ಕೋಚ್ ಉತ್ಪಾದನೆಯಲ್ಲಿ ಭಾರತೀಯ ರೈಲ್ವೆ ದಾಖಲೆ, ಹಿಂದಿನ ವರ್ಷಕ್ಕಿಂತ 9% ಹೆಚ್ಚಳ!

Published : Apr 03, 2025, 09:00 PM ISTUpdated : Apr 03, 2025, 09:05 PM IST
ಕೋಚ್ ಉತ್ಪಾದನೆಯಲ್ಲಿ ಭಾರತೀಯ ರೈಲ್ವೆ ದಾಖಲೆ,  ಹಿಂದಿನ ವರ್ಷಕ್ಕಿಂತ 9% ಹೆಚ್ಚಳ!

ಸಾರಾಂಶ

ಭಾರತೀಯ ರೈಲ್ವೆ 2024-25ರಲ್ಲಿ 7,134 ಕೋಚ್‌ಗಳನ್ನು ನಿರ್ಮಿಸಿ ದಾಖಲೆ ಸಾಧಿಸಿದೆ, ಇದು ಹಿಂದಿನ ವರ್ಷಕ್ಕಿಂತ 9% ಹೆಚ್ಚಾಗಿದೆ. ಇದರಲ್ಲಿ 4,601 ನಾನ್-ಎಸಿ ಕೋಚ್‌ಗಳಿವೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) 3,007 ಕೋಚ್‌ಗಳನ್ನು ಉತ್ಪಾದಿಸಿದೆ. ಕಪುರ್ತಲಾದ ರೈಲ್ ಕೋಚ್ ಫ್ಯಾಕ್ಟರಿ (RCF) 2,102 ಮತ್ತು ರಾಯ್ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿ (MCF) 2,025 ಕೋಚ್‌ಗಳನ್ನು ನಿರ್ಮಿಸಿವೆ. ಇದು ರೈಲ್ವೆ ಮೂಲಸೌಕರ್ಯದ ಆಧುನೀಕರಣಕ್ಕೆ ಸಾಕ್ಷಿಯಾಗಿದೆ.

ಭಾರತೀಯ ರೈಲ್ವೆ 2024-25ನೇ ಹಣಕಾಸು ವರ್ಷದಲ್ಲಿ 7,134 ಕೋಚ್‌ಗಳನ್ನು ನಿರ್ಮಿಸುವ ಮೂಲಕ ಒಂದು ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ.  ಹಿಂದಿನ ವರ್ಷ 6,541 ಉತ್ಪಾದನೆ ಮಾಡಿತ್ತು , ಈ ಮೂಲಕ ಈ ಹಣಕಾಸು ವರ್ಷದಲ್ಲಿ 9%  ಏರಿಕೆ ಕಂಡಿದೆ. ಇದರಲ್ಲಿ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸುವ 4,601 ನಾನ್-ಎಸಿ ಕೋಚ್‌ಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸಲು ಭಾರತವು ಹೆಚ್ಚಿನ ಗಮನ ನೀಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಮುಂಬೈನಿಂದ ದುಬೈಗೆ ಕೇವಲ 2 ಗಂಟೆ ಪ್ರಯಾಣ, ಸಮುದ್ರದಡಿಯಿಂದ ರೈಲು ಸೇವೆಗೆ UAE ಪ್ಲಾನ್

ಭಾರತೀಯ ರೈಲ್ವೆಯು ದೇಶದಲ್ಲಿ ಮೂರು ಕೋಚ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಚೆನ್ನೈ. ಪಂಜಾಬ್ ನಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (RCF) ಕಪುರ್ತಲಾ,  ಮತ್ತು  ಉತ್ತರ ಪ್ರದೇಶದಲ್ಲಿ  ರಾಯ್ಬರೇಲಿಯಲ್ಲಿರುವ ಮಾಡರ್ನ್ ಕೋಚ್ ಫ್ಯಾಕ್ಟರಿ (MCF). ಅಧಿಕೃತ ಮಾಹಿತಿಯ ಪ್ರಕಾರ, 2024-25ನೇ ಹಣಕಾಸು ವರ್ಷದಲ್ಲಿ ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಪ್ರಮುಖ ಪ್ರಯಾಣಿಕ ಕೋಚ್ ಉತ್ಪಾದನಾ ಘಟಕವಾದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತನ್ನ ಹಿಂದಿನ ಉತ್ಪಾದನಾ ದಾಖಲೆಗಳನ್ನು ಮೀರಿಸಿದೆ. ಕಳೆದ ವರ್ಷ 2,829 ಕೋಚ್‌ಗಳನ್ನು ತಯಾರಿಸಿತ್ತು. ಈ ಬಾರಿ  3,007 ಕೋಚ್‌ಗಳನ್ನು ನಿರ್ಮಿಸಿದೆ.

ಚೆನ್ನೈನಲ್ಲಿ ಉತ್ಪಾದಿಸಲಾದ 3,007 ಬೋಗಿಗಳಲ್ಲಿ 1,169 ಡಿಸ್ಟ್ರಿಬ್ಯೂಟೆಡ್ ಪವರ್ ರೋಲಿಂಗ್ ಸ್ಟಾಕ್ (DPRS) ಕೋಚ್‌ಗಳಾಗಿದ್ದು, ಇದರಲ್ಲಿ ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ ಕಾರ್, EMU ಮತ್ತು MEMU ಸೇರಿವೆ. ಉಳಿದ 1,838 LHB (ಲಿಂಕ್ ಹಾಫ್‌ಮನ್ ಬುಷ್) ಕೋಚ್‌ಗಳಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಅದೇ ರೀತಿ, ರೈಲ್ ಕೋಚ್ ಫ್ಯಾಕ್ಟರಿ (RCF), ಕಪುರ್ತಲಾ 2,102 ಕೋಚ್‌ಗಳನ್ನು ಮತ್ತು ಮಾಡರ್ನ್ ಕೋಚ್ ಫ್ಯಾಕ್ಟರಿ (MCF), ರಾಯ್ಬರೇಲಿ ಈ ಹಣಕಾಸು ವರ್ಷದಲ್ಲಿ 2,025 ಕೋಚ್‌ಗಳನ್ನು ಉತ್ಪಾದಿಸಿದೆ. ಈ ಮೂಲಕ ಭಾರತದಲ್ಲಿ ಕೋಚ್ ಉತ್ಪಾದನೆಯು ವರ್ಷಗಳಿಂದ ಸಾಕಷ್ಟು ವಿಸ್ತರಣೆಯಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ರೈಲಿನಿಂದ ಎಸೆದ ವಾಟರ್ ಬಾಟಲ್ ಎದೆಗೆ ಬಡಿದು ಬಾಲಕ ಸಾವು

2004 ರಿಂದ 2014 ರ ವರ್ಷದಲ್ಲಿ ಭಾರತೀಯ ರೈಲ್ವೆ ಸರಾಸರಿ ವರ್ಷಕ್ಕೆ 3,300 ಕ್ಕಿಂತ ಕಡಿಮೆ ಕೋಚ್‌ಗಳನ್ನು ನಿರ್ಮಾಣ ಮಾಡಿತ್ತು. ಆದರೆ 2014 ರಿಂದ 2024 ರವರೆಗೆ ಉತ್ಪಾದನೆಯಲ್ಲಿ ದೊಡ್ಡ ಏರಿಕೆಯನ್ನು ಸಾಧಿಸಿದೆ. ಇದರಲ್ಲಿ 54,809 ಕೋಚ್‌ಗಳನ್ನು ಉತ್ಪಾದಿಸಲಾಯಿತು. ಇದು ವರ್ಷಕ್ಕೆ ಸರಾಸರಿ 5,481 ಕೋಚ್‌ಗಳ ಉತ್ಪಾದನೆಯಾಗಿದೆ. ಇದು ಉತ್ತಮ ಸಂಪರ್ಕ ಮತ್ತು ರೈಲ್ವೆ ನಿರ್ಮಾಣದಲ್ಲಿ ಸ್ವಾವಲಂಬನೆಗೆ ಒತ್ತು ನೀಡುತ್ತದೆ. ಈ ವಿಸ್ತರಣೆಯು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರೈಲ್ವೆ ವಿನ್ಯಾಸದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಸಂಯೋಜಿಸಲು ಪ್ರಯತ್ನಿಸುವ ದೊಡ್ಡ ಯೋಜನೆಯಾಗಿದೆ.

ದಾಖಲೆಯ ಕೋಚ್ ಉತ್ಪಾದನೆಯು ಸರ್ಕಾರದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ, ಇದು ಉತ್ತಮ ಸಾರ್ವಜನಿಕ ಸಾರಿಗೆ ಸೇವೆಗಳನ್ನು ನೀಡಲು ಮುಂದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಜೊತೆಗೆ ದೇಶೀಯ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತದೆ  ಎಂಬುದು ಗಮನಾರ್ಹ. ಹೆಚ್ಚಿನ ಕೋಚ್‌ಗಳನ್ನು ಪರಿಚಯಿಸುವುದರ ಜೊತೆಗೆ ಪ್ರಯಾಣಿಕರು ಉತ್ತಮ ಸೌಲಭ್ಯಗಳು, ಸುಧಾರಿತ ಸುರಕ್ಷತೆಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ನೀಗಿಸಲು ಹೆಚ್ಚಿದ ಸಾಮರ್ಥ್ಯವನ್ನು ನಿರೀಕ್ಷಿಸಬಹುದು.

ಮಾತ್ರವಲ್ಲದೆ ಈ ಸಾಧನೆಯು 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಬಲಪಡಿಸುತ್ತದೆ, ಇದು ರೈಲ್ವೆ ನಿರ್ಮಾಣದಲ್ಲಿ ಭಾರತದ ಸ್ಥಾನವನ್ನು ಮುಂಚೂಣಿಯಲ್ಲಿಟ್ಟು ಬಲಪಡಿಸುತ್ತದೆ. ಆಧುನಿಕ, ಇಂಧನ-ಸಮರ್ಥ ಮತ್ತು ಪ್ರಯಾಣಿಕ ಸ್ನೇಹಿ ಕೋಚ್‌ಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಭಾರತೀಯ ರೈಲ್ವೆ ಹೆಚ್ಚು ಬಲಿಷ್ಠ ಮತ್ತು ಭವಿಷ್ಯಕ್ಕೆ ಸಿದ್ಧವಾದ ಸಾರಿಗೆ ಜಾಲವನ್ನು ನಿರ್ಮಿಸುವ ಕಡೆಗೆ ಮಹತ್ವದ ಹೆಜ್ಜೆಗಳನ್ನು  ಇಟ್ಟಿದೆ. 

ರೈಲ್ವೆ ವಿದ್ಯುದ್ದೀಕರಣ, ಹೈ-ಸ್ಪೀಡ್ ಕಾರಿಡಾರ್ ಮತ್ತು ಸುಧಾರಿತ ಪ್ರಯಾಣಿಕ ಸೇವೆಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳೊಂದಿಗೆ, ಹೆಚ್ಚಿದ ಕೋಚ್ ಉತ್ಪಾದನೆಯು ಭಾರತದ ರೈಲು ಸಾರಿಗೆ ವ್ಯವಸ್ಥೆಯ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಇದು ಲಕ್ಷಾಂತರ ಪ್ರಯಾಣಿಕರಿಗೆ ಹೆಚ್ಚಿನ ದಕ್ಷತೆ, ಸುಲಭ, ಆರಾಮದಾಯಕ  ಪ್ರವೇಶವನ್ನು ಖಚಿತಪಡಿಸುತ್ತದೆ. (ಎಎನ್‌ಐ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ