
ವೆನೆಜುವೆಲಾದ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಉತ್ತರಪ್ರದೇಶ ಮೂಲದ ಭಾರತೀಯ ನಾವಿಕ ರಾಕೇಶ್ ಚೌಹಾಣ್ ಪ್ರಕರಣ ಮತ್ತಷ್ಟು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊದಲಿಗೆ ವೆನೆಜುವೆಲಾದಲ್ಲಿ ಭಾರತೀಯ ನಾವಿಕ ಮೃತಪಟ್ಟಿರುವುದಾಗಿ ಸುದ್ದಿ ಬಂತು. ನಂತರ ಮೃತದೇಹ ಭಾರತಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸಿದ ಬಳಿಕ ಮೃತರ ಕುಟುಂಬಸ್ಥರಿಗೆ ಮೃತ ಶರೀರ ಹಸ್ತಾಂತರಿಸಲಾಯಿತು ಅದರೆ. ಮರಣೋತ್ತರ ಪರೀಕ್ಷೆ ವೇಳೆ ಮೃತ ರಾಕೇಶ್ ದೇಹದಲ್ಲಿನ ಮೆದುಳು, ಹೃದಯ, ಶ್ವಾಸಕೋಶ ಸೇರಿದಂತೆ ಹಲವು ಆಂತರಿಕ ಅಂಗಗಳೇ ಇಲ್ಲದಿರುವುದು ಕಂಡು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು ಸಮಗ್ರ ತನಿಖೆಗೆ ನಾವಿಕರ ಸಂಘಟನೆಗಳು ಆಗ್ರಹಿಸಿವೆ.
ಮೂಲತಃ ಉತ್ತರಪ್ರದೇಶ ನಿವಾಸಿಯಾದ 33 ವರ್ಷದ ರಾಕೇಶ್ ಚೌಹಾಣ್ ಕಳೆದ ವರ್ಷ 2025ರ ನವೆಂಬರ್ ತಿಂಗಳಲ್ಲಿ ಮರ್ಚೆಂಟ್ ನೆವಿ ಹಡಗಿನಲ್ಲಿ ಕೆಲಸಕ್ಕಾಗಿ ವೆನೆಜುವೆಲಾಗೆ ತೆರಳಿದ್ದರು. ಆದರೆ ಮೇ ತಿಂಗಳಲ್ಲಿ ಅವರು ಮೃತಪಟ್ಟಿರುವುದಾಗಿ ಕಂಪನಿಯಿಂದ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ. ಕಂಪನಿ ಆರಂಭದಲ್ಲಿ ಹಡಗಿನಲ್ಲಿ ಬಿದ್ದು ಗಾಯಗೊಂಡಿದ್ದರು ಎಂದು ಹೇಳಿತ್ತು. ಆದರೆ ನಂತರ ಅವರು ಮೃತಪಟ್ಟಿರುವುದು ಹೇಳಿತು. ಅದರೆ ಸಾವಿಗೆ ಸ್ಪಷ್ಟ ನಿಖರವಾದ ಕಾರಣವನ್ನ ಕುಟುಂಬಸ್ಥರಿಗೆ ಕಂಪನಿ ನೀಡಿಲ್ಲ. ಕಂಪನಿ ಬೇಡ, ವೆನೆಜುವೆಲಾದ ಮರಣೋತ್ತರ ಪರೀಕ್ಷೆಯ ವರದಿಯನ್ನಾದರೂ ನೀಡಬೇಕಿತ್ತಲ್ಲ? ಮರಣೋತ್ತರ ವರದಿಯನ್ನ ಕೂಡ ಕುಟುಂಬಕ್ಕೆ ನೀಡಲಾಗಿರಲಿಲ್ಲ. ಹೀಗಾಗಿ ರಾಕೇಶ್ ಚೌಹಾಣ್ ಸಾವು ಅನುಮಾನಾಸ್ಪದವಾಗಿದೆ.
ರಾಕೇಶ್ ಮೃತದೇಹ ಭಾರತಕ್ಕೆ ಬಂದ ನಂತರ ಕುಟುಂಬದ ಒತ್ತಾಯದ ಮೇವೈದ್ಯರು ಪರಿಶೀಲಿಸಿದಾಗ ಮೆದುಳು, ಹೃದಯ, ಎರಡೂ ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಹೊಟ್ಟೆ, ಕರುಳು ಸೇರಿದಂತೆ ಹಲವು ಪ್ರಮುಖ ಆಂತರಿಕ ಅಂಗಗಳು ಇಲ್ಲದಿರುವುದು ಪತ್ತೆಯಾಗಿದೆ. ದೇಹದ ಮೇಲೆ ಕುತ್ತಿಗೆಯಿಂದ ಹೊಟ್ಟೆಯವರೆಗೆ ಹಾಗೂ ಕಿವಿಯಿಂದ ಕಿವಿವರೆಗೆ ಹೊಲಿಗೆ ಹಾಕಿರುವ ಗುರುತುಗಳೂ ಕಂಡುಬಂದಿವೆ. ಈ ಕಾರಣದಿಂದ ಸಾವಿನ ನಿಖರ ಕಾರಣವನ್ನು ವೈದ್ಯರು ನಿರ್ಧರಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
⚠️ SHOCKING CASE — Indian Seafarer #RakeshChauhan reported dead in #Venezuela.
Mortal remains sent back to his hometown in Uttar Pradesh without any autopsy report or details from Venezuelan authorities.
Family demanded re-autopsy. The official Post-Mortem Report conducted in… pic.twitter.com/4dGSZtPEfp— FSUI (@FSUIINDIA) June 30, 2026
ಕುಟುಂಬಸ್ಥರ ಆರೋಪವೇನು?
ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳಿಸುವ ಮುನ್ನ ಏನಾಯಿತು ಎಂಬುದುನ್ನ ಕಂಪನಿ ಸ್ಪಷ್ಟವಾದ ಮಾಹಿತಿ ನೀಡಿಲ್ಲ, ಹಡಗಿನಲ್ಲಿ ಬಿದ್ದನೆಂದು ಹೇಳಿದ್ದ ಕಂಪನಿ ಅದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಗಳು ನೀಡಿಲ್ಲ. ಮರಣೋತ್ತರ ಪರೀಕ್ಷೆಯ ವರದಿಗಳನ್ನು ಸಹ ನೀಡಿಲ್ಲ. ಹೀಗಾಗಿ ಈ ಸಾವಿನ ಹಿಂದೆ ಬೇರೆ ಏನೋ ಕಾರಣಗಳಿವೆ. ಹೀಗಾಗಿ ಈ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸತ್ಯಾಂಶ ತಿಳಿಯಬೇಕು ಎಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.
ನಾವಿಕ ಸಂಘಟನೆಗಳು ಒತ್ತಾಯ:
ಭಾರತೀಯ ನಾವಿಕರ ಒಕ್ಕೂಟ (FSUI) ಈ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವೆನೆಜುವೆಲಾದ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು, ಭಾರತೀಯ ರಾಯಭಾರ ಕಚೇರಿ ತಕ್ಷಣ ಮಧ್ಯಪ್ರವೇಶಿಸಬೇಕು, ಸಂಪೂರ್ಣ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಪಡಿಸಬೇಕು ಹಾಗೂ ಮೃತನ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ