'ಕಾಶ್ಮೀರದಲ್ಲಿ 17 ತಿಂಗಳಲ್ಲಿ ಏನಾಗಿದೆ ಕೇಳುವ ಕಾಂಗ್ರೆಸ್, 70 ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ'?

By Suvarna NewsFirst Published Feb 13, 2021, 5:57 PM IST
Highlights

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ವಾಗ್ವಾದವೇ ನಡೆದಿದೆ. ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ, ಅಂಕಿ ಅಂಶಗಳ ಮೂಲಕ ಉತ್ತರ ನೀಡಿದ್ದಾರೆ. ಈ ಕುರಿತು ಅಮಿತ್ ಶಾ ಮಾತಿನ ಪ್ರಮುಖ ಅಂಶ ಇಲ್ಲಿದೆ.

ನವದೆಹಲಿ(ಫೆ.13):  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ ಕೇಂದ್ರ ನಿರ್ಧಾರವನ್ನು ಕಾಂಗ್ರೆಸ್ ಪದೇ ಪದೇ ಟೀಕಿಸಿದೆ. ಇದೀಗ ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಿದ್ದಾರೆ. ಆರ್ಟಿಕಲ್ 370 ರದ್ದು ಮಾಡುವಾಗ ನೀಡಿದ ಭರವಸೆಗಳು ಏನಾದವು ಎಂದು ಕೇಳಿದೆ. ಇದಕ್ಕೆ ಅಂಕಿ ಅಂಶಗಳ ಮೂಲಕ ಉತ್ತರ ನೀಡಿದ್ದಾರೆ.

'ಈ ಬಾರಿ ಮೋದಿ ವಿಕಾಸ, ಮಮತಾ ವಿನಾಶ ಸಮರ

ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರದ ನೀಡಿದ ಅನುದಾನ ಹಾಗೂ ಹಲವು ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕಳೆದ 17 ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಪ್ರಶ್ನೆ ಕೇಳುವ ಕಾಂಗ್ರೆಸ್ ಕಳೆದ 70 ವರ್ಷದಲ್ಲಿ ಏನು ಮಾಡಿದ್ದೀರಿ ಅನ್ನೋದು ಹೇಳಿ ಎಂದು ಸವಾಲು ಹಾಕಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ. ರಾಜಕೀಯ ಮಾಡಲು ಹಲುವ ವಿಷಯಗಳಿವೆ. ಆದರೆ ದೇಶದ ಭದ್ರತೆ, ಅಭಿವೃದ್ಧಿ ವಿಚಾರದಲ್ಲಿ ಇಲ್ಲ ಸಲ್ಲದ ರಾಜಕೀಯ ಎಳೆದು ತಂದು ಮುಗ್ದ ನಾಗರೀಕರನ್ನು ಕತ್ತಲಲ್ಲಿ ಇಡಬೇಡಿ ಎಂದು ವಿಪಕ್ಷಗಳಿಗೆ ಶಾ ತಿರುಗೇಟು ನೀಡಿದರು.

 

Speaking in the Lok Sabha on J&K reorganisation (amendment) Bill-2021. https://t.co/GUmh8GQibT

— Amit Shah (@AmitShah)

ಇನ್ನು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ತಿದ್ದುಪಡಿ ಮಸೂದೆ ಮಂಡಿಸಿದೆ. ದ್ವನಿ ಮತದ ಮೂಲಕ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆ ಅಂಗೀಕಾರಗೊಂಡಿದೆ.  

click me!