ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್‌ನಲ್ಲಿ ಭಾರತೀಯ ರೈಲ್ವೆಯ ಯಶಸ್ವಿ ಟ್ರಯಲ್ ರನ್ : ಮೋಹಕ ವೀಡಿಯೋ ವೈರಲ್

By Anusha KbFirst Published Jun 20, 2024, 10:39 PM IST
Highlights

ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಮ್ಮು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರೈಲ್ವೆ ಬ್ರಿಡ್ಜ್ ಮೇಲೆ ಇಂದು ಭಾರತೀಯ ರೈಲ್ವೆ ಪರೀಕ್ಷಾರ್ಥವಾಗಿ ರೈಲನ್ನು ಓಡಿಸಿತ್ತು.

ಶ್ರೀನಗರ: ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಮ್ಮು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರೈಲ್ವೆ ಬ್ರಿಡ್ಜ್ ಮೇಲೆ ಇಂದು ಭಾರತೀಯ ರೈಲ್ವೆ ಪರೀಕ್ಷಾರ್ಥವಾಗಿ ರೈಲನ್ನು ಓಡಿಸಿತ್ತು. ರೈಲ್ವೆಯ ಈ ಯಶಸ್ವಿ ಟ್ರಯಲ್ ರನ್‌ನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಮೋಹಕವಾಗಿದೆ. ಹೊಸದಾಗಿ ನಿರ್ಮಾಣವಾದ ಈ ರೈಲ್ವೆ ಬ್ರಿಡ್ಜ್‌ನ್ನು ಜಮ್ಮುಕಾಶ್ಮೀರದ ರಾಂಬನ್ ಜಿಲ್ಲೆಯ ಸಂಗಲ್ದನ್ ಮತ್ತು ರಿಯಾಸಿ ನಡುವೆ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಶೀಘ್ರದಲ್ಲೇ ರೈಲು ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ವಿಡಿಯೋದಲ್ಲಿ ಟ್ರಯಲ್ ರನ್ ಭಾಗವಾಗಿ ರೈಲೊಂದು ಚೆನಾಬ್ ನದಿಯ ಮೇಲೆ ನಿರ್ಮಿತವಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಮೇಲೆ ಸಾಗುವುದನ್ನು ಕಾಣಬಹುದಾಗಿದೆ. ಇದರ ಹಿಂಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಂದರವಾದ ಪರ್ವತ ಪ್ರದೇಶಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಈ ವಿಡಿಯೋವನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಕೂಡ   ಈ ಐತಿಹಾಸಿಕ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು,  ಸಂಗಲ್ದನ್ ಹಾಗೂ ರಿಯಾಸಿ ನಡುವೆ ಜಮ್ಮು ಕಾಶ್ಮೀರದ ಯುಎಸ್‌ಬಿಆರ್‌ಎಲ್ ಪ್ರಾಜೆಕ್ಟ್‌ ರೈಲಿನ ಯಶಸ್ವಿ ಟ್ರಯಲ್ ರನ್ ಎಂದು ಬರೆದುಕೊಂಡಿದ್ದಾರೆ. 

Latest Videos

ಜಮ್ಮು ಕಾಶ್ಮೀರದಲ್ಲಿ ದೇಶದ ಮೊಟ್ಟ ಮೊದಲ ಕೇಬಲ್‌ ರೈಲ್ವೆ ಬ್ರಿಡ್ಜ್‌ ರೆಡಿ: ಹಿಮಾಲಯದ ತಪ್ಪಲಿನಲ್ಲಿ ನಿರ್ಮಾಣ

ಈ ಸೇತುವೆಯು ಚೆನಾಬ್ ನದಿಯ ಮೇಲೆ 359 ಮೀಟರ್ (ಸುಮಾರು 109 ಅಡಿ) ಎತ್ತರದಲ್ಲಿ ನಿರ್ಮಿಸಿದ ಇಂಜಿನಿಯರಿಂಗ್ ಅದ್ಭುತವಾಗಿದ್ದು, ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ ಸುಮಾರು 35 ಮೀಟರ್ ಎತ್ತರವಾಗಿದೆ. ಇದನ್ನು ಉಧಂಪುರ್ ಶ್ರೀನಗರ ಬಾರಾಮುಲ್ಲಾ ರೈಲ್ ಲಿಂಕ್ (USBRL) ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದು ವರ್ಷಾಂತ್ಯದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.

| J&K: Indian Railway conducts a trial run on the newly constructed world's highest railway bridge-Chenab Rail Bridge, built between Sangaldan in Ramban district and Reasi. Rail services on the line will start soon pic.twitter.com/gHGxhMHYe3

— ANI (@ANI)

ಕಾಶ್ಮೀರದ ಸೌಂದರ್ಯಕ್ಕೆ ಕಳಶವಿಟ್ಟ ರೈಲ್ವೆ ಬ್ರಿಡ್ಜ್‌: ಡ್ರೋಣ್‌ ಸೆರೆ ಹಿಡಿದ ಅದ್ಭುತ ಫೋಟೋಗಳು

 

Successful trial run of MEMU train between Sangaldan - Reasi section of USBRL project.

📍Jammu & Kashmir pic.twitter.com/GjaKX6Ci8Q

— Ashwini Vaishnaw (@AshwiniVaishnaw)

 

click me!