
ನವದೆಹಲಿ, (ಮೇ.11): ಲಾಕ್‌ಡೌನ್ ಮಧ್ಯೆಯೇ ನಾಳೆ (ಮೇ 12) ರಿಂದ 15 ಪ್ಯಾಸೆಂಜರ್ ರೈಲುಗಳ ಓಡಾಟಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನವದೆಹಲಿಯಿಂದ ವಿವಿಧ ರಾಜ್ಯಗಳಿಗೆ ಈ ರೈಲುಗಳು ಸಂಚರಿಸಲಿವೆ.
ಈ ರೈಲುಗಳಲ್ಲಿ ಪ್ರಯಾಣ ಮಾಡಬೇಕಾದ್ರೆ ನೀವು ಕೇವಲ ಆನ್‌ಲೈನ್ ಮೂಲಕ ಮಾತ್ರ ಟಿಕೆಟ್ ಪಡೆದುಕೊಳ್ಳವುದಕ್ಕೆ ಅವಕಾಶ ನೀಡಲಾಗಿದೆ.
ರೈಲಿನಲ್ಲಿ ಪ್ರಯಾಣಿಸುವವರಿಗೆ ಹೊಸ ಮಾರ್ಗಸೂಚಿ: ಸಚಿವ ಸುರೇಶ್ ಅಂಗಡಿ ಹೇಳಿದ್ರು ಬಿಡಿಸಿ-ಬಿಡಿಸಿ
ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ (IRCTC) ವೆಬ್‌ಸೈಟ್‌ನಲ್ಲಿ ಮಾತ್ರ ಟಿಕೆಟ್ ಬುಕ್ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, IRCTC ಖಾತೆಯನ್ನು ಹೊಂದಿರುವ ಟಿಕೆಟ್ ಬುಕ್ ಸಾಧ್ಯವಾಗುತ್ತದೆ.
ಅಂದ ಹಾಗೇ IRCTCಯಲ್ಲಿ ಖಾತೆ ರಚಿಸಿ ಟಿಕೆಟ್ ಬುಕ್ ಮಾಡುವುದೇಗೆ? ಟಿಕೆಟ್ ಬುಕ್ ರದ್ದು ಮಾಡುವುದೇಗೆ..? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.
* ಐಆರ್‌ಸಿಟಿಸಿ ವೆಬ್‌ಸೈಟ್( www.irctc.co.in) ಗೆ ಭೇಟಿ ನಿಮ್ಮ ಖಾತೆ ಇದ್ದರೆ ಲಾಗಿನ್ ಆಗಿ
* ಹೊಸ ಖಾತೆ ರಚಿಸಬೇಕಾದರೆ ಸೈನ್ ಅಪ್ ಕ್ಲಿಕ್ ಮಾಡಿ ಹೊಸ ಖಾತೆ ರಚಿಸಿ.
* ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ
. * ಆಧಾರ್ ಹಾಗೂ ಐಆರ್ ಸಿಟಿಸಿ ಖಾತೆ ಲಿಂಕ್ ಆಗಿರುವುದನ್ನು ದೃಢಪಡಿಸಿ.
* ನಿಮ್ಮ ಪ್ರಯಾಣದ ವಿವರ ದಾಖಲಿಸಿ ಎಲ್ಲಿಂದ ಎಲ್ಲಿಗೆ ಎಂದು ಹಾಕಿ, ಟ್ರೈನ್ ಪತ್ತೆ ಹಚ್ಚಿ, ಟಿಕೆಟ್ ಬುಕ್ ಮಾಡಿ
* ನಿಮ್ಮ ಇಮೇಲ್, ಮೊಬೈಲ್ ಫೋನ್ ಲಿಂಕ್ ಆಗಿದ್ದರೆ ಒಟಿಪಿ ಮೂಲಕ ನಿಮ್ಮ ಟಿಕೆಟ್ ಸುರಕ್ಷಿತವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ