1971ರ ಯುದ್ಧ ಬಳಿಕ ಭಾರತ ನೌಕಾಪಡೆಯಿಂದ ಪಾಕಿಸ್ತಾನ ಕರಾಚಿ ಬಂದರು ಮೇಲೆ ದಾಳಿ

Published : May 09, 2025, 01:15 AM ISTUpdated : May 09, 2025, 01:16 AM IST
1971ರ ಯುದ್ಧ ಬಳಿಕ ಭಾರತ ನೌಕಾಪಡೆಯಿಂದ ಪಾಕಿಸ್ತಾನ ಕರಾಚಿ ಬಂದರು ಮೇಲೆ ದಾಳಿ

ಸಾರಾಂಶ

1971ರ ಯುದ್ಧದ ಬಳಿಕ ಭಾರತೀಯ ನೌಕಾಸೇನೆಯ ಐಎನ್ಎಸ್ ವಿಕ್ರಾಂತ್ ಇದೇ ಮೊದಲ ಬಾರಿಗೆ ಪಾಕಿಸ್ತಾನ ಮೇಲೆ ದಾಳಿ ಮಾಡಿದೆ. ಕರಾಚಿ ಬಂದರಿನ ಬಹುತೇಕ ಭಾಗವನ್ನು ಧ್ವಂಸಗೊಳಿಸಲಾಗಿದೆ.

ನವದೆಹಲಿ(ಮೇ.09)  ಪಾಕಿಸ್ತಾನ ಇನ್ನೆಂದು ಭಾರತದತ್ತ ಕಣ್ಣೆಟ್ಟಿ ನೋಡದಂತ ಮಾಡಲು ಭಾರತ ಸಜ್ಜಾಗಿದೆ. ಮೂರು ಸೇನೆಗಳು ಏಕಕಾಲಕ್ಕೆ ಪಾಕಿಸ್ತಾನ ಮೇಲೆ ಮುಗಿಬಿದ್ದಿದೆ. ಪಾಕಿಸ್ತಾನ ದಾಳಿ ವಿಫಲಗೊಳಿರುವ ಸೇನೆ ಪ್ರತಿದಾಳಿ ನಡೆಸುತ್ತಿದೆ. 1971ರಲ್ಲಿ ಪಾಕಿಸ್ತಾನ ಮೇಲಿನ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕರಾಚಿ ಬಂದರು ಮೇಲೆ ಭಾರತೀಯ ನೌಕಾ ಪಡೆ ದಾಳಿ ಮಾಡಿದೆ. ಐಎನ್ಎಸ್ ವಿಕ್ರಾಂತ್ ಇದೀಗ ಕರಾಚಿ ಬಂದರು ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಕರಾಚಿ ಬಂದಿನ ಬಹುತೇಕ ಭಾಗ ಧ್ವಂಸಗೊಂಡಿದೆ. ಭಾರತದ ಮೇಲೆ ಪಾಕಿಸ್ತಾನ ನಡೆಸಿದ 8 ಮಿಸೈಲ್ ದಾಳಿಗೆ ಪ್ರತಿಯಾಗಿ ಇದೀಗ ಭಾರತ ಎಲ್ಲಾ ದಿಕ್ಕಿನಿಂದ ಪಾಕಿಸ್ತಾನದ ಮೇಲೆ ಮುಗಿಬಿದ್ದಿದೆ.

ಕರಾಚಿ ಬಂದರು ಧಗಧಗ
ಐಎನ್ಎಸ್ ವಿಕ್ರಾಂತ್ 1971ರಲ್ಲಿ ಪಾಕಿಸ್ತಾನ ವಿರುದ್ದದ ಯುದ್ಧದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿತ್ತು. ಈ ವೇಳೆ ಕರಾಚಿ ಬಂದರು ಸಂಪೂರ್ಣ ನಾಶವಾಗಿತ್ತು. 1971ರ ಬಳಿಕ ಇದೇ ಮೊದಲ ಬಾರಿಗೆ ವಿಕ್ರಾಂತ್ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ. ಭಾರತದ ದಾಳಿಯಿಂದ ಕರಾಚಿ ಬಂದರು ಹೊತ್ತಿ ಉರಿದಿದೆ. ಕರಾಚಿ ಬಂದರು ಪಾಕಿಸ್ತಾನಕ್ಕೆ ಇಂಧನ ಪೂರೈಕೆ ಮಾಡುವ ಪ್ರಮುಖ ಬಂದರಾಗಿದೆ. ಇದರ ಮೇಲೆ ದಾಳಿ ಮಾಡಿರುವ ಕಾರಣ ಪಾಕಿಸ್ತಾನ ತೀವ್ರ ಆತಂಕಗೊಂಡಿದೆ. ಕರಾಚಿ ದಾಳಿಯಿಂದ ಪಾಕಿಸ್ತಾನದಲ್ಲಿ ಲಾಕ್‌ಡೌನ್ ಪರಿಸ್ಥಿತಿ ಎದುರಾಗಿದೆ.

Breaking ಪಾಕಿಸ್ತಾನ ಪ್ರಧಾನಿ ಷರೀಫ್, ಸೇನಾ ಮುಖ್ಯಸ್ಥ ಆಸಿಮ್ ನಿವಾಸದ ಬಳಿ ಸ್ಫೋಟ

ಭಾರತದಿಂದ 26 ಯುದ್ಧ ನೌಕೆ ನಿಯೋಜನೆ
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಹಾಗೂ ಪಾಕಿಸ್ತಾನದ ಸಂಭಾವ್ಯ ದಾಳಿ ಎದುರಿಸಲು ಭಾರತ ಬರೋಬ್ಬರಿ 26 ಯುದ್ಧ ನೌಕೆಯನ್ನು ನಿಯೋಜಿಸಿದೆ. ಇದರಲ್ಲಿ ಒಂದು ಯುದ್ದ ನೌಕೆಯಾಗಿರುವ ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನದ ಕರಾಚಿ ಪೋರ್ಟ್ ಮೇಲೆ ದಾಳಿ ಮಾಡಿದೆ 

ಮೂರ ಸೇನೆ ಪಡೆಯಿಂದ ದಾಳಿ
ಐಎನ್ಎಸ್ ವಿಕ್ರಾಂತ್ ಇದೀಗ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ನೌಕಾ ಪಡೆ ಹದ್ದಿನ ಕಣ್ಣಿಟ್ಟು ದಾಳಿ ನಡೆಸುತ್ತಿದೆ. ಪಾಕಿಸ್ತಾನ ಊಹಿಸದ ರೀತಿಯಲ್ಲಿ ದಾಳಿ ಸಂಘಟಿಸುತ್ತಿದೆ. ನೌಕಾ ಪಡೆ ದಾಳಿಯಿಂದ ಇದೀಗ ಭಾರತದ ಮೂರು ಸೇನಾ ಪಡೆ ದಾಳಿ ನಡೆಸಿದೆ. ವಾಯುದಾಳಿ, ಭೂದಾಳಿ ಹಾಗೂ ಇದೀಗ ನೌಕಾಪಡೆಯಿಂದಲೂ ದಾಳಿ ನಡೆದಿದೆ.

ಪಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಭಾರತ
ಪಾಕಿಸ್ತಾನ ಫೈಟರ್ ಜೆಟ್ ಮೂಲಕ ಭಾರತದ ಮೇಲೆ ದಾಳಿ ನಡೆಸಿದೆ. ಜಮ್ಮು ಮತತು ಕಾಶ್ಮೀರ ಹಾಗೂ ರಾಜಸ್ಥಾನದ ಗಡಿ ಭಾಗದ ಮೂಲಕ ಭಾರತದ ಮೇಲೆ ದಾಳಿಗೆ ಪ್ರಯತ್ನಿಸಿದೆ. ಆದರೆ ಭಾರತ ಪಾಕಿಸ್ತಾನ ದಾಳಿಯನ್ನು ವಿಫಲಗೊಳಿಸಿದೆ. ಇಷ್ಟೇ ಅಲ್ಲ ಪಾಕಿಸ್ತಾನ ಎರಡು ಫೈಟರ್ ಜೆಟ್ ಹೊಡೆದುರುಳಿಸಿದೆ. ಈ ಪೈಕಿ ಒಂದು ಫೈಟರ್ ಜೆಟ್ ಪೈಲೆಟನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಮತ್ತೊರ್ವ ಪೈಲೆಟ್ ವಿಮಾನ ಪತನಗೊಳ್ಳುತ್ತಿದ್ದಂತೆ ಮೃತಪಟ್ಟಿರುವುದಾಗಿ ವರದಿಯಾಗಿದೆ. 

150ಕ್ಕೂ ಹೆಚ್ಚು ಉಗ್ರರ ಹತ
ಭಾರತ ನಡಸಿದ ದಾಳಿಯಲ್ಲಿ 150ಕ್ಕೂ ಪಾಕಿಸ್ತಾನಿ ಉಗ್ರರು ಹತರಾಗಿದ್ದಾರೆ. ಭಾರತ ಪಾಕಿಸ್ತಾನದ 9 ಉಗ್ರರ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಪೈಕಿ ಐದು ತಾಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದರೆ, ಮತ್ತೆ ನಾಲ್ಕು ಉಗ್ರರ ತಾಣ ಪಾಕಿಸ್ತಾನದೊಳಗಿತ್ತು. 9 ಉಗ್ರರ ತಾಣ ಧ್ವಂಸಗೊಳಿಸಿ 150ಕ್ಕೂ ಹಚ್ಚು ಉಗ್ರನ್ನು ಹತ್ಯೆ ಮಾಡಿತ್ತು. 

Breaking ಪಾಕಿಸ್ತಾನ ಫೈಟರ್ ಜೆಟ್ ಹೊಡೆದುರುಳಿಸಿ ಪೈಲೆಟ್ ವಶಕ್ಕೆ ಪಡೆದ ಭಾರತ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ