
ನವದೆಹಲಿ(ಮೇ 17) ಕೊರೋನಾ ಟೈಮ್ ನಲ್ಲಿ ರೈಲ್ವೆ ಪ್ರಯಾಣಿಕರು ಈ ಸುದ್ದಿ ಓದಲೇಬೇಕು . ರಾಜಧಾನಿ ಎಕ್ಸ್ ಪ್ರೆಸ್ ನಂತಹ ರೈಲಿಗೆ ಟಿಕೆಟ್ ಬುಕ್ ಮಾಡುವವರಿಗೆ ಇದು ಪ್ರಮುಖ ಸುದ್ದಿ. ಕ್ವಾರಂಟೈನ್ ಪ್ರೋಟೋಕಾಲ್ ಗೊತ್ತಿದ್ದರೆ ಮಾತ್ರ ಟಿಕೆಟ್ ಬುಕ್ ಮಾಡಲು ಸಾಧ್ಯ.
ಈ ವಾರದ ಆರಂಭದಲ್ಲಿ ನವದೆಹಲಿಯಿಂದ ಬೆಂಗಳೂರಿಗೆ ಬಂದ ರೈಲಿನ ಕತೆ ಹೇಳುತ್ತೇವೆ ಕೇಳಿ . ರೈಲಿನಲ್ಲಿ ಪ್ರಯಾಣ ಮಾಡಲು ಬಯಸಿದ್ದವರು 14 ದಿನಗಳ ಕ್ವಾರಂಟೈನ್ ಗೆ ನಿರಾಕರಿಸಿದ್ದು ಇದಕ್ಕೆಲ್ಲ ಮೂಲ ಕಾರಣ ಇದಾದ ಮೇಲೆ ಐಆರ್‌ಸಿಟಿಸಿಯಲ್ಲಿ ಭಾರತೀಯ ರೈಲ್ವೆ ಫೀಚರ್ ಒಂದನ್ನು ಅಳವಡಿಕೆ ಮಾಡಿತು .
ರೈಲ್ವೆ ಪ್ರಯಾಣಕ್ಕೆ ಅಸ್ತು; ಟಿಕೆಟ್ ಬುಕ್ ಮಾಡುವುದು ಹೇಗೆ?
ಕೇವಲ ವಲಸೆ ಕಾರ್ಮಿಕರಿಗೆ ಮಾತ್ರವಲ್ಲದೇ ಎಲ್ಲ ಪ್ರಯಾಣಿಕರಿಗೆ ರೈಲು ಸೌಲಭ್ಯ ನೀಡಲು ಕಳೆದ ಸೋಮವಾರ ಭಾರತೀಯ ರೈಲ್ವೆ ನಿರ್ಧಾರ ಮಾಡಿತ್ತು. ತಲುಪುವ ರಾಜ್ಯಕ್ಕೆ ಒಂದು ಅವಕಾಶ ನೀಡಿ ಪ್ರಯಾಣಿಸುವವರು ಎಲ್ಲಿ ಕ್ವಾರಂಟೈನ್ ಆಗಬೇಕು ಎಂದು ಕೇಳಲಾಗಿತ್ತು.
ಹಾಗಾಗಿ ಹೊಸ ಫೀಚರ್ ತರಲಾಗಿದೆ. ಟಿಕೆಟ್ ಬುಕ್ ಮಾಡುವ ವೇಳೆ ಪಾಪ್ ಅಪ್ ವಿಂಡೊ ಒಂದು ಕಾಣಿಸಿಕೊಳ್ಳಲಿದೆ. ನೀವು ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿರುವ ಆರೋಗ್ಯ ಸಲಹೆ ಪಾಲಿಸಲು ಒಪ್ಪಿಗೆ ನೀಡಿದ್ದೀರಾ ಎಂದು ಪ್ರಶ್ನೆ ಕೇಳುತ್ತದೆ.
ಈ ಸಂದೇಶ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರಲಿದೆ. ಪ್ರಯಾಣಿಕ ಒಕೆ ಕೊಟ್ಟರೆ ಮಾತ್ರ ಟಿಕೆಟ್ ಬುಕ್ ಮಾಡಬಹುದು. ಅಲ್ಲದೇ ನೀವು ಸರ್ಕಾರ ನೀಡಿರುವ ಆರೋಗ್ಯ ಮಾರ್ಗಸೂಚಿ ಡೌನ್ ಲೋಡ್ ಸಹ ಮಾಡಿಕೊಳ್ಳಬಹುದು.
ಮೇ 14 ರಿಂದ ಇದನ್ನು ಕಡ್ಡಾಯ ಮಾಡಲಾಗಿದೆ. ನವದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ 543 ಜನ ಪ್ರಯಾಣಿಕರು ಕ್ವಾರಂಟೈನ್ ಗೆ ಹೋಗಲು ನಿರಾಕರಿಸಿದ್ದೇ ಕಡ್ಡಾಯ ಮಾಡಲು ಕಾರಣ.
ರಾಜಧಾನಿ ರೈಲುಗಳು ದೆಹಲಿಯಿಂದ ದೇಶದ ಪ್ರಮುಖ 15 ನಗರಗಳಿಗೆ ಸಂಚಾರ ಮಾಡಲಿದೆ. ನಾನ್ ಎಸಿ ವಿಭಾಗದಲ್ಲಿಯೇ ಸಂಚಾರ ಮಾಡಲಿದ್ದು ರೈಲ್ವೆ ಅಧಿಕೃತ ಆದೇಶ ನೀಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ