ದೆಹಲಿಯ ಯಮುನಾ ನದಿ ಶುಚಿತ್ವಗೊಳಿಸುವ ಭರವಸೆ ನೀಡಿದ್ದ ಆಮ್ ಆದ್ಮಿ ಪಾರ್ಟಿ ಇದುವರೆಗೂ ಕೆಲಸ ಮಾಡಿಲ್ಲ. ಮಲಿನಗೊಂಡಿರುವ ಯಮುನಾ ನದಿ ಶುಚಿತ್ವ ಹಾಗೂ ಆಪ್ ವಿರುದ್ಧ ಪ್ರತಿಭಟನೆಗಾಗಿ ನದಿಯಲ್ಲಿ ಮುಳುಗಿದ ಬಿಜೆಪಿ ರಾಜ್ಯಾಧ್ಯಕ್ಷ ಇದೀಗ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದಾರೆ.
ನವದೆಹಲಿ(ಅ.26) ಯಮುನಾ ನದಿ ಮಲಿನಗೊಂಡಿರುವ ಕುರಿತು ಇತ್ತೀಚೆಗೆ ಹಲವು ವಿಡಿಯೋಗಳು, ಮಾಧ್ಯಮಗಳ ವರದಿಗಳು ಕೋಲಾಹಲ ಸೃಷ್ಟಿಸಿತ್ತು. ದೆಹಲಿಯ ಯಮುನಾ ನದಿಯಲ್ಲಿ ನೊರೆ ರೀತಿ ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಸೇರಿದಂತೆ ಮಲಿನ ವಸ್ತುಗಳಿಂದ ತುಂಬಿ ಹೋಗಿದೆ. ಆದರೆ ದೆಹಲಿಯಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಾರ್ಟಿ ಇದೇ ಯಮುನಾ ಶುಚಿಗೊಳಿಸುವುದಾಗಿ ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಾದರೂ ಯಮುನಾ ನದಿ ಶುಚಿಯಾಗಿಲ್ಲ. ಇದರ ವಿರುದ್ದ ಬಿಜೆಪಿ ಭಾರಿ ಪ್ರತಿಭಟನೆ ನಡೆಸುತ್ತಿದೆ. ಯಮುನಾ ಶುಚಿತ್ವಕ್ಕೆ ಆಗ್ರಹಿಸಿ ಹಾಗೂ ಆಪ್ ಸುಳ್ಳು, ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದೆ. ಯಮುನಾ ಶುಚಿತ್ವದ ಪ್ರತಿಭಟನೆ ವೇಳೆ ಬಿಜೆಪಿ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಯಮುನಾ ನದಿಯಲ್ಲಿ ಮಳುಗಿ ಪವಿತ್ರ ಸ್ನಾನ ಮಾಡುವ ರೀತಿ ಪ್ರತಿಭಟಿಸಿದ್ದಾರೆ. ಆದರೆ ಮಲಿನ ಯಮುನಾ ನದಿಯಲ್ಲಿ ಮುಳುಗಿದ ಬೆನ್ನಲ್ಲೇ ವಿರಂದ್ರ ಸಚ್‌ದೇವಾ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ಮಲಿನಗೊಂಡಿರುವ ಯಮುನಾ ನದಿಯಲ್ಲಿ ಮುಳುಗಿದ ವೀರೇಂದ್ರ ಸಚ್‌ದೇವಾ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಇಡೀ ದೇಹದಲ್ಲಿ ತುರಿಕೆ ಆರಂಭಗೊಂಡಿದೆ. ಇನ್ನು ಉಸಿರಾಟದ ಸಮಸ್ಯೆಯೂ ಎದುರಾಗಿದೆ. ಹೀಗಾಗಿ ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರಿಕೆಯಿಂದ ದೇಹದ ತುಂಬ ಕಜ್ಜಿಯಾಗಿದೆ. ಇತ್ತ ಉಸಿರಾಟದ ಸಮಸ್ಯೆಯೂ ತೀವ್ರಗೊಂಡಿದೆ ಎಂದು ದೆಹಲಿ ಬಿಜೆಪಿ ಹೇಳಿದೆ.
ದೆಹಲಿಯಲ್ಲಿ ಆಪ್ ಸರ್ಕಾರ ಯಮುನಾ ನದಿ ಹೆಸರಿನಲ್ಲಿ ನಡೆಸಿದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದುವರೆಗೂ ಯಮುನಾ ನದಿಯನ್ನು ಶುಚಿಗೊಳಿಸುವ ಕಾರ್ಯ ಆಪ್ ಮಾಡಿಲ್ಲ. ಹೀಗಾಗಿ ಪ್ರತಿಭಟನೆ ವೇಳೆ ಅಧ್ಯಕ್ಷ ವಿರೇಂದ್ರ ಕ್ಷಮಿಸು ಯುಮನೆ ಎಂದು ಯುಮಾನ ನದಿಯಲ್ಲಿ ಮುಳುಗಿ ಪವಿತ್ರ ಸ್ನಾನ ಮಾಡಿದ್ದಾರೆ. ಆದರೆ ಹೀಗೆ ಮುಳುಗಿ ಪ್ರತಿಭಟನೆ ಮಾಡಿದ ರಾಜ್ಯಧ್ಯಕ್ಷ ಇದೀಗ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ದೆಹಲಿ ಬಿಜೆಪಿ ಹೇಳಿದೆ.
ಇದೇ ವೇಳೆ ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಆಪ್ ನಾಯಕರಿಗೆ ಸವಾಲು ಹಾಕಿದ್ದಾರೆ. ಯಮುನಾ ನದಿ ಸಂಪೂರ್ಣ ಮಲಿನಗೊಂಡಿದೆ. ಧೈರ್ಯವಿದ್ದರೆ ಆರವಿಂದ್ ಕೇಜ್ರಿವಾಲ್ ಯುಮನಾ ನದಿಯಲ್ಲಿ ಮುಳಿಗಿ ನೋಡಲಿ ಎಂದು ಚಾಲೆಂಜ್ ಮಾಡಿದ್ದರು. ಚಾತ್ ಪೂಜೆ ಸಮೀಪಿಸುತ್ತಿದೆ. ಚಾತ್ ಪೂಜೆ ವೇಳೆ ಭಕ್ತರು ನದಿಯಲ್ಲಿ ಮುಳುಗಿ ಪುಣ್ಯ ಸ್ನಾನ ಮಾಡುತ್ತಾರೆ. ಆದರೆ ಯಮುನಾ ಮಲಿನಗೊಂಡಿರುವ ಕಾರಣ ಹಿಂದೂಗಳಿಗೆ ಸಮಸ್ಯೆಯಾಗುತ್ತಿದೆ ಎಂದು ವಿರೇಂದ್ರ ಹೇಳಿದ್ದರು.
ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರವು ಮೊದಲೇ ಯುಮುನಾ ಶುಚಿಗೊಳಿಸುವ ಭರವಸೆ ನೀಡಿತ್ತು. ಬಳಿಕ ಪ್ರತಿ ಚುನಾವಣೆಯಲ್ಲಿ ಇದೇ ಭರವಸೆಯನ್ನು ಪುನರುಚ್ಚರಿಸಿದೆ. ಯಮುನಾ ನದಿ ಶುಚಿತ್ವ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿ ಹೊಡೆದಿದೆ. ಆದರೆ ನದಿ ಶುಚಿಗೊಳಿಸುವ ಕಾರ್ಯಕ್ಕೆ ಆಪ್ ಸರ್ಕಾರ ಮುಂದಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ.ಬಿಜೆಪಿ ಆರೋಪಕ್ಕೆ ಆಮ್ ಆದ್ಮಿ ಪಾರ್ಟಿ ತಿರುಗೇಟು ನೀಡಿದೆ. ಯಮುನಾ ನದಿ ಮಲಿಗೊಳ್ಳಲು ಬಿಜೆಪಿ ಕಾರಣ ಎಂದಿದೆ. ಉತ್ತರ ಪ್ರದೇಶ ಹಾಗೂ ಹರ್ಯಾಣದಿಂದ ಯಮುನಾ ಮಲಿನಗೊಳ್ಳುತ್ತಿದೆ. ಬಿಜೆಪಿ ನದಿಯನ್ನು ಮಲಿನಗೊಳಿಸದಿದ್ದರೆ ಶುಚಿಯಾಗಿರುತ್ತದೆ. ಹರ್ಯಾಣ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ನದಿ ಶುಚಿಗೊಳಿಸುವ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು ಎಂದಿದಿದೆ. ಬಿಜೆಪಿ ರಾಜ್ಯಗಳ ಕೈಗಾರಿಗೆಕಗಳ ನೀರನ್ನು ಯಮುನಾ ನದಿಗೆ ಹರಿಬಿಡಲಾಗಿದೆ. ಮೊದಲು ಇದನ್ನು ನಿಲ್ಲಿಸಲಿ ಎಂದು ಆಪ್ ನಾಯಕರು ಆರೋಪ ಮಾಡಿದ್ದಾರೆ.