ಬೆಂಗಳೂರು ಸೇರಿ ದೇಶದ ನಗರಗಳಿಗೆ 22 ಹೊಸ ವಿಮಾನ ಸೇವೆ ಘೋಷಿಸಿದ ಇಂಡಿಗೋ!

Published : Feb 13, 2021, 06:38 PM IST
ಬೆಂಗಳೂರು ಸೇರಿ ದೇಶದ ನಗರಗಳಿಗೆ 22 ಹೊಸ ವಿಮಾನ ಸೇವೆ ಘೋಷಿಸಿದ ಇಂಡಿಗೋ!

ಸಾರಾಂಶ

ಕೊರೋನಾ ಲಸಿಕೆ ವಿತರಣೆ ಆರಂಭಗೊಂಡ ಬಳಿಕ ದೇಶ ಸಹಜ ಸ್ಥಿತಿಗೆ ಮರಳಿದೆ. ಎಲ್ಲಾ ಕ್ಷೇತ್ರಗಳು ಮತ್ತೆ ಕಾರ್ಯಾರಂಭಿಸುತ್ತಿದೆ. ವಿಮಾನಯಾನ ಸೇವೆ ಕೂಡ ತ್ವರಿತಗತಿಯಲ್ಲಿ ವಿಸ್ತರಣೆಯಾಗುತ್ತಿದೆ. ಇದೀಗ ಇಂಡಿಗೋ ಹೊಸ 22 ವಿಮಾನ ಸೇವೆಗಳನ್ನು ಘೋಷಿಸಿದೆ. ನೂತನ ವಿಮಾನ ಸೇವೆಗಳ ವಿವರ ಇಲ್ಲಿದೆ.

ನವದೆಹಲಿ(ಫೆ.13): ದೇಶದೊಳಗಿನ ಸಂಪರ್ಕ ವ್ಯವಸ್ಥೆಯನ್ನ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಇಂಡಿಗೋ 22 ಹೊಸ ವಿಮಾನ ಸೇವೆಗಳನ್ನು ಘೋಷಿಸಿದೆ. ಹೊಸ 22 ವಿಮಾನಗಳು ಇದೇ ಮಾರ್ಚ್ 18 ರಿಂದ ಸೇವೆ ಆರಂಭಿಸಲಿದೆ. ಈ ಮೂಲಕ ದೇಶಿಯ ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲಿದೆ.

ಆಂಧ್ರದ ಕರ್ನೂಲ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ..ಯಾವಾಗಿನಿಂದ?

ಹೊಸ ವಿಮಾನ ಸೇವೆಗಳ ವಿವರ:
RCS ಯೋಜನೆ ಅಡಿಯಲ್ಲಿ ಅಗರ್ತಲಾ- ಐಜ್ವಾಲ್ ವಿಮಾನ ಸೇವೆ
ಬೆಂಗಳೂರು-ಶಿರಡಿ ವಿಮಾನ ಸೇವೆ
ಭುವನೇಶ್ವರ್- ಪಾಟ್ನಾ ವಿಮಾನ ಸೇವೆ
ಜೈಪುರ್- ವಡೋದರ ವಿಮಾನ ಸೇವೆ
ಚೆನ್ನೈ-ವಡೋದರ ವಿಮಾನ ಸೇವೆ
ಪಾಟ್ನಾ-ಕೊಚ್ಚಿ ವಿಮಾನ ಸೇವೆ
ರಾಜಮುಂದ್ರೈ-ತಿರುಪತಿ ವಿಮಾನ ಸೇವೆ

ಇನ್ನು  ಕೋಲ್ಕತಾ-ಗಯಾ, ಕೊಚ್ಚಿ- ತಿರುವನಂತಪುರಂ, ಜೈಪುರ-ಸೂರತ್, ಚೆನ್ನೈ-ಸೂರತ್ ವಿಮಾನ ಸೇವೆಗಳನ್ನು ಆರಂಭಿಸಲು ಸಜ್ಜಾಗಿದೆ. 

ಭಾರತದ ಮೊಟ್ಟ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ, ಎಲ್ಲಿಂದ ಎಲ್ಲಿಗೆ?.

ದೇಶದಲ್ಲಿ 22 ಹೊಸ ವಿಮಾನಗಳನ್ನು ಸೇರಿಸುತ್ತಿದ್ದೇವೆ. ಈ ಮೂಲಕ ದೇಶಿಯಾ ವಿಮಾನ ಸೇವೆ ಹಾಗೂ ಸಂಪಕ್ರವನ್ನು ಮತ್ತಷ್ಟು ಬಲಪಡಿಸುತ್ತಿರುವುದು ನಮಗೆ ಸಂತಸ ತಂದಿದೆ. ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಈಶಾನ್ಯ ಪ್ರದೇಶಗಳ ಸಂರರ್ಕ ಕೊಂಡಿಯಾಗಿ ಇಂಡಿಗೋ ಕಾರ್ಯನಿರ್ವಹಿಸಲಿದೆ. ಇದು ದೇಶದ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದು ಮುಖ್ಯ ಕಾರ್ಯತಂತ್ರ ಮತ್ತು ಕಂದಾಯ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?