ಭಾರತೀಯ ರೈಲು ವಿಶೇಷ ರೈಲಿಗೆ ಚಾಲನೆ ನೀಡಿದೆ. 7 ದಿನದ ಪ್ರಯಾಣ, ಟಿಕೆಟ್ ಬೆಲೆ 39,995 ರೂಪಾಯಿ. ಒಂದೇ ಬಾರಿಗೆ ಇಷ್ಟು ಹಣ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಕಂತಿನ ಮೂಲಕ ಪಾವತಿಗೂ ಅವಕಾಶ ನೀಡಲಾಗಿದೆ.
ನವದೆಹಲಿ(ಜ.17): ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜನವರಿ 1, 2024ಕ್ಕೆ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಆಯೋಧ್ಯೆಗೆ ಭೇಟಿ ನೀಡುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಇತ್ತ ಭಾರತೀಯ ರೈಲ್ವೇ ಹೊಸ ರೈಲಿಗೆ ಚಾಲನೆ ನೀಡಿದೆ. ದೆಹಲಿ, ಅಯೋಧ್ಯೆ ಹಾಗೂ ನೇಪಾಳದ ಜನಕಪುರ ನಡುವಿನ ವಿಶೇಷ ರೈಲು ಆರಂಭಿಸಲಾಗಿದೆ. ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಅನ್ನೋ ಈ ರೈಲಿನ ಟಿಕೆಟ್ ಬೆಲೆ 39,995 ರೂಪಾಯಿ. ಇಂದಿನಿಂದ ಈ ರೈಲು ಆರಂಭಗೊಂಡಿದೆ. ಈ ರೈಲು ಪ್ರಯಾಣ 7 ದಿನಗಳನ್ನು ಒಳಗೊಂಡಿದೆ. ಒಂದೇ ಬಾರಿಗೆ ರೈಲು ಟಿಕೆಟ್ ಭರಿಸಲು ಸಾಧ್ಯವಾಗದಿದ್ದರೆ, ಕಂತಿನ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಯಾವ ಕ್ಲಾಸ್ ಆಯ್ಕೆ ಮಾಡುತ್ತೀರಿ ಅನ್ನೋದರ ಮೇಲೆ ಟಿಕೆಟ್ ಬೆಲೆ ನಿರ್ಧಾರವಾಗಲಿದೆ. ಎಸಿ ರೂಮ್, ಸಸ್ಯಾಹಾರಿ ಊಟ, ಬಸ್ ಯಾತ್ರೆ, ಪ್ರೇಕ್ಷಣಿಯ, ಐತಿಹಾಸಿಕ ಸ್ಥಳಗಳ ಭೇಟಿ, ವಿಮೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳು ಈ ರೈಲಿನಲ್ಲಿ ಸಿಗಲಿದೆ. ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಾರಣಾಸಿ ಹಾಗೂ ಜನಕಪುರದಲ್ಲಿ ತಂಗಲಿದ್ದಾರೆ. ಆಯೋಧ್ಯೆ, ನಂದಿಗ್ರಾಮ, ಪ್ರಯಾಗರಾಜ್, ವಾರಾಣಾಸಿ, ನೇಪಾಳದಲ್ಲಿರುವ ಸೀತಾದೇವಿ ಮಂದಿರ ಸ್ಥಳ ಸಿತಾಮಾರ್ಹಿಗಳ ಮೂಲಕ ಈ ರೈಲು ಸಂಚರಿಸಲಿದೆ. ಕೊನೆಯ ಸ್ಟಾಪ್ ಜನಕಪುರದಿಂದ ಸೀತಾದೇವಿ ಮಂದಿರಕ್ಕೆ 70 ಕಿಲೋಮೀಟರ್ ದೂರವಿದೆ.
Railway Rules: ರೈಲಿನಲ್ಲಿ ಈ 5 ನಿಯಮಗಳನ್ನು ಉಲ್ಲಂಘಿಸಿದರೆ ಕಂಬಿ ಎಣಿಸೋದು ಗ್ಯಾರಂಟಿ
ಈ ರೈಲಿನಲ್ಲಿ 2 ರೆಸ್ಟೋರೆಂಟ್, ಬಾತ್‌ರೂಂ, ಅತ್ಯಾಧುನಿಕ ಶೌಚಾಲಯ, ಫೂಟ್ ಮಸಾಜ್ ಸೇರಿದಂತೆ ಹಲವು ಸೌಲಭ್ಯಗಳು ಈ ರೈಲಿನಲ್ಲಿದೆ. ದೆಹಲಿಯಿಂದ ಹೊರಡುವ ಈ ರೈಲು ಮೊದಲು ಆಯೋಧ್ಯೆಗೆ ತೆರಳಲಿದೆ. ಬಳಿಕ ನಂದಿಗ್ರಾಮಕ್ಕೆ ತಲುಪಲಿದೆ.
9 ದಿನಗಳ ಕಾಶಿ ಟೂರ್ ಪ್ಯಾಕೇಜ್
ಭಾರತೀಯ ರೈಲ್ವೆ ಮತ್ತು ಟ್ರಾವೆಲ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಟೂರಿಸಂ ಸಂಸ್ಥೆ ಸಹಯೋಗದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಒಂಭತ್ತು ದಿನಗಳ ವಿಶೇಷ ಪ್ಯಾಕೇಜ್ ಟೂರ್ ಪ್ರಕಟಿಸಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಾವಲ್ ಟೈಮ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಘ್ನೇಶ್, ಪ್ರಸಿದ್ಧ ತೀರ್ಥಕ್ಷೇತ್ರಗಳಾದ ವಾರಾಣಸಿ, ಗಯಾ, ಪ್ರಯಾಗರಾಜ್ ಹಾಗೂ ಅಯೋಧ್ಯೆ ಭೇಟಿ ಮಾಡಿ, ದೇವರ ದರ್ಶನ ಮಾಡಿಸಲಾಗುತ್ತದೆ. ಊಟ, ತಂಗುವ ಸ್ಥಳದ ಅನುಕೂಲ, ವೈದ್ಯಕೀಯ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. 2 ಎಸ್‌ಎಲ್‌ಗೆ 16,500 ಮತ್ತು 3ಎಸಿಗೆ 18,750 ರು. ಗಳಿಂದ ಈ ಪ್ಯಾಕೇಜ್ ವೆಚ್ಚ ಪ್ರಾರಂಭವಾಗಲಿದೆ. ಒಟ್ಟು 600 ಜನ ಪ್ರಯಾಣಿಸುವ ರೈಲು ಇದಾಗಿದೆ
ಅಬ್ಬಬ್ಬಾ..ರೈಲು ಪ್ರಯಾಣ ಚೀಪ್ ಅಲ್ಲಾರೀ..ಟಿಕೆಟ್ ಬೆಲೆ ಭರ್ತಿ 19 ಲಕ್ಷ
ಬೆಳಗಾವಿ-ಮಣುಗೂರ ಎಕ್ಸ್‌ಪ್ರೆಸ್ ರೈಲು ಜ.17ರಿಂದ ಪ್ರಾರಂಭ
ಬೆಳಗಾವಿ-ಮಣುಗೂರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07335/07336) ಸೇವೆಯನ್ನು ಜ.17ರಂದು ಬೆಳಗಾವಿಯಿಂದ ರೈಲು ಸಂಚಾರ ಪ್ರಾರಂಭವಾಲಿದೆ. ಬೆಳಗಾವಿ-ಮಣುಗೂರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಜ. 17 ರಿಂದ ಮಾ. 30 ರವರೆಗೆ ಬೆಳಗಾವಿಯಿಂದ ಮಧ್ಯಾಹ್ನ 1.10ಕ್ಕೆ ಹೊರಡುವ ಈ ರೈಲು ಮರುದಿನ ಮಧ್ಯಾಹ್ನ 12.50ಕ್ಕೆ ಮಣುಗೂರ ತಲುಪುವುದು. ಜ.18 ರಿಂದ ಮಣುಗೂರನಿಂದ ಮಧ್ಯಾಹ್ನ 3.40ಕ್ಕೆ ಹೊರಡುವ ರೈಲು ಮರುದಿನ ಮಧ್ಯಾಹ್ನ 3.55ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ಖಾನಾಪೂರ, ಲೋಂಡಾ, ಅಳ್ಳಾವರ, ಧಾರವಾಡ, ಹುಬ್ಬಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದರೋಜಿ, ಬಳ್ಳಾರಿ, ಗುಂತಕಲ್ ಮಂತ್ರಾಲಯ ರೋಡ, ರಾಯಚೂರ, ಯಾದಗಿರಿ, ಚಿತ್ತಾಪುರ, ಲಿಂಗಂಪಲ್ಲಿ, ಸಿಕಂದರಾಬಾದ, ವಾರಂಗಲ್ಲ, ಭದ್ರಾಚಲಂ ರೋಡ ಮಾರ್ಗವಾಗಿ ಸಂಚರಿಸಲಿದೆ.