
ನವದೆಹಲಿ(ಜ.25): ಐದು ರೈಲುಗಳನ್ನು ಜೋಡಣೆಯೊಂದಿಗೆ ಅತ್ಯಂತ ಉದ್ದದ ಸರಕು ಸಾಗಣೆಯ ರೈಲು ಓಡಿಸುವ ಮೂಲಕ ಭಾರತೀಯ ರೈಲ್ವೆ ಸಾಧನೆ ಮೆರೆದಿದೆ. ಭಾರತೀಯ ರೈಲ್ವೆಯ ಆಗ್ನೇಯ ಮಧ್ಯದ ರೈಲ್ವೆ ವಿಭಾಗವು ಐದು ರೈಲುಗಳನ್ನೊಳಗೊಂಡ ಈ ರೈಲಿಗೆ ‘ವಾಸುಕಿ’ ಎಂದು ನಾಮಕರಣ ಮಾಡಲಾಗಿದೆ.
ಜನವರಿ 22ರಂದು ಛತ್ತೀಸ್‌ಗಢದ ಭಿಲಾಯ್ ಡಿ ಕ್ಯಾಬಿನ್‌ನಿಂದ ಹೊರಟಿದ್ದ 3.5 ಕಿ.ಮೀ ಉದ್ದದ ಈ ರೈಲು ಕೇವಲ 7 ಗಂಟೆಯಲ್ಲಿ 224 ಕಿ.ಮೀ ಕ್ರಮಿಸಿ ಕೊರ್ಬಾದ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದೆ. ಓರ್ವ ಲೋಕೋ ಪೈಲಟ್, ಓರ್ವ ಸಹಾಯಕ ಲೋಕೋ ಪೈಲಟ್ ಮತ್ತು ಒಬ್ಬ ಗಾರ್ಡ್ ಅವರು ಮಾತ್ರವೇ ಈ ಅತಿ ಉದ್ದದ ರೈಲನ್ನು ನಿರ್ವಹಿಸಿದ್ದಾರೆ. ಸೋಮವಾರ ಈ ವಿಡಿಯೋವನ್ನು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಅವರು ಹಂಚಿಕೊಂಡಿದ್ದು, ಇದು ಅತ್ಯಂತ ಉದ್ದದ ರೈಲು ಎಂದು ಹರ್ಷಿಸಿದ್ದಾರೆ.
ಈ ಹಿಂದೆ ಆಗ್ನೇಯ ಮಧ್ಯ ರೈಲ್ವೆ ವಲಯವು, 3 ರೈಲುಗಳನ್ನು ಒಳಗೊಂಡ ‘’ಸೂಪರ್ ಆನಕೊಂಡ’ ಮತ್ತು 2.8 ಕಿ.ಮೀ ಉದ್ದದ ‘ಶೇಷ ನಾಗ’ ಎಂಬ ಉದ್ದದ ರೈಲುಗಳನ್ನು ಓಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ