ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾಪಡೆಗೆ ಎದುರಾದ ಪಾಕ್‌ ನೌಕೆ!

Published : May 01, 2025, 03:34 PM ISTUpdated : May 01, 2025, 03:58 PM IST
ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾಪಡೆಗೆ ಎದುರಾದ ಪಾಕ್‌ ನೌಕೆ!

ಸಾರಾಂಶ

ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಯುದ್ಧ ತರಬೇತಿ ತೀವ್ರಗೊಳಿಸಿದೆ. ಹಡಗು ವಿರೋಧಿ ಕ್ಷಿಪಣಿ ಪ್ರಯೋಗ, ಟ್ಯಾಂಕರ್‌ಗಳೊಂದಿಗೆ ಸಮರಾಭ್ಯಾಸ ನಡೆಸಿ, 'ಹಸಿರು ಅಧಿಸೂಚನೆ' ನೀಡಿದೆ. ಪಾಕಿಸ್ತಾನ ನೌಕೆಯೊಂದಿಗೆ ಮುಖಾಮುಖಿಯಾಗಿ ಎಚ್ಚರಿಕೆ ನೀಡಿದೆ. ಭದ್ರತೆಗೆ ಸನ್ನದ್ಧವಾಗಿದೆ ಎಂಬ ಸಂದೇಶ ರವಾನಿಸಿದೆ.

ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಯುದ್ಧ ತರಬೇತಿಗಳನ್ನು ತೀವ್ರಗೊಳಿಸಿದೆ.  ಭಾರತದ ವಿಶೇಷ ಆರ್ಥಿಕ ವಲಯದೊಳಗೆ ತೀವ್ರ ಸಮರಾಭ್ಯಾಸ ನಡೆಯುತ್ತಿದ್ದು, ಯಾವುದೇ ಅಪಾಯಕರ ಚಟುವಟಿಕೆಗಳ ಬಗ್ಗೆ ನೌಕಾಪಡೆಯು ಎಚ್ಚರಿಕೆಯಿಂದ ಇರುವಂತೆ ತನ್ನ ಯುದ್ಧ ನೌಕೆಗಳನ್ನು ಸಿದ್ಧವಾಗಿಸಿದೆ. ನೌಕಾ ಸೇನೆಯ ತಾಲೀಮು ವೇಳೆ 4 ನೌಕಾ ಪಡೆ ಹಡಗು ಮತ್ತು ಒಂದು ಪಾಕಿಸ್ತಾನದ ನೌಕೆ ಮುಖಾಮುಖಿಯಾಗಿದೆ.  ಜಲಗಡಿಯಿಂದ ಕೇವಲ 85 ನಾಟಿಕಲ್ ಮೈಲು ದೂರದಲ್ಲಿ ಸಮುದ್ರದಲ್ಲಿ ನೌಕಾಪಡೆಗಳೂ ಮುಖಾಮುಖಿಯಾಗಿದ್ದು, ಭಾರತೀಯ ನೌಕಾಪಡೆ ಗಾಳಿಯಲ್ಲಿ ಗುಂಡು ಹಾರಿಸಿ ತಾವು ಕೂಡ ಸಮರಾಭ್ಯಾಸದಲ್ಲಿ ತೊಡಗಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದೆ.  ಭಾರತೀಯ ನೌಕಾಪಡೆಯು ಏಪ್ರಿಲ್ 30ರಿಂದ ಮೇ 3ರ ತನಕ ನಾಲ್ಕು ಟ್ಯಾಂಕರ್‌ ಜೊತೆಗೆ  ಸಮರಾಭ್ಯಾಸದಲ್ಲಿ ತೊಡಗಿದೆ ಜೊತೆಗೆ ಹಸಿರು ಅಧಿಸೂಚನೆ ನೀಡಿದೆ. ಇದರ ಅರ್ಥ ಮುಂದಿನ ದಿನಗಳಲ್ಲಿ ಸಮುದ್ರದ ಕೆಲವು ಭಾಗಗಳಲ್ಲಿ ನೈಜವಾಗಿ ಗುಂಡು ಪ್ರಯೋಗ (live fire) ನಡೆಯಲಿದೆ ಎಂಬ ಎಚ್ಚರಿಕೆ ಕೂಡ ನೀಡಿದೆ.

ಹಸಿರು ಅಧಿಸೂಚನೆ ಎಂದರೆ ಏನು?
ಇದು ನಾಗರಿಕ ಹಡಗುಗಳು ಮತ್ತು ವಿಮಾನಗಳು ಜಗಗಡಿ ಪ್ರದೇಶದಿಂದ ದೂರವಿರಲಿ ಎಂಬ ಸೂಚನೆ ಜೊತೆಗೆ ಎಲ್ಲರ ಸುರಕ್ಷತೆ ಕಾಯಲಾಗುತ್ತದೆ. ಇತ್ತೀಚೆಗೆ ಭಾರತೀಯ ನೌಕಾಪಡೆ ಹಡಗು ವಿರೋಧಿ ಕ್ಷಿಪಣಿಗಳ ಪ್ರಯೋಗ ಮಾಡಿದೆ. ಬ್ರಹ್ಮೋಸ್ ಎಂಬ ಬಲಿಷ್ಠ ಕ್ಷಿಪಣಿಗಳನ್ನು ಬಳಸಿಕೊಂಡು ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡಿದವು. ಈ ತರಬೇತಿಯ ಉದ್ದೇಶ, ಯುದ್ಧ ಸಮಯದಲ್ಲಿ ನಿಖರವಾಗಿ ದಾಳಿ ಮಾಡಲು ಸಿದ್ಧರಾಗಿರುವುದನ್ನು ತೋರಿಸುವುದಾಗಿದೆ.

ಭಾರತದ ವಿಶೇಷ ಆರ್ಥಿಕ ವಲಯದಲ್ಲಿ (EEZ) ನೌಕಾಪಡೆ ಯುದ್ಧ ನೌಕೆಗಳ ಸಹಿತ ಹಲವಾರು ವ್ಯಾಯಾಮಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಹಡಗುಗಳು ಹಾಗೂ ವಿಮಾನಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಪ್ರಯೋಗಗಳು ನಡೆಸಲಾಗಿದೆ. ಈ ತರಬೇತಿಗಳ ಉದ್ದೇಶ ಯುದ್ಧಕ್ಕೆ ತಯಾರಾಗಿ ಇರುವುದನ್ನು ತೋರಿಸುವುದು ಮತ್ತು ಯಾವುದೇ ಅಪಾಯ ಎದುರಾದರೂ ಬಲವಾಗಿ ಪ್ರತಿಸ್ಪಂದಿಸುವುದಾಗಿದೆ.

ಭಾನುವಾರ, ನೌಕಾಪಡೆಯು ಬಹು ದೂರಕ್ಕೆ ಹೊಡೆಯುವ ಹಡಗು ವಿರೋಧಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ನೌಕಾಪಡೆಯ ವಕ್ತಾರರ ಪ್ರಕಾರ, “ನಾವು ಯಾವಾಗ ಬೇಕಾದರೂ, ಎಲ್ಲಿಗೆ ಬೇಕಾದರೂ ದೇಶದ ಕಡಲ ಭದ್ರತೆಯನ್ನು ರಕ್ಷಿಸಲು ಸಿದ್ಧವಾಗಿದ್ದೇವೆ.” ಎಂದಿದ್ದಾರೆ. ಪಾಕಿಸ್ತಾನ ಕಳೆದ ವಾರ ನಾಲ್ಕು ಬಾರಿ ಕ್ಷಿಪಣಿಗಳ ಪ್ರಯೋಗ ಮಾಡುವ ಬಗ್ಗೆ ಎಚ್ಚರಿಕೆ ನೀಡಿದರೂ, ಅದು ಯಾವುದೇ ಪ್ರಯೋಗಗಳನ್ನು ನಡೆಸಿಲ್ಲ ಎಂದು ವರದಿಯಾಗಿದೆ. ಭಾರತೀಯ ನೌಕಾಪಡೆಯು ಪಾಕಿಸ್ತಾನದ ಈ ಚಟುವಟಿಕೆಗಳ ಮೇಲೆ ಕಣ್ಣು ಇಡುತ್ತಿದೆ.

ಇದಲ್ಲದೆ, ಭಾರತೀಯ ನೌಕಾಪಡೆಯ INS Surat ಹಡಗಿನಿಂದ ಮಿಡ್-ರೇಂಜ್ ಸ್ಯಾಮ್ (MR-SAM) ಕ್ಷಿಪಣಿಯ ಪ್ರಯೋಗ ಕೂಡ ಯಶಸ್ವಿಯಾಗಿ ನಡೆಸಲಾಗಿದೆ. ಇದು ಶತ್ರು ವಿಮಾನಗಳನ್ನು ಅಥವಾ ಮೇಲ್ಮೈದಿಂದ ಬರುತ್ತಿರುವ ಅಪಾಯಗಳನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ.

ಈ ಎಲ್ಲ ಚಟುವಟಿಕೆಗಳು ಪಾಕಿಸ್ತಾನವು ಸಮುದ್ರದಲ್ಲಿ ಕ್ಷಿಪಣಿ ಪ್ರಯೋಗ ಮಾಡಲು ಉದ್ದೇಶಿಸಿದ ಸಮಯದ ಹಿನ್ನೆಲೆ ಮತ್ತು ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಭಯೋತ್ಪಾದಕರು ಕೊಂದ ನಂತರ   ಉದ್ವಿಗ್ನ ಪರಿಸ್ಥಿತಿಯ ನಡುವೆ ನಡೆದಿವೆ. ಭಾರತೀಯ ನೌಕಾಪಡೆಯ ಈ ಕ್ರಮಗಳು ದೇಶದ ಭದ್ರತೆಗೆ ಗಟ್ಟಿಯಾದ ತಯಾರಿ ಹಾಗೂ ಸ್ಪಷ್ಟವಾದ ಎಚ್ಚರಿಕೆಯ ಸೂಚನೆ ಎಂಬುದು ತಜ್ಞರ ಅಭಿಪ್ರಾಯ. ಪರಿಣಾಮವಾಗಿಯೇ ಅರೇಬಿಯನ್ ಸಮುದ್ರದಲ್ಲಿ ತನ್ನ ಚಟುವಟಿಕೆಗಳನ್ನು ಹೆಚ್ಚು ತೀವ್ರಗೊಳಿಸಿದೆ. ಇದರ ಜೊತೆಗೆ  ಪಾಕಿಸ್ತಾನಕ್ಕೆ ಅಂಟಿಕೊಂಡಿರುವ ಭೂ ಗಡಿಯಲ್ಲಿ ಕೂಡ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜನೆ ಮಾಡಿರುವುದು ಸ್ಥಳೀಯರ ಮೊಬೈಲ್‌ ನಲ್ಲಿ ಸೆರೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..