ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ: ಸದ್ಯ ಪ್ರಾಯೋಗಿಕ ಅನುಷ್ಠಾನ

Published : Aug 20, 2025, 05:07 AM IST
Indian Railway train luggage weight rule updates

ಸಾರಾಂಶ

ಯಾವ ಮಾದರಿಯ ಟಿಕೆಟ್‌ ಪಡೆದವರು ಎಷ್ಟು ಲಗೇಜ್‌ ಕೊಂಡೊಯ್ಯಬಹುದು ಎಂಬ ಬಗ್ಗೆ ರೈಲ್ವೆ ಮಾಹಿತಿ ನೀಡಿದೆಯಾದರೂ, ಅದು ಮೀರಿದರೆ ಎಷ್ಟು ಶುಲ್ಕ ಕಟ್ಟಬೇಕು ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.

ನವದೆಹಲಿ (ಆ.20): ಆದಾಯ ಸಂಗ್ರಹಕ್ಕೆ ನಾನಾ ಹೊಸ ಮೂಲ ಹುಡುಕುತ್ತಿರುವ ಭಾರತೀಯ ರೈಲ್ವೆ ಇದೀಗ ಪ್ರಯಾಣಿಕರ ಲಗೇಜ್‌ ಮೇಲೂ ಶುಲ್ಕ ಹೇರಲು ಮುಂದಾಗಿದೆ. ವಿಮಾನಗಳ ರೀತಿಯಲ್ಲೇ ನಿಗದಿಗಿಂತ ಹೆಚ್ಚಿನ ಲಗೇಜ್‌ ಹೊಂದಿದ್ದರೆ ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ರೈಲ್ವೆ ನಿರ್ಧರಿಸಿದೆ.

ಯಾವ ಮಾದರಿಯ ಟಿಕೆಟ್‌ ಪಡೆದವರು ಎಷ್ಟು ಲಗೇಜ್‌ ಕೊಂಡೊಯ್ಯಬಹುದು ಎಂಬ ಬಗ್ಗೆ ರೈಲ್ವೆ ಮಾಹಿತಿ ನೀಡಿದೆಯಾದರೂ, ಅದು ಮೀರಿದರೆ ಎಷ್ಟು ಶುಲ್ಕ ಕಟ್ಟಬೇಕು ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ನಡುವೆ ರೈಲ್ವೆ ಇಲಾಖೆಯ ನಿರ್ಧಾರವನ್ನು ಸಮಾಜವಾದಿ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನಾಯಕರು ಕಟುವಾಗಿ ಟೀಕಿಸಿದ್ದಾರೆ.

ಲಗೇಜ್‌ ಮಿತಿ: ವಿವಿಧ ಕೋಚ್‌ಗಳ ಆಧಾರದ ಮೇಲೆ ತೂಕವನ್ನು ನಿಗದಿಪಡಿಸಲಾಗಿದೆ. ಅದರನ್ವಯ, ಏಸಿ 1 ಟೈರ್‌ಗೆ 70 ಕೇಜಿ, ಏಸಿ 2 ಟೈರ್‌ಗೆ 50 ಕೇಜಿ, ಏಸಿ 3 ಟೈರ್‌ ಮತ್ತು ಸ್ಲೀಪರ್‌ ಕ್ಲಾಸ್‌ಗೆ 40 ಕೇಜಿ ಮತ್ತು ಜನರಲ್‌ ಬೋಗಿಗೆ 35 ಕೇಜಿ ಮಿತಿ ನಿಗದಿಪಡಿಸಲಾಗಿದೆ. ಲಗೇಜ್‌ ತೂಕ ಮಾಡಲು ಪ್ರತಿ ಪ್ರಮುಖ ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್‌ ತಕ್ಕಡಿ ಇರಿಸಿ, ಲಗೇಜು ತೂಕ ಹಾಕಿದ ಬಳಿಕವೇ ನಿಲ್ದಾಣಕ್ಕೆ ಬರುವ ರೀತಿ ವ್ಯವಸ್ಥೆ ಮಾಡಲಾಗುವುದು. ಒಂದು ಲಗೇಜ್‌ನ ತೂಕ ನಿಗದಿತ ಮಿತಿಯೊಳಗೆ ಇದ್ದರೂ ಅದರ ಗಾತ್ರ ಹೆಚ್ಚಿದ್ದರೂ ಅದಕ್ಕೂ ಹೆಚ್ಚುವರಿ ಶುಲ್ಕ ಹಾಕಲಾಗುವುದು. ಉತ್ತರ ಪ್ರದೇಶದ ಉತ್ತರ ಕೇಂದ್ರ ರೈಲ್ವೆ ವಲಯದ ಪ್ರಯಾಗರಾಜ್‌ ವಿಭಾಗದಲ್ಲಿ ಇದನ್ನು ಮೊದಲು ಜಾರಿಗೆ ತರಲಾಗುತ್ತದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಸಿಟರ್‌ ಪಾಸ್‌ ಇದ್ದರಷ್ಟೇ ಪ್ರವೇಶ: ಬೋರ್ಡಿಂಗ್‌ ಪಾಸ್‌ ಇಲ್ಲದಿದ್ದರೆ ವಿಮಾನ ನಿಲ್ದಾಣಕ್ಕೆ ಹೇಗೆ ಪ್ರವೇಶವಿಲ್ಲವೋ, ಅದೇ ರೀತಿ ಟಿಕೆಟ್‌/ವಿಸಿಟರ್‌ ಪಾಸ್‌ ಇಲ್ಲದಿದ್ದರೆ, ರೈಲು ನಿಲ್ದಾಣಕ್ಕೆ ಪ್ರವೇಶ ನಿರಾಕರಿಸುವ ರೀತಿ ಪ್ರಯಾಗರಾಜ್‌ನಲ್ಲಿ ಪ್ರಯೋಗ ನಡೆದಿದೆ. ರೈಲು ಟಿಕೆಟ್ ಇದ್ದರಷ್ಟೇ ಟರ್ಮಿನಲ್‌ ಒಳಗೆ ಪ್ರವೇಶವಿರಲಿದ್ದು, ಪ್ರಯಾಣ ಮಾಡದಿರುವವರು ವಿಸಿಟರ್‌ ಪಾಸ್‌ ಪಡೆಯಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ