
ನವದೆಹಲಿ(ಜು.08) ಹೊಗೆ ಉಗುಳುತ್ತಾ ಸಾಗುತ್ತಿದ್ದ ರೈಲುಗಳು ಈಗಿಲ್ಲ. ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಭಾರತದ ರೈಲು ಬಳಿಕ ಹಲವು ಬದಲಾವಣೆ ಕಂಡಿದೆ. ಇದೀಗ ಉಗಿ ಬಂಡಿ ಇಲ್ಲ.ಇದೀಗ ಬಹುತೇಕ ರೈಲುಗಳು ವಿದ್ಯುತ್ ಚಾಲಿತವಾಗಿದೆ. ಆದರೆ ಹಳೇ ಗತವೈಭವದ ಸವಿ ಅನುಭವಿಸಲು ಕೇಂದ್ರ ರೈಲ್ವೇ ಇದೀಗ ಉಗಿಬಂಡಿ ಸೇವೆ ಮತ್ತೆ ಆರಂಭಿಸುತ್ತಿದೆ. ಸ್ಟೀಮ್ ಎಂಜಿನ್ ಹೊಂದಿರುವ ಹೆರಿಟೇಜ್ ರೈಲು ಸೇವೆಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ.ಚೆನ್ನೈನ ಎಂಜಿಆರ್ ಕೇಂದ್ರ ರೈಲು ನಿಲ್ದಾಣದಲ್ಲಿ ಈ ರೈಲಿಗೆ ಚಾಲನೆ ನೀಡಲಾಗಿದೆ.
ನೂತನ ಹೆರಿಟೇಜ್ ರೈಲು ಪಾರಂಪರಿಕ ಸ್ಥಳಗಳ ಮೂಲಕ ಸಾಗಲಿದೆ. ಶೀಘ್ರದಲ್ಲೇ ದೇಶದ ಹಲವು ಭಾಗದ ಪ್ರೇಕ್ಷಣಿಯ ಸ್ಥಳಗಳಲ್ಲಿ ಹೆರಿಟೇಜ್ ರೈಲು ಸಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ರೈಲು ಸೇವೆ ಉದ್ಘಾಟಿಸಿದ ಬಳಿಕ ನೂತನ ರೈಲನ್ನು ಸಚಿವ ಅಶ್ವಿನಿ ವೈಷ್ಣವ್ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಚೆನ್ನೈ ಕೇಂದ್ರ ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಮಾತನಾಡಿಸಿದ್ದಾರೆ.
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಶೇಕಡಾ 25 ರಷ್ಟು ಕಡಿತ, ಇಲ್ಲಿದೆ ಹೊಸ ಬೆಲೆ ಪಟ್ಟಿ!
ಇಂದು ರೈಲು ಪ್ರಯಾಣಿರಿಗೆ ರೈಲ್ವೇ ಇಲಾಖೆ ಮತ್ತೊಂದು ಕೊಡುಗೆ ನೀಡಿದೆ. ಎಸಿ ಕೋಚ್ ಟಿಕೆಟ್ ದರ ಶೇಕಡಾ 25 ರಷ್ಟು ಕಡಿತಗೊಳಿಸಿದೆ. ಯಾವ ಮಾರ್ಗದಲ್ಲಿನ ಎಸಿ ಕೋಚ್ ಸೀಟ್ ಶೇಕಡಾ 50 ರಷ್ಟು ಭರ್ತಿಯಾಗಿಲ್ಲವೋ, ಆ ರೈಲುಗಳ ಟಿಕೆಟ್ ದರ ಕಡಿತಗೊಂಡಿದೆ. ಶೇಕಡಾ 50 ರಷ್ಟು ಭರ್ತಿಯಾಗದ ರೈಲುಗಳು ವಂದೇ ಭಾರತ್ ಸೇರಿದಂತೆ ಎಲ್ಲಾ ಎಸಿ ಕೋಚ್‌ಗಳ ಟಿಕೆಟ್ ಬೆಲೆಯನ್ನು ಶೇಕಡಾ 25 ರಷ್ಟು ಕಡಿತಗೊಳಿಸಿದೆ.
ಸೆ.15ರಿಂದ ಮುಂಬೈ-ಮಂಗಳೂರು ನಡುವೆ ಗಣೇಶ ಚತುರ್ಥಿ ವಿಶೇಷ ರೈಲು
ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮುಂಬೈ ಲೋಕಮಾನ್ಯ ತಿಲಕ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸೆ.15ರಿಂದ ವಿಶೇಷ ರೈಲುಗಳ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ.
ರೈಲು ಸಂಖ್ಯೆ 01165 ಮುಂಬೈ ಲೋಕಮಾನ್ಯ ತಿಲಕ್ - ಮಂಗಳೂರು ಜಂಕ್ಷನ್ ವಿಶೇಷ ರೈಲು ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ರಾತ್ರಿ 10.15 ಗಂಟೆಗೆ ಹೊರಡಲಿದೆ. ಮರುದಿನ ಸಂಜೆ 5.20 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ಸೆ. 15, 16, 17, 18, 22, 23, 29 ಮತ್ತು 30 ರಂದು ರಾತ್ರಿ ಮುಂಬೈನಿಂದ ರೈಲು ಹೊರಡಲಿದೆ.
South Western Railway: ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಶಾಶ್ವತ ಸ್ಥಗಿತ!
ರೈಲು ಸಂಖ್ಯೆ 01166 ಮಂಗಳೂರು ಜಂಕ್ಷನ್ - ಮುಂಬೈ ಲೋಕಮಾನ್ಯ ತಿಲಕ್ ವಿಶೇಷ ಸಂಚಾರ ಮಂಗಳೂರು ಜಂಕ್ಷನ್‌ನಿಂದ ಸಂಜೆ 6.40 ಗಂಟೆಗೆ ಹೊರಡಲಿದೆ. ಮತ್ತು ಮುಂಬೈ ಲೋಕಮಾನ್ಯ ತಿಲಕ್‌ನ್ನು ಮರುದಿನ ಮಧ್ಯಾಹ್ನ 1.35 ಗಂಟೆಗೆ ತಲುಪುತ್ತದೆ. ಸೆಪ್ಟೆಂಬರ್ 17, 18, 19, 20, 24 ಮತ್ತು 25, ಅಕ್ಟೋಬರ್ 1 ಮತ್ತು 2 ರಂದು ಕ್ರಮವಾಗಿ ರೈಲು ಸಂಚರಿಸಲಿದೆ.
ಈ ರೈಲಿಗೆ ಥಾಣೆ, ಪನ್ವೇಲ…, ರೋಹಾ, ಮಡ್ಗಾಂವ್, ಖೇಡ್, ಚಿಪ್ಲೂನ್, ಸವರ್ಡೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಳಿ, ರಾಜಾಪುರ ರಸ್ತೆ, ವೈಭವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ…, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ…ಗಳಲ್ಲಿ ನಿಲುಗಡೆ ಇರುತ್ತದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ