ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ದಿನ ದೂರವಿಲ್ಲ!

By Santosh Naik  |  First Published Sep 21, 2023, 9:00 PM IST

ಬಾಹ್ಯಾಕಾಶದಲ್ಲಿ ಭಾರತ ಅಭೂತಪೂರ್ವ ಯಶಸ್ಸು ಕಂಡಿದೆ. ಚಂದ್ರಯಾನ-3 ಹಾಗೂ ಗಗನಯಾನದ ಬಳಿಕ ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವ ಆಶಾಭಾವವನ್ನು ಇಸ್ರೋ ಚೀಫ್‌ ಎಸ್‌.ಸೋಮನಾಥ್‌ ವ್ಯಕ್ತಪಡಿಸಿದ್ದಾರೆ.
 


ಬೆಂಗಳೂರು (ಸೆ.21): ಅಮೆರಿಕ ತನ್ನ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸುತ್ತದೆ. ಅದೇ ನಿಲ್ದಾಣದಲ್ಲಿ ರಷ್ಯಾದ ಗಗನಯಾತ್ರಿಗಳಿಗೂ ಸ್ಥಾನವಿದೆ. ಚೀನಾ ಕೂಡ ಬಾಹ್ಯಾಕಾಶದಲ್ಲಿ ತನ್ನ ನಿಲ್ದಾಣವನ್ನು ಹೊಂದಿದೆ. ಖಗೋಳ ಕ್ಷೇತ್ರದಲ್ಲಿ ಭಾರತವೂ ಸಾಧನೆ ಮಾಡುತ್ತಿರುವಾಗ, ಭಾರತ ತನ್ನದೇ ಆದಂಥ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವುದು ಯಾವಾಗ ಎನ್ನುವ ಪ್ರಶ್ನೆ ಎಲ್ಲರಲ್ಲಿದೆ. ಈ ಬಗ್ಗೆ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌, ಏಷ್ಯಾನೆಟ್‌ ನ್ಯೂಸ್‌ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಅವರೊಂದಿಗೆ ಮಾತನಾಡಿದ್ದಾರೆ.

ಚಂದ್ರಯಾನ, ಚಂದ್ರನ ಮೇಲೆ ಹೋಗೊದಷ್ಟೆ ಅಲ್ಲ ಇನ್ನೂ ಹೆಚ್ಚಿನ ಗುರಿ ನೀಡುತ್ತೆ. ಪ್ರಶ್ನೆ ಏನು ಅಂದ್ರೆ ಹೆಚ್ಚಿನ ಗುರಿ ಯಾವುದು? ಅನ್ನೋ ಪ್ರಶ್ನೆ ಬರುತ್ತೆ. ನಮ್ಮಲ್ಲಿ ಒಂದು ಟ್ರಾಕ್ ಇದೆ. ಚಂದ್ರಯಾನ 1, ಚಂದ್ರಯಾನ 2 , ಚಂದ್ರಯಾನ 3. ಒಂದು ಮಂಗಳಯಾನ ಕೂಡ ನಡೆಸಿದ್ದೇವೆ, ಆಸ್ಟ್ರೋ ಸ್ಯಾಟ್ ಕೂಡ ನಡೆಸಿದ್ದೇವೆ, ಎಕ್ಸ್ಪೋ ಸ್ಯಾಟ್ ನಡೆಸುತ್ತಿದ್ದೇವೆ. ಹ್ಯೂಮನ್ ಸ್ಪೇಸ್ ಟ್ರಾಕ್ ನಡೆಯುತ್ತಿದೆ, ಮಾನವನನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಅದು. ಪುನರ್ ಬಳಕೆಯ ರಾಕೆಟ್‌  ಬಗ್ಗೆಯೂ ಗಮನ ಹರಿಸುತ್ತಿದ್ದೇವೆ. ಈ ಎಲ್ಲಾ ಯೋಜನೆಗಳನ್ನ ಒಟ್ಟು ಗೂಡಿಸಿ, ಮಾನವ ಒಂದು ದಿನ ಚಂದ್ರ ಮೇಲೆ ಕಾಲಿಡುವುದರ ಬಗ್ಗೆ ಯಾಕೆ ಭಾರತ ಈ ಬಗ್ಗೆ ಚಿಂತಿಸಬಾರದು ಎನ್ನುವ ಯೋಚನೆಗಳೂ ನಮ್ಮ ಮುಂದಿದೆ ಎಂದು ಸೋಮನಾಥ್‌ ಹೇಳಿದರು.

Tap to resize

Latest Videos

ಅದರೊಂದಿಗೆ ನಾಳೆ ನಮ್ಮದೇ ಬಾಹ್ಯಾಕಾಶ ನಿಲ್ದಾಣವನ್ನ ನಿರ್ಮಿಸುವ ಯೋಜನೆ ಇಸ್ರೋದ ಮುಂದಿದೆ. ಆಗ ಬಾಹ್ಯಾಕಾಶದಲ್ಲಿ ಕೆಲ ದಿನ ಉಳಿದುಕೊಂಡು ಸಂಶೋಧನೆಗಳನ್ನು ಮುಂದುವರಿಸಬಹುದಲ್ಲ. ಸಣ್ಣ ಸಣ್ಣ ವಿಚಾರ ಬಳಸಿ ದೊಡ್ಡ ದೊಡ್ಡ ಯೋಜನೆಗಳನ್ನ ಯಾಕೆ ಮಾಡಬಾರದು. ನಾವು ನಮ್ಮ ಯಶಸ್ಸಿನಿಂದ ಈ ರೀತಿ ಕಲ್ಪನೆಗಳನ್ನ ಮಾಡುವ ಉತ್ಸಾಹ ಹೆಚ್ಚಾಗಿದೆ. ಇವತ್ತು ಅದನ್ನ ಸಾಧಿಸಲು ಅರ್ಹರಾಗಿದ್ದೇವೆ. ಕೆಲ ವರ್ಷಗಳಲ್ಲಿ ನಮ್ಮ ಸಾಮರ್ಥ್ಯವನ್ನ ಇನ್ನೂ ಹೆಚ್ಚಿಸಿಕೊಳ್ಳಲಿದ್ದೇವೆ. ನಾವು ಸದ್ಯದಲ್ಲೇ ಭೂ ಕಕ್ಷೆಗೆ ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣ ಕಳಿಸಲಿದ್ದೇವೆ. ವೈಜ್ಞಾನಿಕ ಉದ್ದೇಶಕ್ಕಾಗಿ ನಾವು ಇದನ್ನ ಮಾಡುತ್ತಿದ್ದೇವೆ. ಸ್ಪೇಸ್ ಸ್ಟೇಷನ್ ನಲ್ಲಿ ರೋಬೋಟಿಕ್ ನಡೆಸುವುದು ಉದ್ಯಮಗಳಿಗೆ ಅತ್ಯಂತ ಮುಖ್ಯ. ಹೊಸ ಉಪಕರಣ ಅನ್ವೇಷಣೆ, ಮೆಡಿಕಲ್ ಸಿಂಥಸಿಸ್, 3ಡಿ ಆರ್ಗನ್ ಪ್ರಿಂಟಿಂಗ್, ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಗೆ ಇದು ಸಹಾಯಕವಾಗುತ್ತದೆ. ಗಗನ್ ಯಾನ ಯೋಜನೆ ಖಂಡಿತವಾಗಿಯೂ ಆಗುತ್ತದೆ ಎನ್ನುತ್ತಾರೆ.

ಚಂದ್ರಯಾನ ಹಾಗೂ ಗಗನ್ಯಾನ ಯೋಜನೆ ವಿಲೀನ ಮಾಡಿ,  ಚಂದ್ರನ ಮೇಲೆ ಮನುಷ್ಯನನ್ನ ಕಳಿಸುವ ಕೆಲಸ ಆಗಬೇಕು. ಅಮೃತ ಕಾಲದಲ್ಲಿ 2047ರ ವೇಳೆಗೆ ಇದು ಸಾಧ್ಯವಾದರೆ ಅದು ಅದ್ಭುತ ವಿಚಾರ. ಯಾಕೆ ಈ ಬಗ್ಗೆ ಕೆಲಸ ಮಾಡಬಾರದು ಎಂದು ನಮಗೆ ಅನ್ನಿಸಿದೆ. ಇದು ಚಂದ್ರನ ಬಳಿ ಹೋಗಿ ಮತ್ತೆ ಹಿಂತಿರುಗಲು ನಿರಂತರ ಅನ್ವೇಷಣೆ ಅಗತ್ಯ ಇದೆ. ಚಂದ್ರನ ಮೇಲೆ ನಿರಂತರ ಅಧ್ಯಯನದಿಂದ ಇದು ಸಾಧ್ಯವಾಗಲಿದೆ ಸಾಫ್ಟ್ ಲ್ಯಾಂಡಿಂಗ್ ಬಳಿಕ ಟೇಕ್ ಆಫ್ ಆಗಿ ಭೂಮಿಗೆ ಹಿಂತಿರುಗಬೇಕು. ನಾವು ಅತ್ಯಂತ ಕಡಿಮೆ ಅವಧಿಯಲ್ಲಿ ಇದನ್ನ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ. ಚಂದ್ರನ ಮೇಲಿನ ಸ್ಯಾಂಪಲ್ಸ್ ಅನ್ನ ಇಲ್ಲಿಗೆ ತಂದು ಅಧ್ಯಯನ ಮಾಡುವ ಬಗ್ಗೆ ಯೋಚನೆ ಇದೆ. ಜತೆಗೆ ರೋಬೋಟ್ ಅನ್ನ ಚಂದ್ರನ ಮೇಲೆ ಕಳಿಸಿ ಅಧ್ಯಯನ ನಡೆಸುವ ಬಗ್ಗೆ ಮುಂದಿನ ಕೆಲ ವರ್ಷಗಳಲ್ಲಿ ಭಾರತೀಯ ಚಂದ್ರ ಮೇಲೆ ಕಾಲಿಡಲಿದ್ದಾನೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.

ಕೃತಕ ಚಂದ್ರನ ಸೃಷ್ಟಿಸಿ ಪರೀಕ್ಷೆ ನಡೆಸಿತ್ತು ಇಸ್ರೋ, ಚಂದ್ರಯಾನ 3 ಪ್ರಾಜೆಕ್ಟ್‌ ಡೈರೆಕ್ಟರ್‌ ಜೊತೆ ಸಂದರ್ಶನ!

ಇದೆಲ್ಲವನ್ನೂ ಭಾರತೀಯ ಲಾಂಚ್‌ ವೆಹಿಕಲ್‌ ಮೂಲಕವೇ ಸಾಧ್ಯವಾಗಿಸಬೇಕು ಎನ್ನುವುದು ನಮ್ಮ ಆಸೆ. ಬೇರೆಯವರ ಲಾಂಚ್ ವೆಹಿಕಲ್ ನಮಗೇಕೆ? ಎಂದು ಸೋಮನಾಥ್‌ ಪ್ರಶ್ನಿಸಿದ್ದಾರೆ. ಇನ್ನು ಈ ಯೋಜನೆಗೆ ಬೇರೆಯವರ ಸಹಭಾಗಿತ್ವ ಬಯಸುತ್ತೀರಾ.? ಎನ್ನುವುದಕ್ಕೆ, ಸಹಭಾಗಿತ್ವ ಯಾವಾಗಲೂ ಮುಖ್ಯ, ಚಂದ್ರಯಾನ 3 ನಲ್ಲೂ ಕೆಲ ಸಹಭಾಗಿತ್ವ ಇತ್ತು. ಸಹಭಾಗಿತ್ವ ನಡೆಯುತ್ತೆ ಆದರೆ ಪ್ರೈಮರಿ ಡಿಸೈನ್ ಎಲ್ಲ ಭಾರತದಲ್ಲೇ ತಯಾರಿಸುತ್ತೆ  ಎಂದು ಹೇಳಿದರು.

ಚಂದ್ರನ ಮೇಲೆ ನೀರು ಸಾಧ್ಯವಿದೆ, ಚಂದ್ರಯಾನ-1 ಡೇಟಾದಿಂದ ಸಿಕ್ಕಿತು ಮಹತ್ವದ ಮಾಹಿತಿ!

 

click me!