ಏ.6 ರಾಮನವಮಿಯಂದು ರಾಮೇಶ್ವರಂ ಸಂಪರ್ಕಿಸುವ ಪಾಂಬನ್‌ ಸೇತುವೆಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ಮೋದಿ ಅವರು ರಾಮನವಮಿಯಂದು ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ನೂತನ ಪಾಂಬನ್‌ ರೈಲ್ವೆ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಶಿಥಿಲಗೊಂಡ ಹಳೆಯ ಸೇತುವೆಯ ಬದಲಿಗೆ ನಿರ್ಮಾಣಗೊಂಡ ಈ ಸೇತುವೆಯು ಭಾರತದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಆಗಿದೆ.

Indias First Vertical Railway Bridge to Connect Rameswaram will Inaugurate on April 6

ರಾಮೇಶ್ವರಂ: ಏ.6ರಂದು ರಾಮನವಮಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಗಳ ಪವಿತ್ರ ಕ್ಷೇತ್ರ ರಾಮೇಶ್ವರಂ ಅನ್ನು ಸಂಪರ್ಕಿಸುವ ನೂತನ ಪಾಂಬನ್‌ ರೈಲ್ವೆ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. 

ಈ ಹಿಂದೆ 1914ರಲ್ಲಿ ನಿರ್ಮಿತ ರೈಲ್ವೆ ಸೇತುವೆಯ ಮೂಲಕ ರಾಮೇಶ್ವರಂಗೆ ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಆ ಸೇತುವೆ ಶಿಥಿಲಗೊಂಡ ಕಾರಣ 2022ರಲ್ಲಿ ರೈಲು ಸಂಪರ್ಕ ಕಡಿತಗೊಳಿಸಲಾಗಿತ್ತು. ಅದರ ಸಮೀಪದಲ್ಲೇ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದು ಇದೀಗ ಪೂರ್ಣಗೊಂಡಿದೆ. ಈಗಾಗಲೇ ಈ 2 ಕಿ.ಮೀ. ಉದ್ದದ ಸೇತುವೆಯಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಅಂದು ರೈಲು ಸಂಚಾರಕ್ಕೂ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ತಿರುಪತಿ, ರಾಮೇಶ್ವರಂ ಯಾತ್ರೆ ಮಾಡೋರಿಗೆ IRCTC ಭರ್ಜರಿ ಆಫರ್; 9 ದಿನಗಳ ಊಟ, ವಸತಿ ಬೆಲೆಯೂ ಕಮ್ಮಿ!

Latest Videos

ಸೇತವೆ ವೈಶಿಷ್ಟ್ಯ:
ಇದು ಭಾರತದ ಮೊದಲ ವರ್ಟಿಕಲ್‌ ರೈಲ್ವೆ ಬ್ರಿಡ್ಜ್‌ ಆಗಲಿದೆ. ಸಮುದ್ರಮಾರ್ಗದಲ್ಲಿ ಹಡಗುಗಳ ಸಂಚಾರ ವೇಳೆ ಸೇತುವೆಯು ಮೇಲಕ್ಕೆತ್ತಲ್ಪಟ್ಟು, ಬಳಿಕ ಅದು ಸ್ವಸ್ಥಾನಕ್ಕೆ ಮರಳಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ಇದಾಗಿದೆ.

ರಾಮಸೇತುವಿನ ಮತ್ತಷ್ಟು ರಹಸ್ಯ ಬಿಚ್ಚಿಟ್ಟ ಇಸ್ರೋ!

vuukle one pixel image
click me!