
ನವದೆಹಲಿ(ಆ.29) ಪಾಸ್‌ಪೋರ್ಟ್ ಸೇವೆಯಲ್ಲಿ ವ್ಯತ್ಯಯ ಎದುರಾಗಿದ್ದು, ಹಲವರು ಸಮಸ್ಯೆಗೆ ಸಿಲುಕಿದ್ದಾರೆ. ಆನ್‌ಲೈನ್ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಯಾವುದೇ ಹೊಸ ಅರ್ಜಿಗಳನ್ನು, ಅಪಾಯಿಟ್ಮೆಂಟ್‌ಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗುತ್ತಿಲ್ಲ. ಈಗಾಗಲೇ ಬುಕಿಂಗ್ ಮಾಡಿರುವ ಅರ್ಜಿಗಳ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ ಎಂದು ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಪಷ್ಪಪಡಿಸಿದೆ.
ತಾಂತ್ರಿಕ ನಿರ್ವಹಣೆ ಕಾರಣ ಭಾರತೀಯ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತಗೊಂಡಿದೆ. ಆಗಸ್ಟ್ 29 ರಿಂದ ಸೆಪ್ಟೆಂಬರ್ 2ರ ವರೆಗೆ ಒಟ್ಟು 5 ದಿನಗಳ ಕಾಲ ಪಾಸ್‌ಪೋರ್ಟ್ ಆನ್‌ಲೈನ್ ಪೋರ್ಟಲ್ ಸೇವೆ ಲಭ್ಯವಿಲ್ಲ. ಈ ಕುರಿತು ಪಾಸ್‌ಪೋರ್ಟ್ ಕೇಂದ್ರ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ತಾಂತ್ರಿಕ ನಿರ್ವಹಣೆ ಸಾಮಾನ್ಯ ಪ್ರಕ್ರಿಯೆಯಾಗಿದೆ. 5 ದಿನಗಳ ಕಾಲ ತಾಂತ್ರಿಕ ನಿರ್ವಹಣೆ ಕಾರಣದಿಂದ ಪೋರ್ಟಲ್ ಸೇವೆ ಸ್ಥಗಿತಗೊಂಡಿದೆ. ಜನರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.
ಕಂಗಾಲಾದ ಬೆಂಗಳೂರು ಸಿಇಒ: ಬಾಸ್ ಪಾಸ್‌ಪೋರ್ಟ್ ಕದ್ದೊಯ್ದ ಕೆಲಸ ಕಳೆದುಕೊಂಡ ಉದ್ಯೋಗಿ!
ಆಗಸ್ಟ್ 29ರ ರಾತ್ರಿ 8 ಗಂಟೆಯಿಂದ ಸೆಪ್ಟೆಂಬರ್ 2ರ ಬೆಳಗ್ಗೆ 6 ಗಂಟೆ ವರೆಗೆ ತಾಂತ್ರಿಕ ನಿರ್ವಹಣೆ ಕಾರಣ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ನೀಡಲಾಗಿದೆ. ಈಗಾಗಲೇ ಬುಕಿಂಗ್ ಮಾಡಿದವರಿಗೆ ಸೂಚನೆ ನೀಡಲಾಗಿದ್ದು, ಪೋರ್ಟಲ್ ಸೇವೆ ಲಭ್ಯವಾದ ಬಳಿಕ ಅಪಾಯಿಟ್ಮೆಂಟ್ ಮಾಡಿದವರಿಗೆ ಸೇವೆ ಸಿಗಲಿದೆ. ಇನ್ನು 5 ದಿನಗಳ ಕಾಲ ಯಾವುದೇ ಅಪಾಯಿಟ್ಮೆಂಟ್ ಸ್ವೀಕರಿಸಲಾಗುವುದಿಲ್ಲ ಎಂದಿದ್ದಾರೆ.
ದೇಶದ ಎಲ್ಲಾ ಪಾಸ್‌ಪೋರ್ಟ್ ಕೇಂದ್ರಗಳಲ್ಲಿ ತಾಂತ್ರಿಕ ನಿರ್ವಹಣೆ ಕಾರ್ಯ ನಡೆಯಲಿದೆ. ಹೀಗಾಗಿ ದೇಶದ ಎಲ್ಲಾ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸೇವೆಗಳು ಲಭ್ಯವಿಲ್ಲ. ತಾಂತ್ರಕ ನಿರ್ವಹಣೆಯಿಂದ ಇದೀಗ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆನ್‌ಲೈನ್ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಮೂಲಕ ಹೊಸ ಪಾಸ್‌ಪೋರ್ಟ್ ಅಥವಾ ಪಾಸ್‌ಪೋರ್ಟ್ ನವೀಕರಿಸಲಾಗುತ್ತದೆ. ಪೋರ್ಟಲ್ ಮೂಲಕ ಅಭ್ಯರ್ಥಿಗಳು ಅಪಾಯಿಟ್ಮೆಂಟ್ ಬುಕ್ ಮಾಡಿಕೊಳ್ಳಬೇಕು. ಬಳಿಕ ನಿಗದಿತ ದಿನಾಂಕ ಹಾಗೂ ಸಮಯದಂದು ಪಾಸ್‌ಪೋಸ್ ಸೇವಾ ಕೇಂದ್ರಕ್ಕೆ ತೆರಳಿ ದಾಖಲೆ ಪತ್ರಗಳು, ಪ್ರಮಾಣ ಪತ್ರಗಳನ್ನು ನೀಡಬೇಕು. ದಾಖಲೆಗಳ ವೆರಿಫಿಕೇಶನ್ ಪ್ರಕ್ರಿಯೆ ಬಳಿಕ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆ ನಡೆಯಲಿದೆ. ಇದಾದ ಬಳಿಕ ಅಭ್ಯರ್ಥಿಯ ವಿಳಾಸಕ್ಕೆ ಪಾಸ್‌ಪೋರ್ಟ್ ತಲುಪಲಿದೆ. ಈ ಪ್ರಕ್ರಿಯೆಗೆ 30 ರಿಂದ 45 ದಿನದ ಅವಶ್ಯಕತೆ ಇದೆ. ಇನ್ನು ತತ್ಕಾಲ್ ಮೂಲಕ ಪಾಸ್‌ಪೋರ್ಟ್ ಬಯಿಸಿದರೆ ಒಂದೇ ದಿನದಲ್ಲಿ ಪಾಸ್‌ಪೋರ್ಟ್ ಕೈಸೇರಲಿದೆ.
ವಿದೇಶದಲ್ಲಿ 58 ಸಾವಿರ ರೂಪಾಯಿ ದಂಡ ಪಾವತಿಸಿ ಕ್ಷಮೆ ಕೇಳಿದ ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ