3 ತಿಂಗಳ ಹನಿಮೂನ್‌ ಮುಗಿಸಿ ಮುಂಬೈಗೆ ಮರಳಿದ ನವಜೋಡಿ

By Kannadaprabha NewsFirst Published Jul 1, 2020, 1:41 PM IST
Highlights

3 ತಿಂಗಳ ಹನಿಮೂನ್‌ ಮುಗಿಸಿ ಮುಂಬೈ ಮರಳಿದ ನವಜೋಡಿ| ಈ ಜೋಡಿ 3 ತಿಂಗಳ ಹಿಂದೆ ವಿವಾಹದ ಬಳಿಕ ಹನಿಮೂನ್‌ಗೆಂದು ಮಾಲ್ಡೀವ್ಸ್‌ಗೆ ತೆರಳಿತ್ತು

ಮುಂಬೈ(ಜು.01): ನವಜೋಡಿಗಳು ಮದುವೆಯಾದ ತರುವಾಯ 3 ದಿನ ಅಥವಾ ಒಂದು ವಾರ ಹನಿಮೂನ್‌ಗೆ ತೆರಳುವುದು ಸಾಮಾನ್ಯ. ಆದರೆ ಮುಂಬೈ ಮೂಲದ ಜೋಡಿಯೊಂದು ಭರ್ಜರಿ 3 ತಿಂಗಳು ಹನಿಮೂನ್‌ ಮುಗಿಸಿ ಮುಂಬೈಗೆ ಮರಳಿದೆ.

ನಿಜ. ಇಂಥ ಕಂಡುಕೇಳರಿಯದ ಹನಿಮೂನ್‌ ಮುಗಿಸಿ ಮರಳಿರುವ ಜೋಡಿಯ ಹೆಸರು ರೋಹನ್‌ ಮತ್ತು ರಿಯಾ. ದುಬೈನಲ್ಲಿ ನೆಲೆಸಿರುವ ಈ ಜೋಡಿ 3 ತಿಂಗಳ ಹಿಂದೆ ವಿವಾಹದ ಬಳಿಕ ಹನಿಮೂನ್‌ಗೆಂದು ಮಾಲ್ಡೀವ್‌್ಸಗೆ ತೆರಳಿತ್ತು. ಆದರೆ ಅಲ್ಲಿಂದ ಮರಳಬೇಕು ಅನ್ನುವಷ್ಟರಲ್ಲಿ ಭಾರತದಲ್ಲಿ ಕರೋನಾ ಲಾಕ್‌ಡೌನ್‌ ಆರಂಭವಾಯಿತು.

ವಿದೇಶದಲ್ಲಿ ಮಧುಚಂದ್ರ, ಚಂದನ್-ನಿವೇದಿತಾಗೆ ಅವರೇ ಇಂದ್ರ ಅವರೇ ಚಂದ್ರ!

ಬಳಿಕ ಭಾರತ ವಿವಿಧ ದೇಶಗಳಿಂದ ಭಾರತೀಯರನ್ನು ಕರೆತಂದಿತಾದರೂ, ರಿಯಾ ಕೆನಡಾ ಪಾಸ್‌ಪೋರ್ಟ್‌ ಹೊಂದಿರುವ ಮಹಿಳೆಯಾಗಿರುವ ಕಾರಣ, ದಂಪತಿಗಳನ್ನು ವಂದೇಭಾರತ್‌ ಯೋಜನೆಯಡಿ ವಿಮಾನದಲ್ಲಿ ಕರೆತರಲಾಗಿರಲಿಲ್ಲ.

ಹೀಗಾಗಿ ಜೋಡಿ 3 ತಿಂಗಳಿನಿಂದ ಮಾಲ್ಡೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದೀಗ ವಿಶೇಷ ವಿಮಾನದಲ್ಲಿ ಆಗಮಿಸಲು ಭಾರತೀಯ ಮೂಲದವರಿಗೆ ಅವಕಾಶ ಕೊಟ್ಟಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಂಪತಿ ಮುಂಬೈಗೆ ಆಗಮಿಸಿದ್ದಾರೆ. ಇನ್ನು ಮುಂಬೈಲ್ಲಿ 14 ದಿನಗಳ ಕ್ವಾರಂಟೈನ್‌ ಬಳಿಕ ಜೋಡಿ ಮತ್ತೆ ದುಬೈಗೆ ತೆರಳುವ ಆಶಯದಲ್ಲಿದೆ.

click me!