ಅಕ್ರಮವಾಗಿ ನೇಪಾಳ ಭೂಕಬಳಿಸಿದ ಚೀನಾ; ಎಚ್ಚರಿಸಿದ ಭಾರತ ಗುಪ್ತಚರ ಇಲಾಖೆ!

Published : Oct 24, 2020, 08:30 PM ISTUpdated : Oct 24, 2020, 08:56 PM IST
ಅಕ್ರಮವಾಗಿ ನೇಪಾಳ ಭೂಕಬಳಿಸಿದ ಚೀನಾ; ಎಚ್ಚರಿಸಿದ ಭಾರತ ಗುಪ್ತಚರ ಇಲಾಖೆ!

ಸಾರಾಂಶ

ರಾಜ ಮಹಾರಾಜರ ಕಾಲದಲ್ಲಿ ಇದ್ದ ರೀತಿ ಗಡಿ ವಿಸ್ತರಣೆಗೆ ಮುಂದಾಗಿರುವ ಚೀನಾ, ಭಾರತದಿಂದ ತೀವ್ರ ಪ್ರತಿರೋಧ ಎದುರಿಸಿದೆ. ಹೀಗಾಗಿ ಸದ್ಯ ಚೀನಾ ನೇಪಾಳ ಭೂಭಾಗವನ್ನು ಅಕ್ರಮವಾಗಿ ಕಬಳಿದೆ. ಇದೀಗ ಈ ಮಾಹಿತಿಯನ್ನು ಭಾರತ ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ.  

ನವದೆಹಲಿ(ಅ.24):  ಲಡಾಖ್ ಗಡಿ ವಲಯದಲ್ಲಿ ಭಾರತದ ಜೊತೆ ಕಿರಿಕಿ ಮಾಡಿದ ಚೀನಾಗೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಹೀಗಾಗಿ ಲಡಾಖ್ ಗಡಿಯಲ್ಲಿ ಕಳೆದ ಐದಾರು ತಿಂಗಳಿನಿಂದ ಚೀನಾ ಕಿರಿಕ್ ಮಾಡುತ್ತಿದೆ. ಮಾತುಕತೆಗೂ ಬಗ್ಗದ ಚೀನಾ, ಬಾಲ ಬಿಚ್ಚಲು ಹಾತೊರೆಯುತ್ತಿದೆ. ಭಾರತೀಯ ಸೇನೆಯ ಏಟಿಗೆ ಬೆದರಿದ ಚೀನಾ, ಸಾಮ್ರಾಜ್ಯ ವಿಸ್ತರಣೆಯನ್ನು ನೇಪಾಳ ಗಡಿಗೆ ಶಿಫ್ಟ್ ಮಾಡಿದೆ. ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಮಹತ್ವದ ಮಾಹಿತಿ ನೀಡಿದೆ.

 

ನೇಪಾಳ ಜಾಗ ಅತಿಕ್ರಮಿಸಿ ಚೀನಾದಿಂದ ಕಟ್ಟಡ ನಿರ್ಮಾಣ!

ಚೀನಾ ಅಕ್ರಮವಾಗಿ ನೇಪಾಳದ ಗಡಿ ಭಾಗಗಳನ್ನು ಕಬಳಿಕೆ ಮಾಡುತ್ತಿದೆ. ನೇಪಾಳ ಗಡಿಯಲ್ಲಿರುವ 7 ಜಿಲ್ಲೆಗಳನ್ನು ಚೀನಾ ಆಕ್ರಮಿಸಿಕೊಂಡಿದೆ. ಆದರೆ ಚೀನಾ ಕಮ್ಯೂನಿಸ್ಟ್ ಪಕ್ಷ ನೇಪಾಳದ ಅಕ್ರಮಕ್ಕೆ ಸಾಥ್ ನೀಡುತ್ತಿರುವುದು ಆತಂಕ ತರುತ್ತಿದೆ. ನೇಪಾಳ ಭೂ ಕಬಳಿಕೆ ಪ್ರಮಾಣ ಹೆಚ್ಚಾಗುತ್ತಿರುವುದು ಭಾರತಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

 

ಚೀನಾಕ್ಕೆ ಠಕ್ಕರ್ ನೀಡಲು ಸರ್ವ ಸಿದ್ಧತೆ, ನೇಪಾಳ-ಭೂತಾನ್ ಗಡಿ ಮೇಲೂ ಹದ್ದಿನ ಕಣ್ಣು

ಗುಪ್ತಚರ ಇಲಾಖೆ ಬಹಿರಂಗ ಪಡಿಸಿದ ಮಾಹಿತಿಯನ್ನು ಇದೀಗ ನೇಪಾಳ ಸರ್ವೆ ಡಿಪಾರ್ಟ್ಮೆಂಟ್ ಕೂಡ ಉಲ್ಲೇಖಿಸಿದೆ. ಆದರೆ ನೇಪಾಳ ಪ್ರಧಾನಿ ಒಲಿ ಶರ್ಮಾ ಚೀನಾ ಅತಿಕ್ರಮಣವನ್ನು ನಿರ್ಲಕ್ಷ್ಯಿಸಿದ್ದಾರೆ. ನೇಪಾಳದ ದೋಲಾಖಾ, ಗೂರ್ಖಾ, ದಾರ್ಚುಲಾ, ಹುಮ್ಲಾ, ಸಿಂಧೂಪಾಲ್‌ಚೌಕ್, ಸಂಖುವಾಸಭಾ, ರಸುವಾ ಗಡಿ ಜೆಲ್ಲೆಗಳನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು
ಬಾಡಿಗೆದಾರರ ಮನೆಯಿಂದ ಹೊರಹಾಕಲು ಬಂದ ಮಾಲೀಕನಿಗೆ ಆಘಾತ, ತಾಯಿ-ಇಬ್ಬರು ಮಕ್ಕಳ ಶವಪತ್ತೆ