ಭಾರತದ ಚಾರ್ಲ್ಸ್ ಶೋಭರಾಜ್, ಜಡ್ಜ್‌ನಂತೆ ನಟಿಸಿ ಸಾವಿರಾರು ಕೈದಿಗಳ ಬಿಡುಗಡೆಗೊಳಿಸಿದ್ದ ಕಳ್ಳ ಧನಿರಾಮ್ ನಿಧನ

By Kannadaprabha NewsFirst Published Apr 22, 2024, 11:28 AM IST
Highlights

 ನ್ಯಾಯಾಧೀಶರಂತೆ ನಟನೆ ಮಾಡಿ, ಜೈಲಿನಲ್ಲಿದ್ದ 2 ಸಾವಿರಕ್ಕೂ ಅಧಿಕ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಿದ್ದ ಖತರ್ನಾಕ್ ಕಳ್ಳ 85 ವರ್ಷದ ಧನಿ ರಾಮ್ ಮಿತ್ತಲ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ.

ನವದೆಹಲಿ: ನ್ಯಾಯಾಧೀಶರಂತೆ ನಟನೆ ಮಾಡಿ, ಜೈಲಿನಲ್ಲಿದ್ದ 2 ಸಾವಿರಕ್ಕೂ ಅಧಿಕ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಿದ್ದ ಖತರ್ನಾಕ್ ಕಳ್ಳ 85 ವರ್ಷದ ಧನಿ ರಾಮ್ ಮಿತ್ತಲ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ.

ಭಾರತದ ಚಾರ್ಲ್ಸ್ ಶೋಭರಾಜ್ ಎಂದೇ ಕುಖ್ಯಾತಿ ಗಳಿಸಿದ ಧನಿ ರಾಮ್ ಮಿತ್ತಲ್ ಜಡ್ಜ್ ರಂತೆ ನಟಿಸಿ ಸಿಕ್ಕಿ ಬಿದ್ದಿದ್ದು ಮಾತ್ರವಲ್ಲದೇ ತನ್ನ ವೈಯಕ್ತಿಕ ಖುಷಿಗಾಗಿ ಬೇರೆ ಬೇರೆ ಫ್ಯಾನ್ಸಿ ನಂಬರ್‌ಗಳನ್ನು ಹೊಂದಿರುವ ಕಾರುಗಳನ್ನು ಕಳ್ಳತನ ಮಾಡಿ ಕುಖ್ಯಾತಿ ಗಳಿಸಿದ್ದ. ಹರಿಯಾಣ, ಚಂಡೀಗಢ, ಪಂಜಾಬ್, ರಾಜಸ್ಥಾನ ಭಾಗಗಳಲ್ಲಿ ಮಿತ್ತಲ್ ಹೆಸರಲ್ಲಿ 150 ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿದ್ದವು.

ಅಲ್ಲದೇ 90 ಕ್ಕೂ ಹೆಚ್ಚು ಸಲ ಆತನನ್ನು ಕಂಬಿ ಹಿಂದೆ ಹಾಕಲಾಗಿತ್ತು. 1000ಕ್ಕೂ ಹೆಚ್ಚು ವಂಚನೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾ ಗಿದ್ದ ಮಿತ್ತಲ್ 1964 ರಲ್ಲಿ ಮೊದಲ ಸಲ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ತನ್ನ ವೈಯಕ್ತಿಕ ಬಳಕೆಗಾಗಿ ಹರಿಯಾಣದ ಝಜ್ಜರ್‌ನ್ಯಾಯಾಲಯದ ಪಾರ್ಕಿಂಗ್ ಏರಿಯಾದಲ್ಲಿ ಕಾರನ್ನು ಕಳ್ಳತನ ಮಾಡಿ ಸುದ್ದಿಯಾಗಿದ್ದ. ಕೊನೆಯದಾಗಿ 2017 ರಲ್ಲಿ ತನ್ನ 77 ನೇ ವಯಸ್ಸಿನಲ್ಲಿ ಕಾರು ಕಳ್ಳತನ ಮಾಡಿದ್ದಕ್ಕೆ 95ನೇ ಸಲ ಅರೆಸ್ಟ್ ಮಾಡಿದ್ದು ದಾಖಲೆಯಾಗಿತ್ತು. ವಿಶೇಷವೆಂದ್ರೆ ಈತ ಕಾನೂನು ಪದವಿಯನ್ನೂ ಪಡೆದಿದ್ದ. ಅಲ್ಲದೇ ತನ್ನ ಪರ ತಾನೇ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸುತ್ತಿದ್ದ. 

ಮಂಗಳೂರು: ಭೂಗತ ಪಾತಕಿ ರವಿಪೂಜಾರಿ ಸಹಚರ ಅರೆಸ್ಟ್, ಮೋಸ್ಟ್ ವಾಂಟೆಡ್‌ ಶಾರ್ಪ್ ಶೂಟರ್..!

ಮಿತ್ತಲ್ ಅವರು ಕಾನೂನು ಪದವೀಧರರಾಗಿದ್ದು, ಭಾರತದ ಅತೀ ಹೆಚ್ಚು ಕಲಿತಿರುವ ಬುದ್ಧಿವಂತ ಅಪರಾಧಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದರು. ಇದರ ಜೊತೆಗೆ ಕೈಬರಹದ ಸ್ಪೆಷಲಿಸ್ಟ್ ಎನಿಸಿದ್ದ ಮಿತ್ತಲ್ ಲಿಪಿಕಾರನ್ನು ಆಗಿದ್ದರು. 1968ರಿಂದ 1974ರವರೆಗೆ ನಕಲಿ ದಾಖಲೆಗಳನ್ನು ಬಳಸಿ ಸ್ಟೇಷನ್ ಮಾಸ್ಟರ್ ಆಗಿಯೂ ಕೆಲಸ ಮಾಡಿದ್ದರು. ಆದರೆ ನಂತರದಲ್ಲಿ ಕಳ್ಳನಾಗಿ ಬದಲಾಗಿದ್ದರು. ಸಾವಿರಕ್ಕೂ ಹೆಚ್ಚು ಕಾರುಗಳನ್ನು ಕಳವು ಮಾಡಿದ ಅಪಖ್ಯಾತಿ ಇವರದಾಗಿದ್ದು,  ಹಾಡಹಗಲೇ ಕಾರನ್ನು ಎಬ್ಬಿಸುವುದು ಇವರ ಕೈಚಳಕದಲ್ಲಿ ಒಂದಾಗಿತ್ತು.

Bitcoin ಹಗರಣಕ್ಕೆ ಮತ್ತೊಂದು ಟ್ವಿಸ್ಟ್: ಭೂಗತವಾಗಿದ್ದ ನಟೋರಿಯಸ್ ಹ್ಯಾಕರ್ ಅರೆಸ್ಟ್!

click me!