ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು

Kannadaprabha News   | Kannada Prabha
Published : Dec 12, 2025, 05:15 AM IST
 hydrogen water taxi

ಸಾರಾಂಶ

ದೇಶದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ(ಕಿರು ಪ್ರವಾಸಿ ಹಡಗು) ಸೇವೆಗೆ ವಾರಾಣಸಿಯಲ್ಲಿ ಚಾಲನೆ ಸಿಕ್ಕಿದೆ. ಈ ಮೂಲಕ ಶುದ್ಧ ಇಂಧನದಿಂದ ಚಲಿಸುವ ಜಲಸಾರಿಗೆ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಇದೀಗ ಭಾರತ ಸೇರ್ಪಡೆಯಾಗಿದೆ

ನವದೆಹಲಿ: ದೇಶದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ(ಕಿರು ಪ್ರವಾಸಿ ಹಡಗು) ಸೇವೆಗೆ ವಾರಾಣಸಿಯಲ್ಲಿ ಚಾಲನೆ ಸಿಕ್ಕಿದೆ. ಈ ಮೂಲಕ ಶುದ್ಧ ಇಂಧನದಿಂದ ಚಲಿಸುವ ಜಲಸಾರಿಗೆ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಇದೀಗ ಭಾರತ ಸೇರ್ಪಡೆಯಾಗಿದೆ. ಚೀನಾ, ನಾರ್ವೆ, ನೆದರ್‌ಲ್ಯಾಂಡ್‌, ಜಪಾನ್‌ ದೇಶಗಳು ಈ ರೀತಿ ಹೈಡ್ರೋಜನ್‌ ಚಾಲಿತ ಹಡಗುಗಳನ್ನು ಹೊಂದಿವೆ.

ನಮೋ ಘಾಟ್‌ನಲ್ಲಿ ವಾಟರ್‌ ಟ್ಯಾಕ್ಸಿ ಸೇವೆಗೆ ಚಾಲನೆ

ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ್‌ ಅವರು ಬುಧವಾರ ನಮೋ ಘಾಟ್‌ನಲ್ಲಿ ವಾಟರ್‌ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ್ದು, ಇದು ರವಿದಾಸ್‌ ಘಾಟ್‌ನಿಂದ ನಮೋ ಘಾಟ್‌ ನಡುವೆ ಸಂಚರಿಸಲಿದೆ.

50 ಮಂದಿ ಪ್ರಯಾಣಿಸಬಹುದಾಗಿದೆ

ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ ನಿರ್ಮಿತ ಈ ವಾಟರ್‌ ಟ್ಯಾಕ್ಸಿಯಲ್ಲಿ 50 ಮಂದಿ ಪ್ರಯಾಣಿಸಬಹುದಾಗಿದೆ. ಸಸ್ಯಾಹಾರಿ ತಿಂಡಿ-ತಿನಿಸು, ಸಿಸಿಟೀವಿ ಕಣ್ಗಾವಲು, ಬಯೋ ಟಾಯ್ಲೆಟ್‌ ನಂಥ ಸೌಲಭ್ಯಗಳಿವೆ. ಹೈಬ್ರಿಡ್‌ ಎಲೆಕ್ಟ್ರಿಕ್‌-ಹೈಡ್ರೋಜನ್‌ ಎಂಜಿನ್‌ನಿಂದ ಈ ವಾಟರ್‌ ಟ್ಯಾಕ್ಸಿ ಸಂಚರಿಸುತ್ತದೆ. ಈ ವಾಟರ್ ಟ್ಯಾಕ್ಸಿಯಲ್ಲಿ ಮೂರು ಕಿಲೋ ವ್ಯಾಟ್‌ನ ಸೋಲಾರ್ ಪ್ಯಾನಲ್‌ ಅಳವಡಿಸಲಾಗಿದೆ. ಯಾವುದೇ ಸದ್ದಿಲ್ಲದೆ, ಹೊಗೆಯುಗುಳದೆ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕೇಂದ್ರ ಸರ್ಕಾರದ ಸ್ವಚ್ಛ, ಹಸಿರು ಸಾರಿಗೆಗೆ ಉತ್ತೇಜನ ನೀಡುವ ಭಾಗವಾಗಿ ಈ ವಾಟರ್‌ ಟ್ಯಾಕ್ಸಿ ಸೇವೆಗೆ ಚಾಲನೆ ಸಿಕ್ಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರೋಪ ಸಾಬೀತು : ಪಾಕ್‌ ಐಎಸ್‌ಐ ಮಾಜಿ ಮುಖ್ಯಸ್ಥ ಹಮೀದ್‌ಗೆ 14 ವರ್ಷ ಜೈಲು
ಹೆಣ್ಣು ಮಕ್ಕಳಿಗೆ ತವರು ಸುರಕ್ಷಿತ ಮಾಡಿ : ನಿತೀಶ್‌ಗೆ ಲಾಲು ಪುತ್ರಿ!