
ನವದೆಹಲಿ(ಏ.26): 2021ರಲ್ಲಿ ಭಾರತ(India) 5.75 ಲಕ್ಷ ಕೋಟಿ ರು.ಗಳನ್ನು ರಕ್ಷಣಾ ವಲಯಕ್ಕೆ(Defense Sector) ವೆಚ್ಚ ಮಾಡಿದ್ದು, ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ರಕ್ಷಣಾ ಬಜೆಟ್ ಹೊಂದಿದ 3ನೇ ದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸಚ್‌ರ್ ಇನ್‌ಸ್ಟಿಟ್ಯೂಟ್ ಎಂಬ ಚಿಂತಕರ ಚಾವಡಿ ತನ್ನ ವರದಿಯಲ್ಲಿ ತಿಳಿಸಿದೆ. ಇದೇ ವೇಳೆ ಅಮೆರಿಕ, ಚೀನಾ, ಭಾರತ, ಬ್ರಿಟನ್ ಮತ್ತು ರಷ್ಯಾ ದೇಶಗಳು ಅತಿ ಹೆಚ್ಚು ರಕ್ಷಣಾ ಬಜೆಟ್ ಹೊಂದಿರುವ ಟಾಪ್ 5 ದೇಶಗಳಾಗಿವೆ ಎಂದು ವರದಿ ಹೇಳಿದೆ.
ವರದಿ ಅನ್ವಯ 2020ಕ್ಕೆ ಹೋಲಿಸಿದರೆ 2021ರಲ್ಲಿ ಭಾರತದ ರಕ್ಷಣಾ ವೆಚ್ಚ ಶೇ.0.9ರಷ್ಟು ಏರಿಕೆ ಕಂಡು 5.75 ಲಕ್ಷ ಕೋಟಿ ರು.ತಲುಪಿದೆ. ಇನ್ನು 2012ಕ್ಕೆ ಹೋಲಿಸಿದರೆ ಭಾರತದ ರಕ್ಷಣಾ ಬಜೆಟ್(Defense Budget of India) ಗಾತ್ರ ಶೇ.33ರಷ್ಟು ಹೆಚ್ಚಳವಾಗಿದೆ. ಗಡಿಯಲ್ಲಿ ಚೀನಾ(China) ಮತ್ತು ಪಾಕಿಸ್ತಾನದೊಂದಿಗೆ(Pakistan) ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ತನ್ನ ಸೇನೆಯನ್ನು ಅಧುನೀಕರಣಗೊಳಿಸುತ್ತಿದೆ ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಒತ್ತು ನೀಡಿದೆ. 2021ರಲ್ಲಿ ಒಟ್ಟು ಬಜೆಟ್‌ನಲ್ಲಿ ಶೇ.64ರಷ್ಟನ್ನು ಸ್ವದೇಶಿ ಖರೀದಿಗೆ ವಿನಿಯೋಗಿಸಿದೆ ಎಂದು ವರದಿ ಹೇಳಿದೆ.
ಆಫ್ಘನ್‌ನಿಂದ ಮರಳಿದ 80 ಉಗ್ರರ ಭಾರತಕ್ಕೆ ಕಳಿಸಲು ಪಾಕ್ ಸಿದ್ಧತೆ
ಟಾಪ್ 5:
ಇನ್ನು ಅಮೆರಿಕ(America), ಚೀನಾ, ಭಾರತ, ಬ್ರಿಟನ್(Britain) ಮತ್ತು ರಷ್ಯಾ(Russia) ದೇಶಗಳು ಅತಿ ಹೆಚ್ಚು ರಕ್ಷಣಾ ಬಜೆಟ್ ಹೊಂದಿರುವ ಟಾಪ್ 5 ದೇಶಗಳಾಗಿವೆ. ಈ 5 ದೇಶಗಳು ವಿಶ್ವದ ಒಟ್ಟು ರಕ್ಷಣಾ ಬಜೆಟ್‌ನಲ್ಲಿ ಶೆ.62ರಷ್ಟುಪಾಲು ಹೊಂದಿವೆ. ಈ ಪೈಕಿ ಅಮೆರಿಕ ಮತ್ತು ಚೀನಾ ಪಾಲೇ ಶೇ.52ರಷ್ಟಿದೆ ಎಂದು ವರದಿ ಹೇಳಿದೆ. ಜಾಗತಿಕ ರಕ್ಷಣಾ ಬಜೆಟ್ 158 ಲಕ್ಷ ಕೋಟಿ ರು. ತಲುಪಿದೆ ಎಂದು ವರದಿ ಹೇಳಿದೆ.
ಅಮೆರಿಕ 60 ಲಕ್ಷ ಕೋಟಿ ರು.
ಚೀನಾ 22 ಲಕ್ಷ ಕೋಟಿ ರು.
ಭಾರತ 5.75 ಲಕ್ಷ ಕೋಟಿ ರು.
ಬ್ರಿಟನ್ 5.13 ಲಕ್ಷ ಕೋಟಿ ರು.
ರಷ್ಯಾ 4.94 ಲಕ್ಷ ಕೋಟಿ ರು.
ಯುದ್ಧದ ನಡುವೆಯೇ ಭಾರತಕ್ಕೆ ರಷ್ಯಾದಿಂದ ‘ಎಸ್-400’ ಆಗಮನ!
ಭಾರತದ ಶಸ್ತ್ರಾಸ್ತ್ರ ಉತ್ಪಾದನೆಗೆ ಬೆಂಗ್ಳೂರು 40% ಕೊಡುಗೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಆತ್ಮ ನಿರ್ಭರ ಭಾರತ(India) ಯೋಜನೆ ಅಡಿ ಸ್ವದೇಶಿ ಉತ್ಪನ್ನಕ್ಕೆ ಆದ್ಯತೆ ನೀಡಿದ್ದು ದೇಶದ ರಕ್ಷಣಾ ಇಲಾಖೆಗೆ ಬೇಕಾದ ಶಸ್ತ್ರಾಸ್ತ್ರ, ಯುದ್ಧೋಪಕರಣಗಳ ಪೈಕಿ ಶೇ.60 ರಷ್ಟನ್ನು ನಾವೇ ತಯಾರು ಮಾಡಲು ಸಾಧ್ಯವಾಗಿದೆ. ಇದರಲ್ಲಿ ಬೆಂಗಳೂರಿನ(Bengaluru) ಪಾಲು ಶೇ.40 ರಷ್ಟುಇರುವುದು ವಿಶೇಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಂತಸ ವ್ಯಕ್ತಪಡಿಸಿದ್ದರು.
ಏ.09 ರಂದು ಸ್ವದೇಶಿ ಜಾಗರಣ ಮಂಚ್‌ನಿಂದ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ‘ಸ್ವದೇಶಿ ಮೇಳ’ದ ಮೂರನೇ ದಿನವಾದ ಶುಕ್ರವಾರ ಮೇಳಕ್ಕೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.
ರಕ್ಷಣಾ ಇಲಾಖೆಗೆ(Department of Defense) ಬೇಕಾದ ಶಸ್ತ್ರಾಸ್ತ್ರ(Arms), ಯುದ್ಧೋಪಕರಣಗಳಲ್ಲಿ ಶೇ.60 ರಷ್ಟನ್ನು ದೇಶಿಯವಾಗಿಯೇ ತಯಾರು ಮಾಡಲಾಗುತ್ತಿದೆ. ತಯಾರಿಕಾ ವಲಯದಲ್ಲಿ ಮೇಕ್ ಇನ್ ಇಂಡಿಯಾ(Make in India) ದೊಡ್ಡ ಬದಲಾವಣೆ ತಂದಿದೆ. ಮುದ್ರಾ ಯೋಜನೆ ಮೂಲಕ ಲಕ್ಷಾಂತರ ಯುವಕರಿಗೆ ಸಾಲ ನೀಡಲಾಗುತ್ತಿದೆ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ