ಪಾಕ್ ನಾರಿಯ ಹನಿಟ್ರ್ಯಾಪ್‌ನಲ್ಲಿ ಡಿಆರ್‌ಡಿಒ ವಿಜ್ಞಾನಿ, ಚಾರ್ಜ್​ಶೀಟಲ್ಲಿ​ ಬಯಲಾಯ್ತು ಭಯಾನಕ ಸತ್ಯ!

Published : Jul 08, 2023, 05:37 PM ISTUpdated : Jul 08, 2023, 05:46 PM IST
ಪಾಕ್ ನಾರಿಯ ಹನಿಟ್ರ್ಯಾಪ್‌ನಲ್ಲಿ ಡಿಆರ್‌ಡಿಒ ವಿಜ್ಞಾನಿ, ಚಾರ್ಜ್​ಶೀಟಲ್ಲಿ​ ಬಯಲಾಯ್ತು ಭಯಾನಕ ಸತ್ಯ!

ಸಾರಾಂಶ

ಪಾಕಿಸ್ತಾನದ ಹನಿಟ್ರ್ಯಾಪ್‌ಗೆ ಒಳಗಾಗಿ ಡಿಆರ್‌ಡಿಒ ನಿರ್ದೇಶಕ,  ಪ್ರದೀಪ ಕುರುಲ್ಕರ್‌ ಪಾಕಿಸ್ತಾನ ಏಜೆಂಟ್​ ಜೊತೆ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಹಲವು ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವುದು ಚಾರ್ಜ್ ಶೀಟ್‌ನಿಂದ ಬಯಲಾಗಿದೆ.

ನವದೆಹಲಿ (ಜು.8): ಪಾಕಿಸ್ತಾನದ ಹನಿಟ್ರ್ಯಾಪ್‌ಗೆ ಒಳಗಾಗಿ ಡಿಆರ್‌ಡಿಒ ನಿರ್ದೇಶಕ,  ಪ್ರದೀಪ ಕುರುಲ್ಕರ್‌ ಪಾಕಿಸ್ತಾನ ಏಜೆಂಟ್​ ಜೊತೆ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಹಲವು ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಆರೋಪ ಎದುರಿಸುತ್ತಿದ್ದು, ಇದೀಗ  ವಿಜ್ಞಾನಿ ಪ್ರದೀಪ ಕುರುಲ್ಕರ್‌ ವಿರುದ್ಧ  ತನಿಖಾ ತಂಡ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ. 

ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಲ್ಯಾಬ್ ಒಂದರ ನಿರ್ದೇಶಕರಾಗಿದ್ದ ಕುರುಲ್ಕರ್ (DRDO scientist Pradeep Kurulkar ) ವಿರುದ್ಧ ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಳೆದ ವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಕಳೆದ ಮೇ 3ರಂದು ಗೂಢಚರ್ಯೆ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದ್ದು,  ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅರುಣ್‌ ಕುಮಾರ್‌ ಪುತ್ತಿಲರನ್ನು ದೆಹಲಿಗೆ ಕರೆಸಿಕೊಂಡ ಬಿಎಲ್‌ ಸಂತೋಷ್‌, ರಾಜಕೀಯದಲ್ಲಿ ತೀ

ಪ್ರದೀಪ್ ಕುರುಲ್ಕರ್ ಮತ್ತು ಜಾರಾ ದಾಸ್‌ಗುಪ್ತ  ವಾಟ್ಸಾಪ್ ಮತ್ತು ಧ್ವನಿ ಮತ್ತು ವೀಡಿಯೊ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ದಾಸ್‌ಗುಪ್ತಾ ಯುಕೆ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದು,  ಅಶ್ಲೀಲ ಸಂದೇಶಗಳು ಮತ್ತು ವೀಡಿಯೊಗಳನ್ನು ಕಳುಹಿಸುವ ಮೂಲಕ ಪ್ರದೀಪ್ ಸ್ನೇಹ ಬೆಳೆದಿದೆ. ತನಿಖೆಯ ವೇಳೆ ಆಕೆಯ ಐಪಿ ವಿಳಾಸವನ್ನು ಪಾಕಿಸ್ತಾನದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಎಟಿಎಸ್ ಆರೋಪ ಪಟ್ಟಿಯಲ್ಲಿ ತಿಳಿಸಿದೆ.

ಬ್ರಹ್ಮೋಸ್ ಲಾಂಚರ್, ಡ್ರೋನ್, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್ ಮತ್ತು ಮಿಲಿಟರಿ ಬ್ರಿಡ್ಜಿಂಗ್ ಸಿಸ್ಟಮ್ ಸೇರಿದಂತೆ ಇತರ ವಿಷಯಗಳ ಬಗ್ಗೆ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪಾಕಿಸ್ತಾನಿ ಏಜೆಂಟ್ ಪ್ರಯತ್ನಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ಮಲತಾಯಿ ಧೋರಣೆ: ಸಿಎಂ ಸಿದ್ದರಾಮಯ್ಯ

ಜಾರಾ ದಾಸ್‌ಗುಪ್ತಳತ್ತ ಆಕರ್ಷಿತರಾದ ಕುರುಲ್ಕರ್, ಡಿಆರ್‌ಡಿಒದ ವರ್ಗೀಕೃತ ಮತ್ತು ಸೂಕ್ಷ್ಮ ಮಾಹಿತಿಯನ್ನು ತನ್ನ ವೈಯಕ್ತಿಕ ಫೋನ್‌ನಲ್ಲಿ ಸಂಗ್ರಹಿಸಿ ನಂತರ ಅದನ್ನು ಆಕೆಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹಲವಾರು ವಿಷಯಗಳ ಬಗ್ಗೆ ಆಕೆಯೊಂದಿಗೆ ಚಾಟ್ ಮಾಡಿದ್ದು,  ಕ್ಷಿಪಣಿಗಳು (SAM), ಡ್ರೋನ್‌ಗಳು, ಬ್ರಹ್ಮೋಸ್ ಮತ್ತು ಅಗ್ನಿ ಕ್ಷಿಪಣಿ ಲಾಂಚರ್‌ಗಳು ಮತ್ತು UCV ಸೇರಿದಂತೆ ವಿವಿಧ ಯೋಜನೆಗಳ ಕುರಿತು  ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಎಟಿಎಸ್ ಪ್ರಕಾರ ಇಬ್ಬರೂ ಜೂನ್ 2022 ರಿಂದ ಡಿಸೆಂಬರ್ 2022 ರವರೆಗೆ ಸಂಪರ್ಕದಲ್ಲಿದ್ದರು. ಅವರ ಚಟುವಟಿಕೆಗಳು ಅನುಮಾನಾಸ್ಪದವಾಗಿ ಕಂಡುಬಂದ ನಂತರ DRDO ಆಂತರಿಕ ತನಿಖೆಯನ್ನು ಪ್ರಾರಂಭಿಸುವ ಮೊದಲು, ಪ್ರದೀಪ್ ಕುರುಲ್ಕರ್ ಅವರು ಫೆಬ್ರವರಿ 2023 ರಲ್ಲಿ ಜಾರಾ ಅವರ ನಂಬರ್‌ ಅನ್ನು ಬ್ಲಾಕ್ ಮಾಡಿದ್ದರು ಎಂದು ತಿಳಿದುಬಂದಿದೆ.

ಕುರುಲ್ಕರ್  ಅವರು ಜಾರಾ ನಂಬರ್ ಅನ್ನು ಬ್ಲಾಕ್ ಮಾಡಿದ ನಂತರ ಮತ್ತೊಂದು ಅಪರಿಚಿತ ಭಾರತೀಯ ಸಂಖ್ಯೆಯಿಂದ WhatsApp ಸಂದೇಶ ಬಂದಿತ್ತು. ಅದರಲ್ಲಿ ನೀವು ನನ್ನ ಸಂಖ್ಯೆಯನ್ನು ಏಕೆ  ಬ್ಲಾಕ್ ಮಾಡಿದ್ದೀರಿ ಎಂಬ ಚಾಟ್ ದಾಖಲೆಗಳು ಸೇರಿ  ತಮ್ಮ ವೈಯಕ್ತಿಕ ಮತ್ತು ಅಧಿಕೃತ ವೇಳಾಪಟ್ಟಿಗಳು ಮತ್ತು ಸ್ಥಳ ವಿಳಾಸವನ್ನು ಯಾರೊಂದಿಗೂ ಹಂಚಿಕೊಳ್ಳಬಾರದೆಂದು ತಿಳಿದಿದ್ದರೂ ಸಹ ಆಕೆಯೊಂದಿಗೆ ಹಂಚಿಕೊಂಡಿದ್ದಾರೆ  ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌