ಸೈನಿಕರಿಗಾಗಿ ಸ್ವದೇಶಿ ಜೆಟ್‌ಪ್ಯಾಕ್‌ ಸಿದ್ಧ: ಏರೋ ಇಂಡಿಯಾದಲ್ಲಿ ಗಮನ ಸೆಳೆದ ಸ್ವದೇಶಿ ಜೆಟ್‌ಸ್ಯೂಟ್‌

By Kannadaprabha News  |  First Published Feb 14, 2023, 9:09 AM IST

ಬೆಂಗಳೂರಿನ ಸ್ಟಾರ್ಟ್‌ಅಪ್‌ ವೈಮಾನಿಕ ಕಂಪನಿ (start-up aerospace company) ಎಬ್ಸಲ್ಯೂಟ್‌ ಕಾಂಪೋಸೈಟ್ಸ್‌ ಪ್ರೈ.ಲಿ. ರೂಪಿಸಿರುವ ‘ಜೆಟ್‌ಪ್ಯಾಕ್‌’ 14ನೇ ಆವೃತ್ತಿಯ ಏರೋ ಇಂಡಿಯಾದ ಇಂಡಿಯನ್‌ ಪೆವಿಲಿಯನ್‌ನಲ್ಲಿ ಗಮನ ಸೆಳೆಯುತ್ತಿದೆ.


ಮಯೂರ್‌ ಹೆಗಡೆ, ಕನ್ನಡಪ್ರಭ ವಾರ್ತೆ

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಪಠಾಣ್‌ ಸಿನಿಮಾದಲ್ಲಿ ಜೆಟ್‌ಪ್ಯಾಕ್‌ (ಜೆಟ್‌ಸ್ಯೂಟ್‌) ಸಾಹಸ ದೃಶ್ಯ ನೋಡಿದ್ದೀರಾ? ಥೇಟ್‌ ಅಂಥದ್ದೇ ಜೆಟ್‌ಪ್ಯಾಕ್‌ ತೊಟ್ಟು ಭಾರತೀಯ ಸೈನಿಕರು ಆಗಸದಲ್ಲಿ ಹಾರುತ್ತ ವೈರಿಗಳ ವಿರುದ್ಧ ಸೆಣೆಸುವ ಕಾಲ ದೂರವಿಲ್ಲ. ಹೌದು. ದೇಶಿಯ ಅದರಲ್ಲೂ ಬೆಂಗಳೂರಿನ ಸ್ಟಾರ್ಟ್‌ಅಪ್‌ ವೈಮಾನಿಕ ಕಂಪನಿ (start-up aerospace company) ಎಬ್ಸಲ್ಯೂಟ್‌ ಕಾಂಪೋಸೈಟ್ಸ್‌ ಪ್ರೈ.ಲಿ. ರೂಪಿಸಿರುವ ‘ಜೆಟ್‌ಪ್ಯಾಕ್‌’ 14ನೇ ಆವೃತ್ತಿಯ ಏರೋ ಇಂಡಿಯಾದ ಇಂಡಿಯನ್‌ ಪೆವಿಲಿಯನ್‌ನಲ್ಲಿ ಗಮನ ಸೆಳೆಯುತ್ತಿದೆ.

Tap to resize

Latest Videos

undefined

ಭಾರತೀಯ ಸೇನೆ (Indian Army) ತನ್ನ ಸೈನಿಕರಿಗಾಗಿ ಜೆಟ್‌ಪ್ಯಾಕ್‌ ಖರೀದಿಸಲು ಮುಂದಾಗಿದ್ದು, ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಕಂಪನಿ ಇದರ ಪೂರೈಕೆಗೆ ಹೆಜ್ಜೆ ಇಟ್ಟಿದೆ. ಇನ್ನೊಂದು ವಾರದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ರಕ್ಷಣಾ ಸಚಿವಾಲಯ (Ministry of Defense) ಜೆಟ್‌ಪ್ಯಾಕ್‌ ಸ್ಯೂಟ್‌ಗಳನ್ನು ಪ್ರಾಯೋಗಿಕವಾಗಿ ಪೂರೈಕೆ ಮಾಡಿಕೊಳ್ಳಲು ಕಳೆದ ಜ.24ರಂದು ಪ್ರಸ್ತಾವನೆಯ ವಿನಂತಿ ಪ್ರಕ್ರಿಯೆ ನಡೆಸಿತ್ತು. ಅದರಂತೆ 48 ಜೆಟ್‌ಪ್ಯಾಕ್‌ಗಳನ್ನು ತರಿಸಿಕೊಳ್ಳಲು ಮುಂದಾಗಿದೆ. ಎಬ್ಸಲ್ಯೂಟ್‌ ಕಾಂಪೋಸೈಟ್ಸ್‌ ಪ್ರೈ.ಲಿ. ಇನ್ನೊಂದು ವಾರದಲ್ಲಿ ಸೈನ್ಯದೆದುರು ಪ್ರಾತ್ಯಕ್ಷಿಕೆ ನಡೆಸಲಿದೆ. ಸಾಧಕ ಬಾಧಕ ಪರೀಕ್ಷಿಸಿದ ಬಳಿಕ ಒಪ್ಪಿಗೆಯಾದರೆ ಮುಂದೆ ಕಂಪನಿಯಿಂದ ಜೆಟ್‌ಸ್ಯೂಟನ್ನು ಪೂರೈಕೆ ಮಾಡಿಕೊಳ್ಳಲಿದೆ.

Bengaluru: ಏರ್‌ ಶೋ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ‘ಜಿಯೋಸ್ಪೇಷಿಯಲ್‌’ ತಂತ್ರ!

ಹೇಗಿದೆ ಜೆಟ್‌ಪ್ಯಾಕ್‌?

ಕೈ ಬಳಿ ಎರಡು ಟರ್ಬೋಜೆಟ್‌ ಎಂಜಿನ್‌ ಹಾಗೂ ಹಿಂಭಾಗದಲ್ಲಿ 3 ಟರ್ಬೋ ಜೆಟ್‌ (turbojets) ಸೇರಿ ಒಟ್ಟೂ ಐದು ಎಂಜಿನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಸಾಮಾನ್ಯ ಏರ್‌ಕ್ರಾಫ್ಟ್‌ಗಳಲ್ಲಿ ಜೆಟ್‌ಎವೆನ್‌ಗಳನ್ನು ಬಳಸಲಾಗುತ್ತದೆ. ಆದರೆ, ಇಲ್ಲಿ ಯಂತ್ರ ನೇರವಾಗಿ ವ್ಯಕ್ತಿಯ ಸಂಪರ್ಕದಲ್ಲಿರುವ ಕಾರಣ ಸುರಕ್ಷತೆಗಾಗಿ ಡೀಸೆಲ್‌ ಬಳಸಲಾಗಿದೆ. ಸುಮಾರು 30 ಲೀಟರ್‌ ಡೀಸೆಲ್‌ ಟ್ಯಾಂಕ್‌ ಇದಕ್ಕಿದೆ. ಜೊತೆಗೆ ಹೆಚ್ಚಿನ ಪ್ರತ್ಯೇಕ ಟ್ಯಾಂಕನ್ನು ಅಳವಡಿಕೆ ಮಾಡಿಕೊಳ್ಳಬಹುದು. 52-70 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ಒಳಗೆ ಈ ಎಂಜಿನ್‌ ಕಾರ್ಯನಿರ್ವಹಿಸುವಂತೆ ಎಂಜಿನ್‌ ರೂಪಿಸಲಾಗಿದೆ.

ಸಾಮರ್ಥ್ಯವೇನು?

40 ಕೇಜಿ ಇರುವ ಈ ಸ್ಯೂಟ್‌ 80 ಕೇಜಿ ಇರುವ ಪೈಲಟನ್ನು  ಸುಲಲಿತವಾಗಿ ಹಾರಿಸಿಕೊಂಡು ಹೋಗುತ್ತಿದೆ. ಜತೆಗೆ ಕೇವಲ ಹತ್ತು ನಿಮಿಷದಲ್ಲಿ 10 ಕಿ.ಮೀ. ದೂರ ಹೋಗುವಷ್ಟು ವೇಗದ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಎಬ್ಸ್ಯೂಲೂಟ್‌ ಕಾಂಪೋಸೈಟ್ಸ್‌ ಪ್ರೈ.ಲಿ. ಸಂಸ್ಥಾಪಕ ನಿರ್ದೇಶಕ ರಾಘವ್‌ ರೆಡ್ಡಿ (Raghav Reddy) ತಿಳಿಸಿದರು. ತೈಲ ಟ್ಯಾಂಕ್‌ಗೆ ಅನುಗುಣವಾಗಿ ಹೆಚ್ಚಿನ ಹೊತ್ತು ಮೈಲೇಜ್‌ ಸಿಗುವಂತೆ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

Aero India 2023: 'ಏರೋ ಇಂಡಿಯಾ 2023'ದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಭಾಗಿ

ಎಲ್ಲಿ ಬಳಕೆ

ಸೈನ್ಯದಲ್ಲಿ ದುರ್ಗಮ ಪ್ರದೇಶದ ಕಾರ್ಯಾಚರಣೆಗೆ ಜೆಟ್‌ಪ್ಯಾಕ್‌ ಬಳಸಬಹುದು. ಕಡಿದಾದ ಎತ್ತರದ ಪ್ರದೇಶಕ್ಕೆ ತೆರಳಲು ಅನುಕೂಲವಾಗುತ್ತದೆ. ಪ್ರಕೃತಿ ವಿಕೋಪ(natural calamity), ಅಗ್ನಿ ಅವಘಡ, ಕಟ್ಟಡ ಕುಸಿತದ ವೇಳೆ ಡ್ರೋನ್‌, ಹೆಲಿಕಾಪ್ಟರ್‌ನಂತೆ ಇದು ಕೂಡ ನೆರವಿಗೆ ಧಾವಿಸಲಿದೆ. ಪ್ರಮುಖವಾಗಿ ಯುದ್ಧದ ವೇಳೆ ವೈರಿಗಳನ್ನು ಎದುರಿಸಲು ಸಹಕಾರಿ ಎಂದು ತಂತ್ರಜ್ಞರು ತಿಳಿಸಿದ್ದಾರೆ.

ಭಾರತದಲ್ಲಿ ಮೊದಲು

ಎಬ್ಸ್ಯೂಲೂಟ್‌ ಕಾಂಪೋಸೈಟ್ಸ್‌ ಪ್ರೈ.ಲಿ. ದೇಶಿಯವಾಗಿ ಜೆಟ್‌ಪ್ಯಾಕ್‌ ರೂಪಿಸಿರುವ ಭಾರತದ ಮೊದಲ ಕಂಪನಿ. ಹೊಸ ತಂತ್ರಜ್ಞಾನವಾದ ಹಿನ್ನೆಲೆಯಲ್ಲಿ ಇದರ ಕಾರ್ಯವಿಧಾನ, ಬಳಕೆ ಬಗ್ಗೆ ಕಂಪನಿಯೇ ತರಬೇತಿ ಶಿಬಿರವನ್ನು ನಡೆಸಲಿದೆ. ಸದ್ಯಕ್ಕೆ ಇಬ್ಬರು ಮಾತ್ರ ಈ ಜೆಟ್‌ಸ್ಯೂಟ್‌ ಧರಿಸಿ ಹಾರಾಟ ನಡೆಸುತ್ತಿದ್ದಾರೆ. ಸೈನ್ಯ ಇದನ್ನು ಒಪ್ಪಿ ಖರೀದಿಗೆ ಮುಂದಾದರೆ ನಾವೇ ತರಬೇತಿ ನೀಡುತ್ತೇವೆ ಎಂದು ಕಂಪನಿ ತಿಳಿಸಿದೆ.

Aero India: ಬಾನಂಗಳದಲ್ಲಿ ವಿಮಾನಗಳ ಚಿತ್ತಾರ: ಜನಾಕರ್ಷಣೆಗೊಂಡ ಆಂಜನೇಯ ಯುದ್ದ ವಿಮಾನ

ಬೆಂಗಳೂರು ಮೂಲದ ಸ್ಟಾರ್ಟ್ಅಪ್‌

ಎಬ್ಸಲ್ಯೂಟ್‌ ಕಾಂಪೋಸೈಟ್ಸ್‌ ಪ್ರೈ.ಲಿ. 2014ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಕಂಪನಿ. ಸೈನ್ಯಕ್ಕಾಗಿ ಜೆಟ್‌ಸ್ಯೂಟ್‌ ತಯಾರಿಕೆಯಲ್ಲಿ ತೊಡಗಿರುವ ದೇಶದ ಮೊದಲ ಕಂಪನಿ ಇದು. ರಿಚರ್ಡ್‌ ಇನ್‌ವೆಂಟರ್‌ ರಿಚರ್ಡ್‌ ಬ್ರೌನಿಂಗ್‌ (inventor Richard Browning) ಅವರಿಂದ ಸ್ಫೂರ್ತಿ ಪಡೆದು ನಾವು ಇದರ ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ತೊಡಗಿದ್ದೇವೆ ಎಂದು ಕಂಪನಿಯ ಸಂಸ್ಥಾಪಕ ರಾಘವ್‌ ರೆಡ್ಡಿ ತಿಳಿಸಿದರು.

ರಕ್ಷಣಾ ಸಚಿವಾಲಯ 48 ಜೆಟ್‌ಸ್ಯೂಟ್‌ನ್ನು ಪ್ರಾಯೋಗಿಕವಾಗಿ ಖರೀದಿಸಿ ಪರೀಕ್ಷೆಗೆ ಮುಂದಾಗಿದೆ. ನಮ್ಮ ಸ್ಟಾರ್ಟ್ಅಪ್‌ ಇನ್ನೊಂದು ವಾರದಲ್ಲಿ ಸೈನ್ಯದ ಉನ್ನತಾಧಿಕಾರಿಗಳ ಎದುರು ಪ್ರಾತ್ಯಕ್ಷಿಕೆ ನೀಡಲಿದೆ: ರಾಘವ್‌ ರೆಡ್ಡಿ, ಎಬ್ಸ್ಯೂಲೂಟ್‌ ಕಾಂಪೋಸೈಟ್ಸ್‌ ಪ್ರೈ.ಲಿ. ಸಂಸ್ಥಾಪಕ ನಿರ್ದೇಶಕ

click me!