ್ಯುತ್ ನೀರಿನಲ್ಲಿ ಪ್ರವಹಿಸಿದ ಬೆನ್ನಲ್ಲೇ ನೀರು ತಾಗಿದ ದನದ ಕರು ದಿಢೀರ್ ಕುಸಿದು ಬಿದ್ದಿದೆ. ಏನಾಯ್ತು ಅನ್ನುವಷ್ಟರಲ್ಲೇ ಜವಾಹರ್ ಸಿಂಗ್ ಕೂಡ ಕರೆಂಟ್ ಶಾಕ್ ಹೊಡೆದಿದೆ. ಕುಸಿದು ಬಿದ್ದ ಜವಾಹರ್ ಸಿಂಗ್ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಾಗಿದೆ.ಆದರೆ ಪ್ರಯೋಜನವಾಗಲಿಲ್ಲ.

ಜವಾಹರ್ ಸಿಂಗ್ ಮೈಗೆ ವಿದ್ಯುತ್ ಸ್ವರ್ಶವಾಗುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಜವಾಹರ್ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದಾರೆ. ಹಿರಿಯ ಅಧಿಕಾರಿಗಳು ಸೇರಿದಂತೆ ಇಡೀ ತಂಡ ಆಗಮಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

2020ರಲ್ಲಿ ಜವಾಹರ್ ಸಿಂಗ್ ಯಮರಾಜನ ವೇಷ ಧರಿಸಿ ರಸ್ತೆ, ಕಾಲೋನಿಗೆ ತೆರಳಿ ಕೋವಿಡ್ ಜಾಗೃತಿ ಮೂಡಿಸಿದ್ದರು. ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದರು. ಕೋವಿಡ್ ವೈರಸ್‌ನ್ನು ಲಘುವಾಗಿ ಪರಿಗಣಿಸಿ ಜೀವ ಕಳೆದುಕೊಳ್ಳಬೇಡಿ ಎಂದು ಜಾಗೃತಿ ಮೂಡಿಸಿದ್ದರು. ಯಮರಾಜ್ ಪೊಲೀಸ್ ಎಂದೇ ಜವಾಹರ್ ಪ್ರಖ್ಯಾತಿ ಹೊಂದಿದ್ದರು. ಜವಾಹರ್ ಸಿಂಗ್ ಜಾಗೃತಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದರು. ಈ ವೇಳೆ ಸರ್ಕಾರ ಕೂಡ ಜವಾಹರ್ ಕಾರ್ಯವನ್ನು ಶ್ಲಾಘಿಸಿತ್ತು.

ಶಿಸ್ತಿನ ಸಿಪಾಯಿ ಆಗಿದ್ದ ಜವಾಹರ್ ಸಿಂಗ್ ಕರ್ತವ್ಯದಲ್ಲಿ ಶೇಕಡಾ 100 ರಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು ಎಂದು ಸಹೋದ್ಯೋಗಿಗಳು ನೆನಪಿಸಿಕೊಂಡಿದ್ದಾರೆ. ಜವಾಹರ್ ಸಿಂಗ್ ಕಟ್ಟುಮಸ್ತಾದ ದೇಹದಿಂದ ಹಲವು ಸಂದರ್ಭಗಳಲ್ಲಿ ಗಲಾಟೆ ಸೇರಿದಂತೆ ಯಾವುದೇ ಪರಿಸ್ಥಿತಿಯನ್ನು ಮುಂದ ನಿಂತು ನಿರ್ವಹಿಸುತ್ತಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜವಾಹರ್ ಸಿಂಗ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ನೆನಪಿಸಿಕೊಂಡಿದ್ದಾರೆ. ಇಂದೋರ್‌ನ ಎಂಜಿ ರೋಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಜವಾಹರ್ ಸಿಂಗ್ ಜದೌನ್ ಮೃತದೇಹ ಮರಣತ್ತೋರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಕುಟುಂಬಸ್ಥರು ಜವಾಹರ್ ಸಿಂಗ್ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಅಪಾರ ಜನಸ್ತೋಮ ಆಗಮಿಸಿತ್ತು.

ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ಪೊಲೀಸರ ಪ್ರಕರಣ ಮರು ವಿಚಾರಣೆಗೆ ಹೈಕೋರ್ಟ್‌ ಅಸ್ತು

click me!