ಜನವರಿ 1 ರಿಂದ ನಾಲ್ಕು ವಂದೇ ಭಾರತ್ ರೈಲು ವೇಳಾಪಟ್ಟಿ ಬದಲು, ಇಲ್ಲಿದೆ ಲಿಸ್ಟ್!

By Chethan Kumar  |  First Published Jan 1, 2025, 11:21 PM IST

ಭಾರತೀಯ ರೈಲ್ವೇ ಹೊಸ ವರ್ಷದ ಮೊದಲ ದಿನ ಹೊಸ ಟೈಮ್‌ಟೇಬ್ ಪ್ರಕಟಿಸಿದೆ. ಇಲ್ಲಿ ಪ್ರಮುಖವಾಗಿ ನಾಲ್ಕು ವಂದೇ ಭಾರತ್ ರೈಲು ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. 


ನವದೆಹಲಿ(ಜ.01) ಭಾರತೀಯ ರೈಲ್ವೇ ಜನವರಿ 1, 2025ರಂದು ಹೊಸ  ಟೈಂ ಟೇಬಲ್ ಪ್ರಕಟಿಸಿದೆ. ಹಲವು ರೈಲುಗಳ ವೇಳಾಪಟ್ಟಿಗಳು ಬದಲಾಗಿದೆ. ಈ ಪೈಕಿ ವಂದೇ ಭಾರತ್ ಕೂಡ ಸೇರಿದೆ. ದೇಶದಲ್ಲಿ ಸದ್ಯ 136 ವಂದೇ ಭಾರತ್ ರೈಲು ಸೇವೆ ನೀಡುತ್ತಿದೆ. ಈ ಪೈಕಿ ನಾಲ್ಕು ವಂದೇ ಭಾರತ್ ರೈಲಿನ ಟೈಂ ಟೇಬಲ್ ಬದಲಾಗಿದೆ. ಜನವರಿ 1, 2025ರಿಂದಲೇ ಈ ಪರಿಷ್ಕೃತ ವೇಳಾಪಟ್ಟಿ ಜಾರಿಯಾಗಿದೆ. ಇದೇ ವೇಳೆ ಭಾರತೀಯ ರೈಲ್ವೇಯ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಹೊಸ ವೇಳಾಪಟ್ಟಿಯನ್ನು ಗಮನಿಸಿ ರೈಲು ಬುಕ್ ಹಾಗೂ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದೆ.ಹೊಸ ಹಾಗೂ ಪರಿಷ್ಕೃತ ರೈಲ್ವೇ ಟೈಂ ಟೇಬಲ್‌ನ್ನು ಭಾರತೀಯ ರೈಲ್ವೇಯ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ವೇಳಾಪಟ್ಟಿಯಲ್ಲಿ ರೈಲಿನ ಬದಲಾಗದ ಸಮಯ, ರೈಲಿನ ಮಾಹಿತಿ, ನಿಲುಗಡೆ ಮಾಹಿತಿ, ತಲುಪುವ ಸ್ಥಳ ಹಾಗೂ ಬದಲಾದ ಸಮಯದ ಬಗ್ಗೆ ವಿವರಣೆ ನೀಡಲಾಗಿದೆ. ಹೀಗಾಗಿ ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿ ಪರಿಶೀಲಿಸಿ ಪ್ರಯಾಣಕ್ಕೆ ಸಿದ್ಧರಾಗಲು ಭಾರತೀಯ ರೈಲ್ವೇ ಮನವಿ ಮಾಡಿದೆ.

ದಿಯೋಘರ್-ವಾರಾಣಸಿ ವಂದೇ ಭಾರತ್
ರೈಲ್ವೇ ಇಲಾಖೆ ವೆಬ್‌ಸೈಟ್ ಅಥವಾ ರಾಷ್ಟ್ರೀಯ ರೈಲು ಮಾಹಿತಿ ಕೇಂದ್ರ,  ರೈಲು ನಿಲ್ದಾಣಗಳಲ್ಲಿನ ಕೇಂದ್ರಗಳಲ್ಲಿ ಮಾಹಿತಿ ಪಡೆಯಲು ಸಾಧ್ಯವಿದೆ. ಹೊಸ ಟೈಂ ಟೇಬಲ್‌ನಲ್ಲಿ ನಾಲ್ಕು ವಂದೇ ಭಾರತ್ ರೈಲಿನ ಸಮಯ ಬದಲಾಗಿದೆ. ಈ ಪೈಕಿ 22499 ದಿಯೋಘರ್ ವಾರಣಾಸಿ ವಂಜೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಂದಾಗಿದೆ. ಈ ರೈಲು NEWC-BSB ರೈಲು ನಿಲ್ದಾಣದಿಂದ 21:55 ಗಂಟೆಗೆ ಹೊರಡುತ್ತಿತ್ತು. ಆದರೆ ಹೊಸ ವೇಳಾಪಟ್ಟಿ ಪ್ರಕಾರ ಈ ರೈಲು 21:53 ಗಂಟೆಗೆ ಹೊರಡಲಿದೆ. ಇದು 22.30ರ ವೇಳೆಗೆ ತಲುಪಲಿದೆ.

Tap to resize

Latest Videos

 

ಪಾಟ್ನಾ ಗೋಮತಿ ನಗರ ವಂದೇ ಭಾರತ್
ರೈಲು ಸಂಖ್ಯೆ 22345, ಪಾಟ್ನಾ ಗೋಮತಿ ನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಯಾಗಿದೆ.  ಈ ರೈಲು NEWC-ML  ರೈಲು ನಿಲ್ದಾಣದಿಂದ ಬೆಳಗ್ಗೆ 09:05 ಗಂಟೆಗೆ ಹೊರಡುತ್ತಿತ್ತು. ಆದರೆ ಹೊಸ ಟೈಂ ಟೇಬಲ್ ಪ್ರಕಾರ ಈ ರೈಲು 09:05 ಕ್ಕೆ ಹೊರಡಲಿದೆ. ಇನ್ನು 14:35 ಗಂಟೆಗೆ ತಲುಪಲಿದೆ. ಈ ರೈಲು  NEWC-ML  ರೈಲು ನಿಲ್ದಾಣ ಆಗಮಿಸುವ ಸಮಯವೂ ಬದಲಾಗಿದೆ. ಇಷ್ಟು ದಿನ 14:15ಕ್ಕೆ ಈ ರೈಲು ಆಗಮಿಸುತ್ತಿತ್ತು, ಹೊಸ ವೇಳಾಪಟ್ಟಿ ಪ್ರಕಾರ 14:20ಕ್ಕೆ ಆಗಮಿಸಲಿದೆ. 

ಲಖನೌ ಡೆಹ್ರಡೂನ್ ವಂದೇ ಭಾರತ್ ಎಕ್ಸ್‌ಪ್ರೆಸ್
ಭಾರತೀಯ ರೈಲ್ವೇಯ ಹೊಸವೇಳಾಪಟ್ಟಿಯಲ್ಲಿ ಲಖನೌ ಡೆಹ್ರಡೂನ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾಗಿದೆ. ವಂದೇ ಭಾರತ್ ರೈಲು ಸಂಖ್ಯೆ 22545ರ ಸಮಯದಲ್ಲಿ ಬದಲಾವಣೆ ಮಡಲಾಗಿದೆ. LJN-DDN ರೈಲು ನಿಲ್ದಾಣಕ್ಕೆ ಈ ರೈಲು 13:40ಕ್ಕೆ ಆಗಮಿಸಲಿದೆ. ಇದಕ್ಕೂ ಮೊದಲು 13.35ಕ್ಕೆ ಆಗಮಿಸುತ್ತಿತ್ತು. ಇನ್ನು ತಲುಪುವ ಸಮಯ 13:40.   

ಗೋಮತಿನಗರ ಪಾಟ್ನಾ ವಂದೇ ಭಾರತ್
ರೈಲು ಸಂಖ್ಯೆ 22346ರ ಗೋಮತಿ - ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾಗಿದೆ. ಈ ರೈಲು  ML-NEWC ನಿಲ್ದಾಣಕ್ಕೆ 20:43ಕ್ಕೆ ಆಗಮಿಸಲಿದೆ. ಇದಕ್ಕೂ ಮೊದಲು 20:35 ಗಂಟೆಗೆ  ಆಗಮಿಸುತಿತ್ತು. ಈ ರೈಲು 23:45 ಗಂಟೆಗೆ ತಲುಪಲಿದೆ. 

ಇದರ ಜೊತಗೆ ಹೊಸ ವೇಳಾಪಟ್ಟಿಯಲ್ಲಿ ಇತರ ಕೆಲ ರೈಲುಗಳ ಸಮಯ, ಆಗಮಿಸುವ ಸಮಯ, ನಿರ್ಗಮನ, ತಲುಪ ಸಮಯಗಳು ಬದಲಾಗಿದೆ.
 

click me!