ರೈಲ್ವೆ ಹಳಿಗಳನ್ನು ಸ್ಪೋಟಿಸಲು ಪಾಕ್ ಸಂಚು, ಗುಪ್ತಚರ ವಿಭಾಗದ ಎಚ್ಚರಿಕೆ!

By Santosh NaikFirst Published May 23, 2022, 11:14 AM IST
Highlights

ಪಾಕಿಸ್ತಾನದ ಐಎಸ್ಐ ತನ್ನ ಸ್ಲೀಪರ್ ಸೆಲ್‌ಗಳೊಂದಿಗೆ ಪಂಜಾಬ್ ಮತ್ತು ಸುತ್ತಮುತ್ತಲ ಭಾಗದ ರೈಲು ಹಳಿಗಳನ್ನು, ವಿಶೇಷವಾಗಿ ಸರಕು ಸಾಗಣೆ ರೈಲುಗಳು ಆಗಾಗ್ಗೆ ಬರುವ ಹಳಿಗಳನ್ನು ಸ್ಪೋಟ ಮಾಡಲು ಸಂಚು ರೂಪಿಸುತ್ತಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದೆ.

ನವದೆಹಲಿ (ಮೇ.23): ಪಂಜಾಬ್ (Punjab) ಮತ್ತು ಅದರ ಸುತ್ತಮುತ್ತಲಿನ (Other States) ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಗುರಿಯಾಗಿಸಲು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (Inter-Services Intelligence) ದೊಡ್ಡ ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು (Intelligence agencies) ಎಚ್ಚರಿಕೆ ನೀಡಿದೆ.

ಐಎಸ್‌ಐ ಸ್ಲೀಪರ್ ಸೆಲ್ ಗಳು ( ISI operatives) ಪಂಜಾಬ್ ಮತ್ತು ಪಕ್ಕದ ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಸ್ಫೋಟಿಸಲು ಯೋಜಿಸಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಸರಕು ಸಾಗಣೆ ರೈಲುಗಳ ಪ್ರಯಾಣವನ್ನು ತಡೆಯಲು ರೈಲ್ವೆ ಹಳಿಗಳನ್ನು ಸ್ಫೋಟಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ತಿಳಿಸಿವೆ.

ರೈಲ್ವೆ ಹಳಿಗಳನ್ನು ಗುರಿಯಾಗಿಸಲು ಐಎಸ್‌ಐ ಭಾರತದಲ್ಲಿನ ತನ್ನ ಸ್ಲೀಪರ್ ಸೆಲ್ ಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯಲ್ಲಿ ತಿಳಿಸಿವೆ. ಭಾರತದಲ್ಲಿ ಇರುವ ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳಿಗೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಭಾರಿ ಮೊತ್ತವನ್ನು ನೀಡಲಾಗುತ್ತಿದೆ.

click me!