
ನವದೆಹಲಿ (ಫೆ.22): ಪುದುಚೇರಿಯ ವಿಶ್ವ ರಾಜಕುಮಾರ್ ಎಂಬ 20 ವರ್ಷದ ಭಾರತೀಯ ವಿದ್ಯಾರ್ಥಿ ಮೆಮೊರಿ ಲೀಗ್ ವಿಶ್ವ ಚಾಂಪಿಯನ್ಶಿಪ್ ಜಯಿಸಿದ್ದು 5,000 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಪುದುಚೇರಿ ಮೂಲದ ಮಣಕುಲ ವಿನಾಯಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಯಾಗಿದ್ದಾರೆ. ಈ ಸಾಧನೆ ಮೂಲಕ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
ವಿಶ್ವ ರಾಜಕುಮಾರ್ 13.50 ಸೆಕೆಂಡ್‌ಗಳಲ್ಲಿ 80 ಸಂಖ್ಯೆಗಳನ್ನು ಮತ್ತು 8.40 ಸೆಕೆಂಡ್‌ಗಳಲ್ಲಿ 30 ಚಿತ್ರಗಳನ್ನು ನೆನಪಿಸಿಕೊಂಡು ಹೇಳುವ ಮೂಲಕ ಈ ಸಾಧನೆಗೈದಿದ್ದಾರೆ.
ಏನಿದು ಸ್ಪರ್ಧೆ?:ಮೆಮೊರಿ ಲೀಗ್ ವಿಶ್ವ ಚಾಂಪಿಯನ್ ಆನ್‌ಲೈನ್‌ನಲ್ಲಿ ನಡೆದಿದ್ದು, ಪರಸ್ಪರ ಇಬ್ಬರ ನಡುವೆ ಸ್ಪರ್ಧೆ ನಡೆಯುತ್ತದೆ. ಸ್ಪರ್ಧಾಳುಗಳಿಗೆ ಹಲವು ವಿಚಾರಗಳನ್ನು ನೆನಪಿಸಿಕೊಳ್ಳುವ ಸವಾಲುಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ ಗಳಿಕೆ ಅಮೆರಿಕಾ ಅಧ್ಯಕ್ಷರಿಗಿಂತ ಡಬಲ್!
ಸ್ಕ್ರೀನ್ನಲ್ಲಿ 80 ಸಂಖ್ಯೆಗಳನ್ನು ಯಾದೃಚ್ಛಿಕ (ರ್‍ಯಾಂಡಂ) ಕ್ರಮದಲ್ಲಿ ಬರೆದು ನಿಗದಿತ ಸೆಕೆಂಡ್‌ಗಳಲ್ಲಿ ಥಟ್ಟನೆ ಮಾಯ ಮಾಡಲಾಗುತ್ತದೆ. ಸ್ಪರ್ಧಿಗಳಿಗೆ ಸ್ಕ್ರೀನ್ನಲ್ಲಿ ಮೂಡಿದ ಸಂಖ್ಯೆಗಳನ್ನು ಅದೇ ಕ್ರಮದಲ್ಲಿ ತಪ್ಪಿಲ್ಲದೆ ಹೇಳುವ ಸವಾಲು ನೀಡಲಾಗುತ್ತದೆ. ಇದೇ ರೀತಿ ಚಿತ್ರಗಳನ್ನೂ ನೀಡಲಾಗುತ್ತದೆ. ಯಾವ ಸ್ಪರ್ಧಿ ಎಷ್ಟು ಕಡಿಮೆ ಸಮಯದಲ್ಲಿ ಸ್ಕ್ರೀನ್ನಲ್ಲಿ ನೋಡಿದ್ದನ್ನು ಸರಿಯಾಗಿ ನೆನಪಿಟ್ಟುಕೊಂಡು ಹೇಳುತ್ತಾನೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗುತ್ತದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ