ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಬಾಂಗ್ಲಾದಿಂದ ಏರ್‌ಲಿಫ್ಟ್, ಮೋದಿಗೆ ಧನ್ಯವಾದ ಹೇಳಿದ ಶೋಯೆಬ್ ತಂದೆ!

Published : Jun 13, 2022, 07:21 PM IST
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಬಾಂಗ್ಲಾದಿಂದ ಏರ್‌ಲಿಫ್ಟ್, ಮೋದಿಗೆ ಧನ್ಯವಾದ ಹೇಳಿದ ಶೋಯೆಬ್ ತಂದೆ!

ಸಾರಾಂಶ

ಢಾಕಾದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡ ಎಂಬಿಬಿಎಸ್ ವಿದ್ಯಾರ್ಥಿ ಜಮ್ಮ ಕಾಶ್ಮೀರದ ವಿದ್ಯಾರ್ಥಿಯ ಏರ್‌ಲಿಫ್ಟ್ ಮಾಡಿದ ಭಾರತ ಸರ್ಕಾರ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಪ್ರಧಾನಿ ಮೋದಿ ಧನ್ಯವಾದ

ನವದೆಹಲಿ(ಜೂ.13): ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡ ಜಮ್ಮು ಮತ್ತು ಕಾಶ್ಮೀರದ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಶೋಯೆಬ್ ಲೋನ್‌ನನ್ನು ಭಾರತ ಸರ್ಕಾರ ಏರ್‌ಲಿಫ್ಟ್ ಮಾಡಿದೆ. ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಪ್ರಧಾನಿ ನರೇಂದ್ರ ಹಾಗೂ ಸರ್ಕಾರದ ಕಾರ್ಯಕ್ಕೆ ಶೋಯೆಬ್ ಲೋನ್ ತಂದೆ ಭಾವುಕರಾಗಿದ್ದಾರೆ. ಇದೇ ವೇಳೆ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಢಾಕಾದಲ್ಲಿ ನಾವು ಆತಂಕಕ್ಕೆ ಒಳಗಾಗಿದ್ದೇವು. ಪುತ್ರನಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿತ್ತು. ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದಾರೆ. ನಮ್ಮಂತ ಜನಸಾಮಾನ್ಯರ ಮನವಿಗೆ ತಕ್ಷಣ ಸ್ಪಂದಿಸಿದ್ದಾರೆ. ಇದರಿಂದ ಪುತ್ರನನ್ನು ಢಾಕಾದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ಏಮ್ಸ್ ಆಸ್ಪತ್ರೆಯಲ್ಲಿ ಶೋಯೆಬ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಪುತ್ರನ ಚಿಕಿತ್ಸೆಗೆ, ಢಾಕಾದಿಂದ ಭಾರತಕ್ಕೆ ಕರೆತರಲು ಸಹಕರಿಸಿದ ಪ್ರಧಾನಿ ಮೋದಿಗೆ ಧನ್ಯವಾದ. ಇಂತಹ ಪ್ರಧಾನಿ ಇರುವಾಗ ಯಾರೂ ಆತಂಕ ಪಡಬೇಕಿಲ್ಲ. ನಿಮ್ಮಲ್ಲರ ಮನವಿಗೆ ಮೋದಿ ಸ್ಪಂದಿಸುತ್ತಾರೆ ಎಂದು ಶೋಯೆಬ್ ತಂದೆ ಮೊಹಮ್ಮದ್ ಅಸ್ಕಾನ್ ಲೋನ್ ಹೇಳಿದ್ದಾರೆ.

ಮನೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಸ್ಥಾಪಿಸಿದ ಮೋದಿ ಅಭಿಮಾನಿ!

ಜಮ್ಮು ಮತ್ತು ಕಾಶ್ಮೀರದ ಶೋಯೆಬ್ ಲೋನ್ ಢಾಕಾದಲ್ಲಿ ಎಂಬಿಬಿಎಸ್ ಓದುತ್ತಿದ್ದ. ಭಾರತಕ್ಕೆ ವಾಪಸಾಗಲು ಢಾಕಾಗೆ ಆಗಮಿಸುತ್ತಿದ್ದ ವೇಳೆ ಅಪಘಾತವಾಗಿತ್ತು. ತೀವ್ರವಾಗಿ ಗಾಯಗೊಂಡ ಶೋಯೆಬ್‌ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಮೊಹಮ್ಮದ್ ಅಸ್ಕಾನ್ ಲೋನ್ ಬಾಂಗ್ಲಾದೇಶಕ್ಕೆ ತೆರಳಲು ಮುಂದಾದರು. ಆದರೆ ವೀಸಾ ಸಮಸ್ಯೆಯಿಂದ ವಿಳಂಬವಾಗಿತ್ತು. ಬಾಂಗ್ಲಾದೇಶ ತಲುಪಿದ ಶೋಯೆಬ್ ತಂದೆಗೆ ದಿಕ್ಕೇ ತೋಚದಾಗಿದೆ. ಕಾರಣ ಅಲ್ಲಿನ ಭಾಷೆ, ಅಲ್ಲಿನ ರೂಪಾಯಿಂದ ಹೈರಾಣಾಗಿದ್ದರು.

ಪುತ್ರನಿಗೆ ಪ್ರಥಮ ಚಿಕಿತ್ಸೆ ಹೊರತು ಪಡಿಸಿದರೆ ಇನ್ಯಾವುದೇ ಚಿಕಿತ್ಸೆಯನ್ನು ಆಸ್ಪತ್ರೆ ನೀಡಿರಲಿಲ್ಲ. ಇದರಿಂದ ಶೋಯೆಬ್ ತಂದೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು. ಇಷ್ಟೇ ಅಲ್ಲ 5 ದಿನದ ಚಿಕಿತ್ಸೆಗೆ 12 ಲಕ್ಷ ರೂಪಾಯಿ ಬಿಲ್ ಮಾಡಲಾಗಿತ್ತು. ಆತಂಕಗೊಂಡ ಶೋಯೆಬ್ ತಂದೆ ಇದೇ ವೇಳೆ ರಜೌರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾಗೆ ಕರೆ ಮಾಡಿದ ಶೋಯೆಬ್ ತಂದೆ ಮಾಹಿತಿ ನೀಡಿದ್ದಾರೆ. 

 

 

ಇತ್ತ ರವೀಂದ್ರ ರೈನಾ ತಕ್ಷಣವೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಹೆ ಮಾಹಿತಿ ನೀಡಿದ್ದಾರೆ. 

'ಮೋದಿ ಪ್ರಧಾನಿಯಾದ ಮೇಲೆ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಪರ್ವ'

ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಕೇಂದ್ರ ಸರ್ಕಾರ ಎಲ್ಲಾ ಪ್ರಕ್ರಿಯೆಯನ್ನು ಕ್ಷಣಾರ್ಧದಲ್ಲೇ ಮುಗಿಸಿತ್ತು. ಆಸ್ಪತ್ರೆ ಬಿಲ್ ಪಾವತಿಸಿ ಬಳಿಕ  ಶೋಯೆಬ್‌ನನ್ನು ಏರ್‌ಲಿಫ್ಟ್ ಮೂಲಕ ದೆಹಲಿಗೆ ಕರೆ ತರಲಾಯಿತು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ ಶೋಯೆಬ್‌ಗಿ ಚಿಕಿಕ್ಸೆ ನೀಡಲಾಗುತ್ತಿದೆ. ಪುತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.  ಶೋಯೆಬ್ ತಂದೆ ನಿರಾಳಾಗಿದ್ದಾರೆ.

ಶೋಯೆಬ್ ಹಾಗೂ ಇಬ್ಬರು ಗೆಳೆಯರು ಕಾಲೇಜಿನಿಂದ ಢಾಕಾಗೆ ಆಗಮಿಸಿದ ವೇಳೆ ಅಪಘಾತ ಸಂಭವಿಸಿದೆ. ಶೋಯೆಬ್ ಜೊತೆಗಿದ್ದ ಇಬ್ಬರು ಗೆಳೆಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶೋಯೆಬ್ ಗಂಭೀರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ